ರಾಮನಗರ ಜಿಲ್ಲಾ ಉತ್ಸವಕ್ಕೆ ಆಗ್ರಹ
ರಾಮನಗರ: ಧಾರಾವಾಡ ಉತ್ಸವ, ಹಂಪಿ ಉತ್ಸವ ಸೇರಿದಂತೆ ರಾಜ್ಯದ ಮೂಲೆ-ಮೂಲೆಗಲ್ಲಿರುವ ಜಿಲ್ಲೆಗಳಲ್ಲಿ ಜಿಲ್ಲಾ ಉತ್ಸವಗಳು ನಡೆಯುತ್ತಿವೆ. ಆದರೆ, ಬೆಂಗಳೂರಿಗೆ ಕೂಗಳತೆ ದೂರದಲ್ಲಿರುವ ರಾಮನಗರ ಜಿಲ್ಲಾ ಕೇಂದ್ರದಲ್ಲಿ ಜಿಲ್ಲಾ ಉತ್ಸವ ನಡೆಸುವಂತೆ ಜಿಲ್ಲೆಯ ಅನೇಕ ಜನಪರ ಸಂಘಟನೆಗಳ ಮುಖಂಡರು ಮಾಧ್ಯಮಗಳ ಮೂಲಕ ಹತ್ತು-ಹಲವಾರು ಬಾರಿ ಒತ್ತಾಯಿಸಿದರೂ ಜಿಲ್ಲಾಡಳಿತ ಮಾತ್ರ ಗಮನ ನೀಡುತ್ತಿಲ್ಲ ಎಂದು ಭಾರತ್ ಸಾಂಸ್ಕೃತಿಕ ಕಲಾ ಕೇಂದ್ರ ಕಾರ್ಯದರ್ಶಿ, ಉಪನ್ಯಾಸಕ, ಕಲಾವಿದ ಕೆ.ಯೋಗ ರವೀಶ್ ಭಾರತ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸರ್ಕಾರ ಪ್ರತಿ ಜಿಲ್ಲೆಗಳಿಗೆ ಜಿಲ್ಲಾ ಉತ್ಸವ ನಡೆಸಲು ಸಾಕಷ್ಟು ಅನುದಾನ ಎತ್ತಿಟ್ಟಿದೆ. ಆಯೋಜನೆ ಮಾಡುವುದಷ್ಟೆ ಜಿಲ್ಲಾಡಳಿತ ಕೆಲಸ ಆದರೆ, ಅಧಿಕಾರಶಾಹಿ ವಿಳಂಬ ಧೋರಣೆಯಿಂದಾಗಿ ಅತ್ಯಂತ ಹಿಂದುಳಿದ ಜಿಲ್ಲೆ ಎಂಬ ಹಣೆಪಟ್ಟಿ ಕಟ್ಟಿಕೊಂಡಿರುವ ರಾಮನಗರ ಜಿಲ್ಲಾ ಉತ್ಸವ ನನೆಗುದಿಗೆ ಬಿದ್ದಿದೆ. ಜಿಲ್ಲೆಯು ಜಾನಪದ ಸೇರಿದಂತೆ ಸಕಲ ಕಲಾ ಪ್ರಕಾರಗಳಲ್ಲಿಯೂ ಅತ್ಯಂತ ಶ್ರೀಮಂತವಾಗಿದೆ. ಮಾತ್ರವಲ್ಲ, ಸಾಹಿತ್ಯ, ರಾಜಕೀಯ, ಆರ್ಥಿಕ, ಸಾಮಾಜಿಕ ಕ್ಷೇತ್ರಕ್ಕೆ ತನ್ನದೇ ಆದ ಕೊಡುಗೆ ನೀಡಿದೆ. ಈ ನಿಟ್ಟಿನಲ್ಲಿ ಜಿಲ್ಲೆಯ ವೈಭವ ಸಾರುವ ಉತ್ಸವ ನಡೆಯಬೇಕು. ಇನ್ನು ಮುಂದಾದರೂ ಜಿಲ್ಲಾಡಳಿತ ಎಚ್ಚೆತ್ತುಕೊಂಡು ಜಿಲ್ಲಾ ಉತ್ಸವಕ್ಕೆ ಮುಂದಾಗಲಿ. ರಾಮನಗರ ಜಿಲ್ಲೆಯಾಗಿ 6 ವರ್ಷ ತುಂಬುತ್ತಿದ್ದು, ಜಿಲ್ಲೆ ಉದಯವಾದ ಆಗಸ್ಟ್ 23 ರಂದು 'ರೇಷ್ಮೆ ನಾಡ ಜಿಲ್ಲಾ ಉತ್ಸವ' ನಡೆಸಲು ಜಿಲ್ಲಾಡಳಿತ ಮುಂದಾಗಬೇಕು ಎಂದು ಕೆ.ಯೋಗ ರವೀಶ್ ಭಾರತ್ ಪ್ರಕಟಣೆಯಲ್ಲಿ ಒತ್ತಾಯಿಸಿದ್ದಾರೆ.
