ಬೆಂಗಳೂರು ಗ್ರಾಮಾಂತರ

'ಸದಸ್ಯತ್ವ ಎರಡೂಕಾಲು ಲಕ್ಷಕ್ಕೇರಿಸಿದ ಕೀರ್ತಿ ನಮ್ಮದು'

Published On :

ಕನಕಪುರ: ಕೆಲವೇ ಸಾವಿರಗಳಷ್ಟಿದ್ದ ಒಕ್ಕಲಿಗರ ಸಂಘದ ಸದಸ್ಯತ್ವವನ್ನು ಎರಡೂಕಾಲು ಲಕ್ಷಕ್ಕೇರಿಸಿದ ಕೀರ್ತಿ, ಶ್ರಮಗಳು ತಮ್ಮ ಅವಧಿಯಲ್ಲಿ ನಡೆದಿವೆ ಎಂದು ಒಕ್ಕಲಿಗರ ಸಂಘದ ನೂತನ ಸದಸ್ಯತ್ವ ಸಮಿತಿ ಅಧ್ಯಕ್ಷ ಎ.ಪ್ರಸಾದ್ ಹೇಳಿದ್ದಾರೆ.
ಅವರು ಕನಕಪುರದ ಎಸ್.ಬಿ.ಕಲ್ಯಾಣ ಮಂಟಪದಲ್ಲಿ ಸ್ವಚ್ಛ ಪಾರದರ್ಶಕ ಆಡಳಿತದ ನೇತಾರ ಪ್ರೊ.ಎಂ.ನಾಗರಾಜ್ ನೇತೃತ್ವದ ತಂಡದ ಪರವಾಗಿ ಮತಯಾಚನೆ ನಡೆಸಿ ಮಾತನಾಡುತ್ತಿದ್ದರು.  ವಿಪ  ಮಾಜಿ ಸದಸ್ಯ ಎಸ್.ರವಿ ಅಧ್ಯಕ್ಷತೆ ವಹಿಸಿದ್ದರು.
ಅಭ್ಯರ್ಥಿ ಸೂರನಹಳ್ಳಿ ಜಯರಾಮೇಗೌಡ ಮಾತನಾಡಿ, ಈಗಿರುವ ಸಂಘದ ಭ್ರಷ್ಟ ಪದಾಧಿಕಾರಿಗಳನ್ನು
ತೊಲಗಿಸಿ ಒಕ್ಕಲಿಗ ಸಮುದಾಯದ ಸಮಗ್ರ ಅಭಿವೃದ್ಧಿಗೆ ಶ್ರಮಿಸುವ, ಸಂಘದ ಕಾರ್ಯವ್ಯಾಪ್ತಿಯನ್ನು ವಿಕೇಂದ್ರೀಕರಣಗೊಳಿಸಿ ಗ್ರಾಮಾಂತರ ಪ್ರದೇಶಕ್ಕೂ ಪಸರಿಸುವ ಕ್ರಿಯಾಶೀಲ ತಂಡವನ್ನು ಪ್ರಜ್ಞಾವಂತ ಮತದಾರರು ಆರಿಸಬೇಕಾಗಿದೆ ಎಂದು ಹೇಳಿದರು.
ಮುಖಂಡ ವಿಜಯದೇವ್ ಮಾತನಾಡಿ, ಒಕ್ಕಲಿಗರ ಸಂಘದಲ್ಲಿ ಇದುವರೆಗೂ ಯಾರೂ ಕನಕಪುರವನ್ನು ಪ್ರತಿನಿಧಿಸಿಲ್ಲ, ರಾಮನಗರ ಜಿಲ್ಲೆ ಹಾಗೂ ಕನಕಪುರಕ್ಕೆ ಪ್ರಾತಿನಿಧ್ಯ ನೀಡುವ ಅಭ್ಯರ್ಥಿಗಳನ್ನು ಬೆಂಬಲಿಸಬೇಕು. ತಾಲೂಕಿಗೆ ಮೆಡಿಕಲ್ ಕಾಲೇಜು ಬರಬೇಕೆಂಬ ಮಹದಾಸೆಯನ್ನು ಈಡೇರಿಸುವ ಸಾಮರ್ಥ್ಯ ಒಕ್ಕಲಿಗರ ಸಂಘಕ್ಕಿದೆ, ಭ್ರಷ್ಟರನ್ನು ಹೊರದೂಡಿ ಸಜ್ಜನರನ್ನು ಆರಿಸುವ ಹೊಣೆಗಾರಿಕೆ ಮತದಾರರದ್ದು ಎಂದು ಹೇಳಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.