ಬೆಂಗಳೂರು ಗ್ರಾಮಾಂತರ

ದೇವನಹಳ್ಳಿ ಮಿನಿ ವಿಧಾನಸೌಧಕ್ಕೆ ಇರಾಕ್ ಗಣ್ಯರ ಭೇಟಿ

Published On :

ದೇವನಹಳ್ಳಿ: ಇರಾಕ್‌ನ ಎಂಟು ಮಂದಿ ಡೆಪ್ಯೂಟಿ ಗವರ್ನರ್ ಹಾಗೂ ಇತರ ಅಧಿಕಾರಿಗಳು ಸೇರಿ ಒಟ್ಟು 14 ಮಂದಿ ಇಲ್ಲಿನ ಮಿನಿ ವಿಧಾನಸೌಧಕ್ಕೆ ಗುರುವಾರ ಆಗಮಿಸಿ ತಾಲೂಕು ಆಡಳಿತದ ಬಗ್ಗೆ ತಹಸೀಲ್ದಾರರಿಂದ ಮಾಹಿತಿ ಪಡೆದರು.
ಮುಖ್ಯವಾಗಿ ಭೂಮಿ ಕೇಂದ್ರದಲ್ಲಿ ಪಹಣಿ ಮಿಟೇಷನ್ ಅಲ್ಲದೆ ಇತರ ದಾಖಲೆ ಪತ್ರಗಳು ಸಾರ್ವಜನಿಕರಿಗೆ ದೊರೆಯುವ ಬಗ್ಗೆ ನೋಂದಣಿ ಕಚೇರಿಯಲ್ಲಿ ಸ್ವತ್ತುಗಳ ಮಾರಾಟ ಮಾಡಬೇಕಾದಾಗ ನೋಂದಣಿ ಪ್ರಕ್ರಿಯೆ ಹೇಗೆ ನಡೆಯುತ್ತದೆ.
  ಅಲ್ಲದೆ ಅಟಲ್ ಜಿ ಜನಸ್ನೇಹಿ ಕೇಂದ್ರದಲ್ಲಿ ದೊರೆಯುವ ಸೇವೆಗಳ ಬಗ್ಗೆ ಸ್ಥಳದಲ್ಲಿಯೇ ಸಾರ್ವಜನಿಕರಿಗೆ ದೊರೆಯುತ್ತಿರುವ ಸೌಲಭ್ಯಗಳು ಬಗ್ಗೆ ಖುದ್ದಾಗಿ ವೀಕ್ಷಣೆ ಮಾಡಿದರಲ್ಲದೆ ಅಧಿಕೃತ ಮಾಹಿತಿಯನ್ನು ತಹಸೀಲ್ದಾರ್ ಡಾ.ವೆಂಕಟರಾಜು ನೀಡಿದರು. ಪ್ರತಿಯೊಂದು ವ್ಯವಹಾರಗಳನ್ನು ಕಂಪ್ಯೂಟರೀಕರಣವಾಗಿರುವುದರಿಂದ ಸಾರ್ವಜನಿಕರಿಗೆ ಶೀಘ್ರ ದಾಖಲಾತಿಗಳು ದೊರೆಯುತ್ತಿವೆ ಎಂದರು.  
ಇರಾಕ್ ದೇಶದ ಡೆಪ್ಯೂಟಿ ಗವರ್ನರ್‌ಗಳಾದ ಅಮೀನ್ ಅಬ್ರಹಾಂ ಫಾನಿಜ್, ಸಲೆ ಇಸ್ಮಾಯಿಲ್ ಇಬ್ರಾಹಿಂ, ರಷೀದ್ ಇದಾನ್ ಪ್ರಾವೈ, ನದೀಮ್ ಗಟಿಯ ರೇಸಿನ್, ನಸರ್ ಅಬ್ ಜೈದ್  ಸಲ್ಮಾನ್, ವಿಸಂ ಹುಸೇನ್ ಮಹಮದ್, ಅರಬ್ ಖಾದಿಮ್ ಜಾಫರ್ ಹಾಗೂ ಮೈಥಮ್ ಮಾಥನ್ ಅಬೀದ್ ಆಲಿ ಹಾಗೂ ಇತರ ಅಧಿಕಾರಿಗಳು ಆಗಮಿಸಿ ತಾಲೂಕು ಆಡಳಿತದ ಕಾರ್ಯವೈಖರಿಯ ಕುರಿತು ಮಾಹಿತಿ ಪಡೆದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.