ದೇವನಹಳ್ಳಿ ಲಯನ್ಸ್ಸಂಸ್ಥೆಯಲ್ಲಿ 145ನೇ ನೇತ್ರ ಚಿಕಿತ್ಸಾ ಶಿಬಿರ
ದೇವನಹಳ್ಳಿ: ಇಲ್ಲಿನ ಲಯನ್ಸ್ ಮತ್ತು ಲಯನೆಸ್ ಸಂಸ್ಥೆ ಹಾಗೂ ಲಯನ್ಸ್ ಸೇವಾ ಪ್ರತಿಷ್ಠಾನ ಹಾಗೂ ಶ್ರೀ ಕೃಷ್ಣದೇವರಾಯ ದಂತ ವೈದ್ಯಕೀಯ ಮಹಾ ವಿದ್ಯಾಲಯ, ಬೆಂಗಳೂರು ಪಶ್ಚಿಮ ಲಯನ್ಸ್ ಕಣ್ಣಾಸ್ಪತ್ರೆ ಸಂಯುಕ್ತ ಆಶ್ರಯದಲ್ಲಿ ನೇತ್ರ ಚಿಕಿತ್ಸಾ ಉಚಿತ ಶಿಬಿರ ಹಾಗೂ ದಂತ ಚಿಕಿತ್ಸಾ ಶಿಬಿರವನ್ನು ಸಂಯುಕ್ತವಾಗಿ ಗುರುವಾರ ಆಯೋಜಿಸಿದ್ದರು.
ಸಮಾರಂಭದ ಉದ್ಘಾಟನೆಯನ್ನು ವಿಧಾನಪರಿಷತ್ ಅಧೀನ ಕಾರ್ಯದರ್ಶಿ ಎಂ. ಶಾಂತಪ್ಪ ನೆರವೇರಿಸಿ ಇಲ್ಲಿನ ಲಯನ್ಸ್ ಸಂಸ್ಥೆಯವರು ದಾನಿಗಳ ಸಹಕಾರದಿಂದ ನಿರಂತರವಾಗಿ ಗ್ರಾಮೀಣ ಜನರಿಗಾಗಿ ಆರೋಗ್ಯ ತಪಾಸಣಾ ಶಿಬಿರಗಳನ್ನು ಆಯೋಜಿಸುತ್ತಿರುವುದು ಅಭಿನಂದನೀಯ ಎಂದರು. ಇಂದಿನ ದಿನಗಳಲ್ಲಿ ಆರೋಗ್ಯ ತಪಾಸಣೆಗಾಗಿ ವೈದ್ಯರ ಭೇಟಿಯೇ ಕಷ್ಟವಾಗಿರುತ್ತದೆ. ಅಲ್ಲದೆ ದುಬಾರಿ ವೆಚ್ಚ ಭರಿಸಬೇಕಾಗುತ್ತದೆ. ಆದ್ದರಿಂದ ನಿಮ್ಮ ಮನೆಯ ಬಾಗಿಲಿನಲ್ಲೇ ಇಂತಹ ಸೌಲಭ್ಯ ಇರುವಾಗ ಎಲ್ಲರೂ ಬಳಸಿಕೊಳ್ಳಬೇಕು ಎಂದು ತಿಳಿಸಿ ಸಂಘದ ಅಧ್ಯಕ್ಷ ಆರ್. ನಾರಾಜಯ್ಯ ಅವರಿಗೆ ಐದು ಸಾವಿರ ರು.ಗಳ ದೇಣಿಗೆ ನೀಡಿದರು.
ಇದೇ ಸಂದರ್ಭದಲ್ಲಿ ಇಲ್ಲಿನ ಮದ್ದಯ್ಯ ಕುಟುಂಬದ ಎಂ.ಎನ್. ಸತೀಶ್ ಮಾತನಾಡಿ ಲಯನ್ಸ್
ಸಂಸ್ಥೆಯವರ ಸೇವಾಕಾರ್ಯ ನಿರಂತರವಾಗಿ ನಡೆಯಬೇಕಾದರೆ ದಾನಿಗಳ ಸಹಕಾರ ಅಗತ್ಯ ಎಂದರಲ್ಲದೆ ಸಂಸ್ಥೆಯ ಎಲ್ಲ ಸದಸ್ಯರನ್ನು ಅಭಿನಂದಿಸಿದರು.
ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಆರ್. ನಾಗರಾಜಯ್ಯ ವಹಿಸಿದ್ದರು. ಮಾಜಿ ಅಧ್ಯಕ್ಷರಾದ ವೈ.ಸಿ. ಕೃಪಾಕರ್ ಹಾಗೂ ಸಿ.ಭಾಸ್ಕರ್ ಮಾತನಾಡಿ ಈ ಶಿಬಿರದಲ್ಲಿ ಪ್ರಯೋಜನ ಪಡೆದವರು ಇತರ ರೋಗಿಗಳಿಗೆ ವಿಷಯ ತಿಳಿಸಿ ಅವರನ್ನು ಇಲ್ಲಿಗೆ ಕಳುಹಿಸುವುದೇ ನೀವು ನಮಗೆ ಮಾಡುವ ಉಪಕಾರ ಎಂದರು. ಪಿ.ವಿಜಯಕುಮಾರ್ ವಂದನೆ ಅರ್ಪಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

