ಪಿಯು ಕಾಲೇಜಿನ ಮೂಲಭೂತ ಸಮಸ್ಯೆಗಳ ನಿವಾರಣೆಗೆ ಶಾಸಕರ ತಥಾಸ್ತು
ಸೂಲಿಬೆಲೆ: ಇಲ್ಲಿನ ಸರ್ಕಾರಿ ಸ್ವತಂತ್ರ ಪದವಿ ಪೂರ್ವ ಕಾಲೇಜಿನಲ್ಲಿ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಕೊರತೆಯಾಗಿದ್ದ ಸುಮಾರು ರು.15 ರಿಂದ 20 ಲಕ್ಷ ವೆಚ್ಚದಷ್ಟು ನಾನಾ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ
ಎನ್. ನಾಗರಾಜ್ ಬುಧವಾರ ತಥಾಸ್ತು ಎಂದಿದ್ದು, ಹೇಳಿರುವ ಎಲ್ಲ ಕೆಲಸಗಳನ್ನು ಇನ್ನೂ 60 ದಿನಗಳಲ್ಲಿ ಮುಗಿಸುವುದಾಗಿ ಭರವಸೆ ನೀಡಿದ್ದಾರೆ.
ಸೂಲಿಬೆಲೆ ಸರ್ಕಾರಿ ಸ್ವತಂತ್ರ ಪದವಿ ಪೂರ್ವ ಕಾಲೇಜಿನಲ್ಲಿ ಬುಧವಾರ ನಡೆದ ಕಾಲೇಜು ಅಭಿವೃದ್ಧಿ ಸಮಿತಿ ಪ್ರಥಮ ಸಭೆಯಲ್ಲಿ ಪಾಲ್ಗೊಂಡಿದ್ದ ಶಾಸಕರು, ಕಾಲೇಜಿನ ಶೈಕ್ಷಣಿಕ ಪ್ರಗತಿಗೆ
ಕೊರತೆಯಾಗಿರುವ ನಾನಾ ಮೂಲಭೂತ ಸಮಸ್ಯೆಗಳ ಬಗ್ಗೆ ಚರ್ಚಿಸಿದರು. ಉಪನ್ಯಾಸಕರಿಂದ ಸಮಸ್ಯೆಗಳನ್ನು ಆಲಿಸಿದ ಶಾಸಕರು, ಸೌಲಭ್ಯಗಳಲ್ಲವನ್ನು ಕಲ್ಪಿಸಿಕೊಡಲಾಗವುದು. ಆದರೆ, ಕಾಲೇಜಿನ ಫಲಿತಾಂಶ ಪ್ರಗತಿ ಕಾಣಬೇಕು. ವಿದ್ಯಾರ್ಥಿಗಳ ಪಾಠ, ಪ್ರವಚನಗಳಿಗೆ ಅಗತ್ಯವಾಗಿರುವ 3 ಕೊಠಡಿಗಳನ್ನ ಕಟ್ಟಲು ಶೀಘ್ರ ಗುದ್ದಲಿ ಪೂಜೆ ನಡೆಸಲಾಗುವುದು.
ವಿಜ್ಞಾನ ವಿಭಾಗದ ಲ್ಯಾಬ್ಗೆ ರು.80 ಸಾವಿರ ವೆಚ್ಚದಲ್ಲಿ ವಸ್ತುಗಳನ್ನು ಖರೀದಿಸಿ ಕೊಡಲಾಗುವುದು. ವಿದ್ಯಾರ್ಥಿಗಳ ವಾಹನ ಪಾರ್ಕಿಂಗ್ ನಿರ್ಮಾಣಕ್ಕೆ ಕ್ರಿಯಾ ಯೋಜನೆ , ಶೌಚಾಲಯಕ್ಕೆ ರು.75 ಸಾವಿರ, ಕಾಲೇಜಿನ ಎಲ್ಲ ವಿದ್ಯಾರ್ಥಿಗಳು ಒಂದೇ ರೀತಿಯ ಯೂನಿಫಾರಂ ತೊಟ್ಟು ಬರುವಂತ ವ್ಯವಸ್ಥೆಯನ್ನು ಮುಂದಿನ ಶೈಕ್ಷಣಿಕ ವರ್ಷದಿಂದ ಜಾರಿಗೆ ಉದ್ದೇಶದಿಂದ ಪ್ರತಿ ವಿದ್ಯಾರ್ಥಿಗೆ ರು.500ರಂತೆ ಎರಡುವರೆ ಲಕ್ಷ ಹಣವನ್ನು ಸಮವಸ್ತ್ರಗಳಿಗಾಗಿ ನೀಡುತ್ತೇನೆ. 30 ಡೆಸ್ಕು ಹಾಗೂ 1500 ನೋಟ್ ಪುಸ್ತಕ ನೀಡಲಾಗುವುದು.
ಕಾಲೇಜು ರಸ್ತೆ ಅಭಿವೃದ್ಧಿ, ಅರೆಕಾಲಿಕ ಉಪನ್ಯಾಸಕರು ಹಾಗೂ ಗ್ರೂಪ್ ಡಿ.ನೌಕರರಿಗೆ ಅಗತ್ಯ ಸಂಬಳ ಹೆಚ್ಚಳದ ಭರವಸೆಯನ್ನು ನೀಡಿದ ಶಾಸಕರು, ಕೂಡಲೇ ಈ ಕೆಲಸಗಳು ಪ್ರಾರಂಭವಾಗಬೇಕು. ರು.15 ರಿಂದ 20 ಲಕ್ಷ ವೆಚ್ಚದಷ್ಟು ಕೆಲಸಗಳನ್ನು ಕಾಲೇಜಿನ ಪ್ರಗತಿಗೆ ನೀಡುತ್ತಿದ್ದು, ವಿದ್ಯಾರ್ಥಿಗಳು ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿ. ಪ್ರಸಾದ್, ಪ್ರಾಂಶುಪಾಲ ಚಂದ್ರಶೇಖರ್, ಮುಖಂಡ ಮರುವೆ ಕೃಷ್ಣಪ್ಪ, ಖಲಂದರ್, ಗ್ರಾಪಂ ಸದಸ್ಯರಾದ ರಾಘವೇಂದ್ರ, ರಮೇಶ್, ಲಕ್ಷ್ಮಣ್, ಮಹೇಶ್, ಮಂಜುನಾಥ್ ಇನ್ನೂ ಮುಂತಾದವರು ಹಾಜರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