ಕಲಿಕೋತ್ಸವ
ಸೂಲಿಬೆಲೆ: ಇಲ್ಲಿಗೆ ಸಮೀಪದ ಮಲ್ಲಿಮಾಕನಪುರ ಗ್ರಾಮದಲ್ಲಿ ಬೇಗೂರು ಕ್ಲಸ್ಟರ್ ಮಟ್ಟದ ಕಲಿಕೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಕ್ಲಸ್ಟರ್ ಸಂಪನ್ಮೂಲಧಿಕಾರಿ ಹರೀಶ್ ಮಾತನಾಡಿ, ಕಲಿಕೆ ಪ್ರತಿಯೊಂದು ಮಗುವಿನಲ್ಲಿ ಯಾವ ರೀತಿಯಾಗಿ ನಡೆದಿದೆ ಎಂಬುದನ್ನು ಸಾಮೂಹಿಕವಾಗಿ ಸ್ವರ್ಧೆಗಳ ಮೂಲಕ ನಡೆಸು ಕಲಿಕೋತ್ಸವ ಗ್ರಾಮೀಣ ಭಾಗದಲ್ಲಿರುವ ಮಕ್ಕಳಿಗೆ ಹೆಚ್ಚು ಸೂಕ್ತವಾಗಿದೆ. ಇಂಥ ವೇದಿಕೆಗಳನ್ನು ಸಮರ್ಥವಾಗಿ ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.ಗ್ರಾಪಂ ಸದಸ್ಯೆ ವೀಣಾ ಶ್ರೀನಿವಾಸ್, ಎಸ್ಡಿಎಂಸಿ ಸದಸ್ಯ ಕೃಷ್ಣಪ್ಪ, ಶಿಕ್ಷಕ ವಾಜೀರಾಜ್, ಮುಖ್ಯ ಶಿಕ್ಷಕಿ ಭಾಗೀರತಮ್ಮ, ಮುಖಂಡರಾದ ವಿದ್ಯಾಸಾಗರ್,ಅರುಣ್, ಸೇರಿದಂತೆ ಗ್ರಾಮದ ಹಲವರು ಭಾಗವಹಿಸಿದ್ದರು. ಶಾಲಾ ಮಕ್ಕಳು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು.
ಹೋಮಿಯೋಪತಿ ಶಿಬಿರ
ದೇವನಹಳ್ಳಿ: ಇಲ್ಲಿನ ಲಯನ್ಸ್ ಮತ್ತು ಲಯನೆಸ್ ಸಂಸ್ಥೆ, ಲಯನ್ ಸೇವಾ ಪ್ರತಿಷ್ಠಾನ ಹಾಗೂ ಯಲಹಂಕ ಹೋಮಿಯೋ ಕೇರ್ ಕ್ಲಿನಿಕ್ ಸಂಯುಕ್ತ ಆಶ್ರಯದಲ್ಲಿ 100ನೇ ಉಚಿತ ಹೋಮಿಯೋಪತಿ ಶಿಬಿರವನ್ನು ಭಾನುವಾರ ಇಲ್ಲಿನ ಲಯನ್ಸ್ ಸೇವಾ ಭವನದಲ್ಲಿ ಆಯೋಜಿಸಲಾಗಿತ್ತು.
