ಸಾವಯವ ಕೃಷಿಯಿಂದ ಸಮೃದ್ಧ ಬದುಕು
ಚನ್ನಪಟ್ಟಣ: ರಾಸಾಯನಿಕ ವಸ್ತುಗಳೇ ಪ್ರಧಾನ ವೆನಿಸಿರುವ ಆಧುನಿಕ ಕೃಷಿ ಪದ್ಧತಿಯಿಂದ ಮಾನವ ಸೇವಿಸುವ ಪ್ರತಿ ತುತ್ತೂ ವಿಷವಾಗಿ ಪರಿವರ್ತನೆಯಾಗುತ್ತಿದೆ
ಎಂದು ಸಾವಯವ ಕೃಷಿ ತಜ್ಞ ಮಂಜುನಾಥ್ ಹೊಳಲು ವಿಷಾದ ವ್ಯಕ್ತಪಡಿಸಿದರು. ತಾಲೂಕಿನ ಪಟ್ಲು ಗ್ರಾಮದಲ್ಲಿ ಮಾನಸ ಸಾಮಾಜಿಕ ಮತ್ತು ಸಾಂಸ್ಕೃತಿಕ ಟ್ರಸ್ಟ್ ಹಮ್ಮಿಕೊಂಡಿದ್ದ ವೈವಿಧ್ಯಮಯ ದೇಶಿ ತಳಿಗಳ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.
ಸಾವಯವ ಕೃಷಿ ಪದ್ಧತಿಯು ಮಾನವ ನಿಗೆ ಅಗತ್ಯವಿರುವ ಆಹಾರವನ್ನು ನೀಡುವ ಮಹತ್ತರ ಉದ್ದೇಶದಿಂದ ನಡೆಯುತ್ತಿತ್ತು. ಆದರೆ ಸಮಕಾಲೀನ ಸಂದರ್ಭದಲ್ಲಿ ತಾಂತ್ರಿಕತೆ ಬೆಳೆದಂತೆ ಕೃಷಿ ಪದ್ಧತಿಯಲ್ಲಿ ರಾಸಾಯನಿಕ ತ್ಯಾಜ್ಯ ವಸ್ತುಗಳ ಬಳಕೆಯಿಂದ ಮಣ್ಣಿನ ಫಲವತ್ತತೆ ನಾಶವಾಗುತ್ತಿದ್ದು, ಭವಿಷ್ಯದ ದಿನಗಳಲ್ಲಿ ಬಹುದೊಡ್ಡ ದುರಂತ ಸಂಭವಿಸುತ್ತದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಸಾವಯವ ಕೃಷಿ ಪದ್ಧತಿ ಸಿಂಧೂ ಬಯಲಿನ ನಾಗರಿಕತೆಯ ಕಾಲದಿಂದಲೂ ಬೆಳೆದು ಬರುತ್ತಿರುವ ಪುರತಾನ ವ್ಯವಸ್ಥೆಯಾಗಿದೆ. ಅದನ್ನು ಮುಂದುವರೆಸಿಕೊಂಡು ಹೋಗುವುದು ಪ್ರಜ್ಞಾವಂತ ಕೃಷಿಕರ ಜವಾಬ್ದಾರಿಯಾಗಿದೆ ಎಂದರು.
ಆದರ್ಶನೀಯ: ಸಹಜ ಸಂಮೃದ್ಧಿ ಸಂಸ್ಥೆಯ ಶಾಂತಕುಮಾರ್ ಮಾತನಾಡಿ, ದೇಶಿ ತಳಿಗಳ ಸಂರಕ್ಷಣೆಯತ್ತ ಯುವ ಜನಾಂಗ ಮುಖ ಮಾಡುತ್ತಿರುವುದು ಶ್ಲಾಘನೀಯ ಮಾತ್ರವಲ್ಲದೆ ಭವಿಷ್ಯದ ದೃಷ್ಟಿಯಿಂದ ಆದರ್ಶನೀಯ ಎಂದರು. ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಟ್ರಸ್ಟ್ನ ಕಾರ್ಯದರ್ಶಿ ಪಿ.ಜೆ. ಗೋವಿಂದರಾಜು ಮಾತನಾಡಿ ದೇಶಿತಳಿಗಳ ಉತ್ಪಾದನೆಯನ್ನು ಪ್ರತಿ ಹಳ್ಳಿಹಳ್ಳಿಗಳಲ್ಲೂ ತೊಡಗಿಸಿಕೊಳ್ಳುವಂತೆ ಕೃಷಿಕರನ್ನು ಜಾಗೃತಿಗೊಳಿಸುವ ಜವಾಬ್ದಾರಿ ನಮ್ಮನ್ನಾಳುವ ಸರ್ಕಾರ, ಪಠ್ಯ ಪುಸ್ತಕ, ಮಾಧ್ಯಮಗಳು, ಕೃಷಿ ತಜ್ಞರ ಮೇಲಿದೆ ಎಂದರು.
ಕನ್ನಡ ಕಟ್ಟಾಳು ಸಿಂ.ಲಿಂ.ನಾಗರಾಜು, ವಿಚಾರವಾದಿ ಶಿವಣ್ಣ ಕನಕಪುರ, ತಿಟ್ಟಮಾರನಹಳ್ಳಿ ಗ್ರಾಪಂ ಅಧ್ಯಕ್ಷೆ ಜಯಮ್ಮ, ರೈತ ಕೂಟದ ಸುರೇಂದ್ರ, ಸಾವಯವ ಕೃಷಿಕ ಶ್ರೀನಿವಾಸ್, ಪ್ರಾಂಶುಪಾಲೆ ಎಸ್.ಪೂರ್ಣಿಮಾ ಮತ್ತಿತರರು ಉಪಸ್ಥಿತರಿದ್ದರು. ಇದೇ ವೇಳೆ ಸಾವಯವ ರೈತ ಮಹಿಳೆ ಲತಾ ಹಾಗೂ ರಾಷ್ಟ್ರೀಯ ಕೃಷಿ ಪ್ರಶಸ್ತಿ ಪುರಸ್ಕೃತ ಸೈಯದ್ ಘನೀಖಾನ್ ಅವರನ್ನು ಸನ್ಮಾನಿಸಲಾಯಿತು. ಆಕಾಶವಾಣಿ ಕಲಾವಿದರಾದ ಆಕಾಶ್, ಶಿವಕುಮಾರ್, ರಾಜು ಮತ್ತು ಜಾನಪದ ಗಾಯಕ ಸುಧಾಕರ್ ಗೀತ-ಗಾಯನ ನಡೆಸಿಕೊಟ್ಟರು.
ಪ್ರಾತ್ಯಕ್ಷತೆ: 80ಕ್ಕೂ ಹೆಚ್ಚಿನ ವೈವಿಧ್ಯಮ ದೇಶಿಯ ಬತ್ತಗಳಾದ ಹರ್ಕ, ನವಣೆ, ಸಜ್ಜೆ, ಮುಂಡಗಬತ್ತ, ಕೊಯ್ಯಮತ್ತೂರು ಸಣ್ಣ, ನಗರ್ಬಾತ್, ಪರಿಮಳಸಣ್ಣ, ಜೀರಿಗೆಸಣ್ಣ, ರಾಜಮುಡಿ, ಸೇಲಂಸಣ್ಣ, ಕೆಂಪುಮುಂಡಗ, ಘಂನದು, ಕಣತುಂಬ, ಜಿ.ಕೆ.7, ಇತ್ಯಾದಿಗಳನ್ನು ಪ್ರಾತ್ಯಕ್ಷತೆ ಮಾಡಲಾಯಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

