ಬೆಂಗಳೂರು ಗ್ರಾಮಾಂತರ

ನಬಾರ್ಡ್ನಿಂದ ಆರ್ಥಿಕ ಸಾಕ್ಷರ ಕಾರ್ಯಕ್ರಮ: ಸಿ. ವಸಂತಕುಮಾರ್

Published On :

ಮಾಗಡಿ: ಜನಸಾಮಾನ್ಯರಿಗೆ ಉಳಿತಾಯದ ಮಹತ್ವ ಆರ್ಥಿಕ ಸವಲತ್ತುಗಳ ಪರಿಚಯ ಮಾಡಿ, ಆರ್ಥಿಕ ಸೌಲಭ್ಯಗಳನ್ನು ತಿಳಿಸಿಲು ನಬಾರ್ಡ್ ಆರ್ಥಿಕ ಸಾಕ್ಷರ ಕಾರ್ಯಕ್ರಮವನ್ನು ರೂಪಿಸಿದೆ ಎಂದು ನಬಾರ್ಡ್ನ ಸಹಾಯಕ ಮಹಾ ಪ್ರಬಂಧಕ ಸಿ. ವಸಂತಕುಮಾರ್ ತಿಳಿಸಿದರು.
ಅವರು ಮಾಗಡಿ ತಾಲೂಕಿನ ಗುಡ್ಡಹಳ್ಳಿಯಲ್ಲಿ ನಬಾರ್ಡ್ ಮತ್ತು ಪರಿಸರ ರೂರಲ್  ಡೆವಲಫ್ಮೆಂಟ್ ಸೊಸೈಟಿ ಏರ್ಪಡಿಸಿದ್ದ ಆರ್ಥಿಕ ಆಂದೋಲನ ಅಂಗವಾಗಿ ಬೀದಿ ನಾಟಕ ಪ್ರದರ್ಶನ, ವಿಚಾರ ಸಂಕಿರಣ ಹಾಗೂ ಗೋಡೆ ಬರಹ ಉದ್ಘಾಟಿಸಿ ಮಾತನಾಡಿದರು.
 ಗ್ರಾಮೀಣ ಜನತೆ ಭದ್ರವಾದ ಭವಿಷ್ಯ ರೂಪಿಸಿಕೊಳ್ಳಲು ಹಣಕಾಸು ವ್ಯವಹಾರವನ್ನು ವ್ಯವಸ್ಥಿತವಾಗಿ ನಡೆಸಿಕೊಂಡು, ನೆಮ್ಮದಿಯ ಜೀವನಕ್ಕಾಗಿ ಪ್ರತಿಯೊಬ್ಬ ಪ್ರಜೆಯೂ ಆರ್ಥಿಕ ಸಾಕ್ಷರ ಮಹತ್ವವನ್ನು ತಿಳಿಯಬೇಕಿದೆ. ಕೃಷಿ, ಕೈಗಾರಿಕೆ ಇನ್ನಿತರ ಕ್ಷೇತ್ರಗಳಲ್ಲಿ ಉತ್ಪಾದನೆ ಮತ್ತು ಸಂಪನ್ಮೂಲ ಹೆಚ್ಚಿಸಿಕೊಳ್ಳಲು ರಾಷ್ಟ್ರೀಕೃತ ಬ್ಯಾಂಕ್ಗಳಲ್ಲಿ ವ್ಯವಹರಿಸುವುದು ಅನಿವಾರ್ಯ. ಉಳಿತಾಯ ಮಾಡಿದ ಹಣ ಪರಮಾಪ್ತನಿದ್ದಂತೆ. 18 ವರ್ಷ ತುಂಬಿದ ಪ್ರತಿ ಪ್ರಜೆಯೂ ಬ್ಯಾಂಕ್ಗಳಲ್ಲಿ ವ್ಯವಹರಿಸಲು ಉತ್ಸುಕರಾಗಬೇಕು ಎಂದು ತಿಳಿಸಿದರು.
  ಆರ್ಥಿಕ ಸಾಕ್ಷರತಾ ಅಧಿಕಾರಿ ರಮೇಶ್ ದೇಶಪಾಂಡೆ ಮಾತನಾಡಿ ಜನರ ಅನುಕೂಲಕ್ಕೆ ತಕ್ಕಂತೆ ಹಣ ಹೂಡಲು ಬ್ಯಾಂಕ್ಗಳು  ವಿವಿಧ ಬಗೆಯ ಠೇವಣಿ ಒದಗಿಸಿದೆ. ಉಳಿತಾಯ ಖಾತೆ, ಸುಲಭ ಉಳಿತಾಯ ಖಾತೆ ಹೀಗೆ ಹಲವಾರು ಖಾತೆಗಳು ಚಾಲ್ತಿಯಲ್ಲಿದೆ. ಸದ್ಬಳಕೆ ಮಾಡಿಕೊಳ್ಳುವಂತೆ ತಿಳಿಸಿದರು.ಇದೇ ವೇಳೆ  ಬೀದಿ ನಾಟಕ ಪ್ರದರ್ಶನ, ವಿಚಾರ ಸಂಕಿರಣ ಹಾಗೂ ಗೋಡೆ ಬರಹ ಪ್ರದರ್ಶನ ನೀಡುವ ಮೂಲಕ ಜನ ಜಾಗೃತಿಗೊಳಿಸಲಾಯಿತು.
ಪರಿಸರ ರೂರಲ್  ಡೆವಲಪ್ಮೆಂಟ್ ಸೊಸೈಟಿ ಅಧಿಕಾರಿ ಮಂಗಲ ಎಂ. ಯೋಗೇಶ್, ಸೆಕ್ರೆಟ್ ಸಂಸ್ಥೆಯ ಪುಟ್ಟಸ್ವಾಮಿ, ನವೀನ್, ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಕೆಂಪಣ್ಣ ಸೇರಿದಂತೆ ಪ್ರಗತಿಪರ ರೈತರು ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.