ಲಯನೆಸ್ ಜಿಲ್ಲಾಧ್ಯಕ್ಷ ಡಾ.ಕೆ.ವೈ. ರಾಮಚಂದ್ರ ಉದ್ಘಾಟನೆ ನೆರವೇರಿಸಿದರು. ಡಾ. ಜೆ.ವಿಶ್ವನಾಥ್ ಮಾತನಾಡಿ, ಈ ಶಿಬಿರದಲ್ಲಿ ಎಂತಹ ಹಳೆಯ ಖಾಯಿಲೆಗಳಾಗಲಿ ಮಕ್ಕಳಿಗೆ ಶೀತ ಜ್ವರ ಅಲ್ಲದೆ ಚರ್ಮ ರೋಗಗಳಿಗೂ ಔಷಧ ಲಭ್ಯವಿದ್ದು ರೋಗ ವಾಸಿಯಾಗುವುದಲ್ಲದೆ ರೋಗಗಳು ಬಾರದಂತೆ ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ ಎಂದರು. ಲಯನೆಸ್ ಜಿಲ್ಲಾ ಉಪಾಧ್ಯಕ್ಷ ನಾಗೇಶ್ ಅಧ್ಯಕ್ಷತೆ ವಹಿಸಿದ್ದರು. ವಲಯಾಧ್ಯಕ್ಷ ವಿ.ವೆಂಕಟೇಶ್ ಮಾತನಾಡಿದರು. ಮಾಜಿ ಅಧ್ಯಕ್ಷ ವೈ.ಸಿ.ಕೃಪಾಕರ್ ಎಸ್.ಸತೀಶ್ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.
ಬೀದಿ ನಾಟಕ
ರಾಮನಗರ: ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್ (ನಬಾರ್ಡ್) ಹಾಗೂ ಪರಿಸರ ಮತ್ತು ಗ್ರಾಮೀಣಾಭಿವೃದ್ಧಿ ಸೊಸೈಟಿಯಿಂದ ಆರ್ಥಿಕ ಸಾಕ್ಷರ ಆಂದೋಲನದ ಅಂಗವಾಗಿ ಆರ್ಥಿಕ ಸಾಕ್ಷರತೆ-ಆರ್ಥಿಕ ಸೇರ್ಪಡೆ ಕುರಿತು ಜನ ಜಾಗೃತಿ ಮೂಡಿಸುವ ಬೀದಿ ನಾಟಕ ಪ್ರದರ್ಶನ, ವಿಚಾರ ಸಂಕಿರಣ, ಸಂವಾದ ಹಾಗೂ ಗೋಡೆ ಬರಹ ಕಾರ್ಯಕ್ರಮವನ್ನು ಜಿಲ್ಲೆಯ ವಿವಿಧ ಗ್ರಾಮಗಳಲ್ಲಿ ಆಯೋಜಿಸಲಾಗಿದೆ.
ಡಿ.23ರ ಬೆಳಗ್ಗೆ 9ಕ್ಕೆ ರಾಮನಗರ ತಾಲೂಕಿನ ಡಣಾಯ್ಕನಪುರ, ಸಂಜೆ 5ಕ್ಕೆ ದೊಡ್ಡಗಂಗವಾಡಿ, ಡಿ.24ರ ಸಂಜೆ 4ಕ್ಕೆ ಚಿಕ್ಕೇನಹಳ್ಳಿ, ಸಂಜೆ 6ಕ್ಕೆ ಕಾಡನಕುಪ್ಪೆ ಗ್ರಾಮದಲ್ಲಿ ಕಾರ್ಯಕ್ರಮ ನಡೆಯಲಿವೆ ಎಂದು ನಬಾರ್ಡ್ ಸಹಾಯಕ ಮಹಾ ಪ್ರಬಂಧಕ ವಸಂತ್ಕುಮಾರ್ ತಿಳಿಸಿದ್ದಾರೆ.
