ಮೊರಾರ್ಜಿ ಶಾಲೆ: ಅವ್ಯವಸ್ಥೆ ತಾಂಡವ
-ಸು.ನಾ.ನಂದಕುಮಾರ್
ಕ.ಪ್ರ.ವಾರ್ತೆಚನ್ನಪಟ್ಟಣಡಿ.21
ಆರ್ಥಿಕ ಮತ್ತು ಸಾಮಾಜಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ನೆರವಾಗುವ ಉದ್ದೇಶದಿಂದ ಆರಂಭ ಗೊಂಡಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆ ಅವ್ಯವಸ್ಥೆಯ ಆಗರವಾಗಿದೆ.
ಎಲೇಕೇರಿ ಗ್ರಾಮದ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ವಿದ್ಯಾರ್ಥಿಗಳು ಕಲುಷಿತ ಆಹಾರ ಸೇವನೆಯಿಂದ ಅಸ್ವಸ್ಥಗೊಂಡ ಹಿನ್ನೆಲೆಯಲ್ಲಿ ಇಲ್ಲಿನ ಹಾಸ್ಟೆಲ್ ಅವ್ಯವಸ್ಥೆ ಒಂದೊಂದಾಗಿ ಅನಾವರಣ ಗೊಳ್ಳುತ್ತಿದ್ದು, ಮೊರಾರ್ಜಿ ದೇಸಾಯಿ ಹಾಸ್ಟೆಲ್ ವಿದ್ಯಾರ್ಥಿಗಳ ಪಾಲಿನ ನರಕವಾಗಿ ಪರಿಣಮಿಸಿದೆ.
ದನದ ಕೊಟ್ಟಿಗೆಗೆ ಅಧಿಕ ಬಾಡಿಗೆ: ದನದ ಕೊಟ್ಟಿಗೆಯಂತಿರುವ ಎಲೇಕೇರಿ ಗ್ರಾಮದ ಮೊರಾರ್ಜಿದೇಸಾಯಿ ವಸತಿ ಶಾಲೆಯ ಕಟ್ಟಡಕ್ಕೆ ಪ್ರತಿ ತಿಂಗಳಿಗಳೂ ಒಂದು 80 ಸಾವಿರ ರು. ಬಾಡಿಗೆ ನೀಡುತ್ತಿದ್ದು. ದುಬಾರಿ ಬಾಡಿಗೆ ನೀಡುತ್ತಿರುವ ಈ ಕಟ್ಟಡದಲ್ಲಿ ಯಾವುದೇ ಮೂಲಭೂತ ಸೌಕರ್ಯ ಇಲ್ಲವಾಗಿದೆ.
190 ಮಂದಿ ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರಿರುವ ಈ ವಸತಿಶಾಲೆಯಲ್ಲಿ ಇಷ್ಟೊಂದು ಮಕ್ಕಳಿಗೆ ಇರಬೇಕಾದ ಮೂಲಭೂತ ಸೌಲಭ್ಯ ಇಲ್ಲವಾಗಿದೆ. ವಿದ್ಯಾರ್ಥಿನಿಯರು ಮಲಗುವ ಕೊಠಡಿ ದನದ ಕೊಟ್ಟಿಗೆಗಿಂತ ಕಡೆಯಾಗಿದ್ದು ಕಿರಿದಾದ ಜಾಗದಲ್ಲಿ ಮಕ್ಕಳು ಸಂಕಷ್ಟದಲ್ಲಿ ಮಲಗುವಂತಾಗಿದೆ.
ಕೆಲ ಲಾಬಿಗೆ ಮಣಿದು ವಿಪರೀತ ಬಾಡಿಗೆ ನೀಡುವ ಇಲಾಖೆ ಮಕ್ಕಳಿಗೆ ಕನಿಷ್ಠ ಮೂಲ ಸೌಕರ್ಯ ಕಲ್ಪಿಸಲು ಮನಸ್ಸು ಮಾಡಿಲ್ಲ. ಕಟ್ಟಡದ ಕೆಲ ಭಾಗ ಶಿಥಿಲಗೊಂಡಿದ್ದು ಯಾವಾಗ ಕಟ್ಟಡ ಕುಸಿದು ಬೀಳುತ್ತದೋ ಎಂಬ ಆತಂಕದಲ್ಲಿ ವಿದ್ಯಾರ್ಥಿಗಳು ದಿನದೂಡುವಂತಗಿದೆ. ಈ ಬಗ್ಗೆ ಇಲಾಖೆಯ ಹಿರಿಯ ಅಧಿಕಾರಿಗಳು ಗಮನಹರಿಸುತ್ತಿಲ್ಲ.
