ಬೆಂಗಳೂರು ಗ್ರಾಮಾಂತರ

'ಭಾರತೀಯ ಭಾಷೆಗಳಲೆಲ್ಲಾ ಕನ್ನಡವೇ ಭಿನ್ನ'

Published On :

ದೊಡ್ಡಬಳ್ಳಾಪುರ: ಕನ್ನಡ ಅತ್ಯಂತ ವೈಜ್ಞಾನಿಕತೆಯಿಂದ ರೂಪಿಸಲ್ಪಟ್ಟ ಭಾಷೆ. ಈ ನಿಟ್ಟಿನಲ್ಲಿ ಪದ ಸಂಪತ್ತು ಮತ್ತು ವೈವಿಧ್ಯತೆಯಲ್ಲಿ ಇತರ ಯಾವುದೇ ಭಾರತೀಯ ಭಾಷೆಗಳಿಗಿಂತ ಭಿನ್ನವಾಗಿದ್ದು, ಅನನ್ಯವಾಗಿ ನಿಲ್ಲುವ ಶಕ್ತಿ ಕನ್ನಡಕ್ಕಿದೆ ಎಂದು ಭಾಷಾ ವಿಜ್ಞಾನಿ ಕೈಪ ಶೇಷಾದ್ರಿ ಹೇಳಿದರು. ಇಲ್ಲಿನ ತಾಲೂಕು ವಕೀಲರ ಸಂಘದ ನೇತೃತ್ವದಲ್ಲಿ ನ್ಯಾಯಾಲಯ ಸಭಾಂಗಣದಲ್ಲಿ ನಡೆದ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ವಿಶ್ವದ ಕೆಲ ಭಾಷೆಗಳಿಗಷ್ಟೆ  ಕನ್ನಡದಷ್ಟು ಭಾಷಾ ಸೌಂದರ್ಯ ಮತ್ತು ವೈವಿಧ್ಯತೆ ಸಾಧ್ಯವಾಗಿದೆ ಎಂದ ಅವರು, ಅಕ್ಷರ ಶಾಸ್ತ್ರದಲ್ಲಿ ರೂಪಗೊಂಡಿರುವ ವೇದಗಳು, ಮಹಾಭಾರತ, ರಾಮಾಯಣಗಳು ಕನ್ನಡ ಮತ್ತು ತೆಲುಗು ಭಾಷೆಗಳ ಅಕ್ಷರಗಳಲ್ಲಿ ಕಾಣಸಿಗುತ್ತವೆ. ಹೀಗಾಗಿ ಈ ಎರಡೂ ಭಾಷೆಗಳು ಪರಿಪೂರ್ಣ ದ್ರಾವಿಡ ಭಾಷೆಗಳಾಗಿವೆ ಎಂದರು. ಕನ್ನಡ ಭಾಷೆಯ ಸಿರಿವಂತಿಕೆ ಕೇವಲ ವೈಭವೀಕರಣ ಅಲ್ಲ. ಅದೊಂದು ವೈಜ್ಞಾನಿಕ ಪ್ರಕ್ರಿಯೆ. ಭಾಷಿಕ ವಿಜ್ಞಾನ, ಭಾಷೆಯನ್ನು ಕಟ್ಟುವ ಬೆಳೆಸುವ ಮತ್ತು ಉಳಿಸುವ ಅನಿವಾರ್ಯತೆಗಳಲ್ಲಿ ವಿಭಿನ್ನ ಮಜಲುಗಳನ್ನು ದಾಟಿ ಜೀವಂತವಾಗಿರುವುದು ವಿಶೇಷ. ಬರೆಹ ಮತ್ತು ಮಾತಿನ ಪರಿಪೂರ್ಣತೆ ಕನ್ನಡಕ್ಕಿದೆ. ಹೀಗಾಗಿ ಕನ್ನಡವನ್ನು ಸ್ವತಂತ್ರ ಭಾಷೆಯಾಗಿ ಕಾಣಬಹುದಾಗಿದೆ ಎಂದರು.
ನ್ಯಾಯಾಧೀಶರಾದ ಕುಮಾರಸ್ವಾಮಿ, ನಾಗಿರೆಡ್ಡಿ, ಗಣಪತಿ ಪ್ರಶಾಂತಿ, ತಾಲೂಕು ವಕೀಲರ ಸಂಘದ ಅಧ್ಯಕ್ಷ ಬಿ.ಸಿ.ಜನಾರ್ದನ್, ಎಂ.ಕೃಷ್ಣಮೂರ್ತಿ, ಬೈರೇಗೌಡ, ಖಜಾಂಚಿ ರೇಣುಕಾಮೂರ್ತಿ ಮತ್ತು ಸಂಘದ ಪದಾಧಿಕಾರಿಗಳು, ವಕೀಲರು, ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.