ಡಿ.25ರ 9ಕ್ಕೆ ಮಾಗಡಿ ತಾಲೂಕಿನ ಕೋಟಗಾನಹಳ್ಳಿ, ಸಂಜೆ 5ಕ್ಕೆ ಗುಡ್ಡಹಳ್ಳಿ, ಡಿ.26ರ ಬೆಳಗ್ಗೆ 9ಕ್ಕೆ ರಾಮನಗರ ತಾಲೂಕಿನ ರಾಂಪುರ, ಸಂಜೆ 5ಕ್ಕೆ ಸುಗ್ಗನಹಳ್ಳಿ, ಡಿ.31ರ ಬೆಳಗ್ಗೆ 9ಕ್ಕೆ ರಾಮನಗರದ ಕಾರ್ಪೊರೇಷನ್ ಬ್ಯಾಂಕ್ ಎದುರು ಕಾರ್ಯಕ್ರಮ ನಡೆಯಲಿವೆ.
ಡಿ.28ರ ಬೆಳಗ್ಗೆ 9ಕ್ಕೆ ರಾಮನಗರ ತಾಲೂಕಿನ ತಿಮ್ಮಸಂದ್ರಗೇಟ್, ಸಂಜೆ 5ಕ್ಕೆ ಮಾಗಡಿ ತಾಲೂಕಿನ ವಿ.ಜಿ.ದೊಡ್ಡಿ, ಡಿ.29ರ ಬೆಳಗ್ಗೆ 9ಕ್ಕೆ ಚನ್ನಪಟ್ಟಣದ ತಿಟ್ಟಮಾರನಹಳ್ಳಿ, ಸಂಜೆ 5ಕ್ಕೆ ನಾಗವಾರ, ಡಿ.30ರ ಬೆಳಗ್ಗೆ 9ಕ್ಕೆ ಚನ್ನಪಟ್ಟಣದ ಬೇವೂರು, ಸಂಜೆ 5ಕ್ಕೆ ಮಳೂರು, ಡಿ.31ರ ಸಂಜೆ 5ಕ್ಕೆ ಮುದಗೆರೆ ಗ್ರಾಮದಲ್ಲಿ ಕಾರ್ಯಕ್ರಮ ಜರುಗಲಿವೆ.
ಜ.1ರ ಬೆಳಗ್ಗೆ 9ಕ್ಕೆ ಕನಕಪುರ ತಾಲೂಕಿನ ಹೊನ್ನಗನದೊಡ್ಡಿ, ಸಂಜೆ 5ಕ್ಕೆ ಬಿ.ಎಸ್.ದೊಡ್ಡಿ, ಜ.2ರ ಬೆಳಗ್ಗೆ 9ಕ್ಕೆ ಕೊಟಗಾಳು, ಸಂಜೆ 5ಕ್ಕೆ ಸೊಂಟೇನಹಳ್ಳಿ ಗ್ರಾಮದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.
ರೈತ ದಿನಾಚರಣೆ
ದೇವನಹಳ್ಳಿ: ದೇವನಹಳ್ಳಿ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಡಿ.23 ರಂದು ರೈತರ ದಿನಾಚರಣೆ ಆಯೋಜಿಸಿದ್ದು ಶಾಸಕರು ಹಾಗೂ ತಾಲೂಕಿನ ನಾಲ್ಕು ಹೋಬಳಿಗಳ ಜಿಲ್ಲಾ ಪಂಚಾಯಿತಿ ಮತ್ತು ತಾಲೂಕು ಪಂಚಾಯಿತಿ ಸದಸ್ಯರು ಮತ್ತು ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರು ಭಾಗವಹಿಸಲಿದ್ದಾರೆ.
ಈ ನಿಟ್ಟಿನಲ್ಲಿ ತಾಲೂಕಿನ ರೈತರು ತಪ್ಪದೆ ಭಾಗವಹಿಸಬೇಕು ಎಂದು ಸಹಾಯಕ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹೋಮಿಯೋಪತಿ ಶಿಬಿರ
ದೇವನಹಳ್ಳಿ: ಇಲ್ಲಿನ ಲಯನ್ಸ್ ಮತ್ತು ಲಯನೆಸ್ ಸಂಸ್ಥೆ, ಲಯನ್ ಸೇವಾ ಪ್ರತಿಷ್ಠಾನ ಹಾಗೂ ಯಲಹಂಕ ಹೋಮಿಯೋ ಕೇರ್ ಕ್ಲಿನಿಕ್ ಸಂಯುಕ್ತ ಆಶ್ರಯದಲ್ಲಿ 100ನೇ ಉಚಿತ ಹೋಮಿಯೋಪತಿ ಶಿಬಿರವನ್ನು ಭಾನುವಾರ ಇಲ್ಲಿನ ಲಯನ್ಸ್ ಸೇವಾ ಭವನದಲ್ಲಿ ಆಯೋಜಿಸಲಾಗಿತ್ತು.
