ಕೇಕ್ನಲ್ಲಿ ಅರಳಿದ ತಿರುಮಲ ದೇಗುಲ
ಕ.ಪ್ರ.ವಾರ್ತೆ ದೊಡ್ಡಬಳ್ಳಾಪುರ ಡಿ.26
ದೊಡ್ಡಬಳ್ಳಾಪುರದಲ್ಲಿ ಕ್ರಿಸ್ಮಸ್ ಮತ್ತು ಹೊಸವರ್ಷದ ಅಂಗವಾಗಿ ಬೃಹತ್ ಕೇಕ್ ಪ್ರದರ್ಶನ ನಡೆಯುತ್ತಿದೆ. ಈ ಬಾರಿ ವಿಶ್ವವಿಖ್ಯಾತ ತಿರುಪತಿ ತಿರುಮಲ ಶ್ರೀವೆಂಕಟರಮಣಸ್ವಾಮಿ ದೇವಾಲಯವನ್ನು ಕೇಕ್ನಲ್ಲಿ ಬಿಡಿಸಲಾಗಿದೆ. ಸುಮಾರು 300 ಕೆಜಿ ಸಕ್ಕರೆ ಬಳಸಿ ಈ ಕೇಕ್ ತಯಾರಿಸಲಾಗಿದೆ.
ಇಲ್ಲಿನ ಮಹಿಳಾ ಸಮಾಜದಲ್ಲಿ ನಡೆಯುತ್ತಿರುವ ಕೇಕ್ ಪ್ರದರ್ಶನ ಈಗಾಗಲೇ ಜನಾಕರ್ಷಣೆಗೆ ಪಾತ್ರವಾಗಿದೆ. ಕಳೆದ ಕೆಲ ವರ್ಷಗಳಿಂದ ಶ್ರೀದೇವಿ ಬೇಕರಿ ಈ ಪ್ರದರ್ಶನವನ್ನು ಏರ್ಪಡಿಸುತ್ತಿದೆ. ತಮಿಳುನಾಡಿನ ವಿಖ್ಯಾತ ಗೋಲ್ಡನ್ ಟೆಂಪಲ್, ಕೇರಳದ ಶಬರಿಮಲೆ ದೇವಾಲಯ ಸೇರಿದಂತೆ ಹಲವು ದೇವಾಲಯಗಳನ್ನು ಕಳೆದ ಸಾಲುಗಳಲ್ಲಿ ನಿರ್ಮಿಸಿ ಪ್ರದರ್ಶಿಸಲಾಗಿದೆ. ಸಕ್ಕರೆ ಮತ್ತು ಇತರೆ ಸಾಮಗ್ರಿಗಳನ್ನು ಬಳಸಿ ಕಲಾವಿದರೂ ರೂಪಿಸಿರುವ ಅಪೂರ್ವ ಕಲಾಕೃತಿ ಗಮನ ಸೆಳೆಯುತ್ತಿದೆ. ಇದನ್ನು ರೂಪಿಸುವುದಕ್ಕೆ ಸುಮಾರು 10 ಮಂದಿ ಪರಿಶ್ರಮ ವಹಿಸದ್ದಾರೆ.
ಇದಕ್ಕೂ ಮುನ್ನ ಇಲ್ಲಿನ ಶಬರಿ ಬೇಕರಿ ಮತ್ತು ಶ್ರೀಬಸವೇಶ್ವರ ಬೇಕರಿಯವರಿಂದ ಕೇಕ್ ಪ್ರದರ್ಶನ ನಡೆಯುತ್ತಿತ್ತು. ಆದರೆ ಇತ್ತೀಚಿನ ವರ್ಷಗಳಲ್ಲಿ ಅವರು ಕೇಕ್ ಪ್ರದರ್ಶನ ನಡೆಸುತ್ತಿಲ್ಲ. ತಾಜ್ಮಹಲ್, ಚಾರ್ಮಿನಾರ್, ವಿಧಾನಸೌಧ, ಸಂಸತ್ಭವನ, ಇಸ್ಕಾನ್ ದೇವಾಲಯ, ಬೆಂಗಳೂರು ಅರಮನೆ, ಮೈಸೂರು ಅರಮನೆ ಸೇರಿದಂತೆ ದೇಶದ ವಿಖ್ಯಾತ ಕಟ್ಟಡಗಳು ಮತ್ತು ಧಾರ್ಮಿಕ ಕೇಂದ್ರಗಳನ್ನು ಹಲವು ಬಾರಿ ಇದೇ ವೇದಿಕೆಯಲ್ಲಿ ಪ್ರದರ್ಶಿಸಲಾಗಿತ್ತು.
ಈ ಬಾರಿ ವಿವಿಧ ಬಗೆಯ ಕಾರ್ಟೂನ್, ಮಿಕ್ಕಿಮೌಸ್ ಮಾದರಿ ಕೇಕ್ಗಳು, ಮನೆ, ಗುಡಿಸಲು, ಸಂಗೀತವಾದ್ಯಗಳ ಮಾದರಿ ಕೇಕ್ಗಳು ಜನಾಕರ್ಷಣೆಗೆ ಪಾತ್ರವಾಗಿವೆ. ಇಲ್ಲಿನ ಹಲವು ಬೇಕರಿಗಳಲ್ಲಿ ಸಣ್ಣ ಪುಟ್ಟ ಕೇಕ್ ಪ್ರದರ್ಶನಗಳು ನಡೆಯುತ್ತಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