ಕುಡಿಯಲು ಅಶುದ್ಧ ನೀರು: ವಸತಿ ಶಾಲೆಗೆ ನೀರು ಪೂರೈಕೆ ಮಾಡುವ ಕೊಳವೆ ಬಾವಿಯ ಪೈಪುಗಳು ಒಡೆದು ಹೋಗಿದ್ದು ಇದರಿಂದಾಗಿ ನೀರು ಪೂರೈಕೆಯಾಗುವಾಗ ಸೋರುವ ನೀರು ಗುಂಡಿಯಲ್ಲಿ ನಿಲ್ಲುತ್ತಿದ್ದು, ನೀರು ನಿಂತಾಗ ಕಲುಷಿತಗೊಳ್ಳುವ ನೀರು ಮಕ್ಕಳ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಲಿದೆ. ಕೊಳವೆ ಬಾವಿಯಿಂದ ಬರುವ ನೀರು ಅಶುದ್ಧವೆನಿಸಿದ್ದರೆ, ವಸತಿಶಾಲೆಯ ಅಡುಗೆ ಕೋಣೆಯಲ್ಲಿ ಇರಿಸಿರುವ ನೀರು ಸಂಗ್ರಹಿಸುವ ಪ್ಲಾಸ್ಟಿಕ್ ಡ್ರಮ್ ಅನ್ನು ಸಕಾಲದಲ್ಲಿ ಶುಚಿಗೊಳಿಸದಿದ್ದು ಇದು ಮಕ್ಕಳ ಆರೋಗ್ಯದ ಮೇಲೆ ಸಾಕಷ್ಟು ಗಂಭೀರ ಪರಿಣಾಮ ಬೀರುವ ಸಾಧ್ಯೆತೆ ಇದೆ.
ಹದಗೆಟ್ಟ ಸೋಲಾರ್: ವಸತಿ ಶಾಲೆಗೆ ಅಳವಡಿಸಲಾಗಿರುವ ಸೋಲಾರರ್ನೀರುಕಾಯಿಸುವ ಯಂತ್ರ ಸಂಪೂರ್ಣ ಹಾಳಾಗಿ ಹೋಗಿದ್ದು ಇದನ್ನು ಸರಿಪಡಿಸುವ ಕಾರ್ಯಕ್ಕೆ ಸಂಬಂಧಿಸಿ ಮಂದಿ ಗಮನಹರಿಸಿಲ್ಲ. ಇದರಿಂದಾಗಿ ಮಕ್ಕಳ ಸ್ನಾನಕ್ಕೆ ಬಿಸಿನೀರಿನ ವ್ಯವಸ್ಥೆ ಇಲ್ಲವಾಗಿದ್ದು ವಿದ್ಯಾರ್ಥಿಗಳು ಸ್ನಾನ ಮಾಡಲು ಬಿಸಿನೀರಿಗೆ ಪರದಾಡುವಂತಾಗಿದೆ.
ಅಸಮರ್ಪಕ ಆಹಾರ ವಿತರಣೆ: ಮೊರಾರ್ಜಿದೇಸಾಯಿ ಶಾಲೆಯಲ್ಲಿ ಪ್ರತಿದಿನ ಇಂತಹುದೇ ಆಹಾರ ನೀಡಬೇಕೆಂದು ನಿಯಮ ವಿದೆಯಾದರೂ ಇಲ್ಲಿನ ನಿಲಯ ಪಾಲಕರು ಈ ನಿಯಮವನ್ನು ಪಾಲಿಸುತಿಲ್ಲ. ತಮಗೆ ಬೇಕೆನಿಸಿದ ಆಹಾರವನ್ನು ಬೇಕಾಬಿಟ್ಟಿ ನೀಡುತ್ತಿದ್ದಾರೆ.
ಇದರೊಂದಿಗೆ ವಿದ್ಯಾರ್ಥಿಗಳಿಗೆ ವಾರದ ಕೆಲ ದಿನಗಳಲ್ಲಿ ನೀಡಬೇಕಾದ ಪೌಷ್ಟಿಕ ಆಹಾರದ ವಿತರಣೆಯಲ್ಲಿ ನಿಲಯ ಪಾಲಕರು ಪ್ರಮಾದ ವೆಸಗುತ್ತಿದ್ದು, ಈಬಗ್ಗೆ ಹಿರಿಯ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂಬ ಆಪಾದನೆ ದಟ್ಟವಾಗಿದೆ.
ಒಟ್ಟಾರೆ ಕಡುಬಡ ಮಕ್ಕಳಿಗೆ ಉತ್ತಮ ಸೌಲಭ್ಯ ನೀಡಿ ಅವರನ್ನು ಸುಶಿಕ್ಷಿತರನ್ನಾಗಿಸುವ ಉದ್ದೇಶದಿಂದ ಆರಂಭಿಸಿರುವ ಮುರಾರ್ಜಿದೇಸಾಯಿ ವಸತಿಶಾಲೆ ಮಕ್ಕಳ ಪಾಲಿಗೆ ನರಕವಾಗಿ ಪರಿಣಮಿಸಿದೆ. ಇನ್ನಾದರೂ ಸಂಬಂಧಿಸಿದ ಮಂದಿ ಇತ್ತ ಗಮನ ಹರಿಸಿ ಇಲ್ಲಿನ ಅವ್ಯವಸ್ಥೆಯನ್ನು ಸರಿಪಡಿಸಬೇಕಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