ಲಯನೆಸ್ ಜಿಲ್ಲಾಧ್ಯಕ್ಷ ಡಾ.ಕೆ.ವೈ. ರಾಮಚಂದ್ರ ಉದ್ಘಾಟನೆ ನೆರವೇರಿಸಿದರು. ಡಾ. ಜೆ.ವಿಶ್ವನಾಥ್ ಮಾತನಾಡಿ, ಈ ಶಿಬಿರದಲ್ಲಿ ಎಂತಹ ಹಳೆಯ ಖಾಯಿಲೆಗಳಾಗಲಿ ಮಕ್ಕಳಿಗೆ ಶೀತ ಜ್ವರ ಅಲ್ಲದೆ ಚರ್ಮ ರೋಗಗಳಿಗೂ ಔಷಧ ಲಭ್ಯವಿದ್ದು ರೋಗ ವಾಸಿಯಾಗುವುದಲ್ಲದೆ ರೋಗಗಳು ಬಾರದಂತೆ ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ ಎಂದರು. ಲಯನೆಸ್ ಜಿಲ್ಲಾ ಉಪಾಧ್ಯಕ್ಷ ನಾಗೇಶ್ ಅಧ್ಯಕ್ಷತೆ ವಹಿಸಿದ್ದರು. ವಲಯಾಧ್ಯಕ್ಷ ವಿ.ವೆಂಕಟೇಶ್ ಮಾತನಾಡಿದರು. ಮಾಜಿ ಅಧ್ಯಕ್ಷ ವೈ.ಸಿ.ಕೃಪಾಕರ್ ಎಸ್.ಸತೀಶ್ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.
ವೃದ್ಧಾಪ್ಯ ವೇತನ ಮಂಜೂರಾತಿ ಪತ್ರ
ಸೂಲಿಬೆಲೆ: ಇಲ್ಲಿಗೆ ಸಮೀಪದ ನಂದಗುಡಿ ಹೋಬಳಿ ಡಿ.ಶೆಟ್ಟಿಹಳ್ಳಿ ಗ್ರಾಮದಲ್ಲಿ ವೃದ್ಧಾಪ್ಯ ವೇತನ ಮಂಜೂರಾತಿ ಪತ್ರಗಳನ್ನು ಶಾಸಕ ಎನ್. ನಾಗರಾಜ್ ವಿತರಣೆ ಮಾಡಿದರು.
ನಂತರ ಮಾತನಾಡಿದ ಅವರು, ಹೊಸಕೋಟೆ ತಾಲೂಕಿನಲ್ಲಿ ಬಡವರಿಗೆ ಸಕಾಲಕ್ಕೆ ವೃದ್ಧಾಪ್ಯ ವೇತನಗಳು
ತಲುಪುವಂತೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಸರ್ಕಾರ ಬಡವರ ಪರವಾಗಿ ಹತ್ತಾರು ಯೋಜನೆಗಳನ್ನು ಜಾರಿ ಮಾಡಿದೆ.ಇವುಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿ. ಪ್ರಸಾದ್,
ತಾಪಂ ಮಾಜಿ ಸದಸ್ಯ ಯರೇಗೌಡ, ಕಲ್ಲಪ್ಪ, ನಾರಾಯಣಗೌಡ, ಮುನಿಶಾಮಣ್ಣ, ಮೋಹನ್ ಮೊದಲಾದವರು ಹಾಜರಿದ್ದರು.
ವೃದ್ಧಾಪ್ಯ ವೇತನ ಮಂಜೂರಾತಿ ಪತ್ರ ವಿತರಣೆ

Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.