ಸಂವಿಧಾನದ ಹಕ್ಕು ಪಡೆಯಲು ಕ್ರೈಸ್ತ ಸಮುದಾಯ ಸಂಘಟಿತರಾಗಲಿ
ಚನ್ನಪಟ್ಟಣ: ಈ ದೇಶದ ಪ್ರಜೆಗಳಾಗಿ ಭಾರತದ ಸಂವಿಧಾನವನ್ನು ಗೌರವಿಸಿ ಸಂವಿಧಾನದ ಹಕ್ಕುಗಳನ್ನು ಪಡೆಯಲು ಕ್ರೈಸ್ತ ಸಮುದಾಯ ಸಂಘಟಿತರಾಗಬೇಕು ಎಂದು ಕರ್ನಾಟಕ ಕ್ರೈಸ್ತರ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಭಾಸ್ಕರ್ಬಾಬು ಕರೆ ನೀಡಿದರು.
ಕರ್ನಾಟಕ ಕ್ರೈಸ್ತರ ರಕ್ಷಣಾ ವೇದಿಕೆ ಹಾಗೂ ವರ್ಷಿಪರ್ಸ್ ವಾರಿಯರ್ಸ್ ವರ್ಕರ್ಸ್ ವತಿಯಿಂದ ನಗರದ ಸರ್ಕಾರಿ ಬಾಲಕರ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ಯಶಸ್ವಿ ಹಾಗೂ ಅರ್ಥಪೂರ್ಣವಾಗಿ ಜರುಗಿದ ಯೇಸುವಿನ ಜನ್ಮ ಉತ್ಸವ ಮತ್ತು ಸಂಗೀತ ಕಾರ್ಯಕ್ರಮದಲ್ಲಿ ಭಾಗವಹಿಸಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ನಗರಸಭಾ ಸದಸ್ಯ ಎಂ.ರಾಮು, ಕಾಂಗ್ರೆಸ್ ಸಮಿತಿಯ ಪ್ರಧಾನ ಕಾರ್ಯದರ್ಶಿ ಪಿ.ಡಿ.ರಾಜು, ಡಿ.ಎಸ್.ಎಸ್. ಸಂಚಾಲಕ ವೆಂಕಟೇಶ್, ದಲಿತ ಮುಖಂಡ ಸಿ. ವೆಂಕಟಾಚಲಯ್ಯ, ಶಿವಪ್ಪ, ಎಂ.ವಿ.ಶ್ರೀನಿವಾಸ್, ಪತ್ರಕರ್ತ ಕೆ. ವಿಜೇಂದ್ರರಾವ್, ಲಕ್ಷ್ಮೀಪತಿ, ಪ್ರಭು, ಲಿಟಲ್ ಪ್ರಿಟಿ ಸ್ಕೂಲ್ನ ಪ್ರೇಮ್ ಮುಂತಾದವರನ್ನು ವೇದಿಕೆ ವತಿಯಿಂದ ಸನ್ಮಾನಿಸಲಾಯಿತು.
ಸಹರ ಮಿನಿಸ್ಟ್ರೀ ಪುರಸ್ಕೃತರಾದ ಐಜಾಕ್ ಥಾಮಸ್ ಮತ್ತು ತಂಡದವರು ಸಂಗೀತ ಕಾರ್ಯಕ್ರಮದ ಮೂಲಕ ಯೇಸುವಿನ ದೈವ ಸಂದೇಶವನ್ನ ನೀಡುವ ಮೂಲಕ ನೆರೆದಿದ್ದ ಅಸಂಖ್ಯಾತ ಪ್ರೇಕ್ಷಕರ ಮನಸ್ಸನ್ನು ಮುದಗೊಳಿಸಿದರು.
ಕಾರ್ಯಕ್ರಮದಲ್ಲಿ ಕರ್ನಾಟಕ ಕ್ರೈಸ್ತರ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಫಾಸ್ಟರ್ ಅಶೋಕ್ಕುಮಾರ್, ಉಪಾಧ್ಯಕ್ಷ ಫಾಸ್ಟರ್ ಟಿ. ಜಾನ್, ಕಾರ್ಯದರ್ಶಿ ಫಾಸ್ಟರ್ ವಿಕ್ಟರ್ ಬರ್ನಾಬಸ್, ಸಂಘಟನಾ ಕಾರ್ಯದರ್ಶಿ ಫಾಸ್ಟರ್ ರಾಜು, ಖಜಾಂಚಿ ಫಾಸ್ಟರ್ ಪ್ರವೀಣ್ ಕುಮಾರ್, ನಿರ್ದೇಶಕ ಫಾಸ್ಟರ್ ನಿತ್ಯನ್, ಯುವ ಘಟಕದ ಅಧ್ಯಕ್ಷ ಆನಂದ್ ಹಾಗೂ ಪದಾಧಿಕಾರಿಗಳಾದ ಬಾಬು, ಜೀವನ್, ಎಂ.ವಿ. ಶ್ರೀನಿವಾಸ್, ರಾಜು, ಸ್ಟೀಫನ್, ಯೇಸುದಾಸ್, ಶಶಿ, ಅಶೋಕ್ ಇತರ ಸದಸ್ಯರಗಳು ಪಾಲ್ಗೊಂಡಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

