ಹಿರಿಯ ಕ್ರೀಡಾಪಟುಗಳ ಉತ್ತಮ ಸಾಧನೆ
ಹೊಸಕೋಟೆ : ರಾಮನಗರದಲ್ಲಿ ನಡೆದ 35ನೇ ರಾಜ್ಯಮಟ್ಟದ ಹಿರಿಯರ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯನ್ನು ಪ್ರತಿನಿಧಿಸಿದ್ದ ಪಟ್ಟಣದ ಹಿರಿಯ ಕ್ರೀಡಾಪಟುಗಳು ಉತ್ತಮ ಸಾಧನೆ ತೋರಿ ಕೀರ್ತಿ ತಂದಿದ್ದಾರೆ. ಕ್ರೀಡಾಕೂಟದಲ್ಲಿ ಒಟ್ಟು 12 ಚಿನ್ನ, 15 ಬೆಳ್ಳಿ, ಹಾಗೂ 7ಕಂಚಿನ ಪದಕಗಳನ್ನು ಜಿಲ್ಲೆಯ ಕ್ರೀಡಾಪಟುಗಳು ಸಂಪಾದಿಸಿದ್ದಾರೆ.
ಕ್ರೀಡಾಕೂಟದಲ್ಲಿ ಪ್ರಥಮ, ದ್ವಿತೀಯ ಸ್ಥಾನ ಗಳಿಸಿದವರು ಕೊಯಮತ್ತೂರಿನಲ್ಲಿ ಫೆ.24ರಿಂದ ನಡೆಯಲಿರುವ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳಲು ಅರ್ಹತೆ ಪಡೆದಿದ್ದಾರೆ ಎಂದು ರಾಜ್ಯ ಹಿರಿಯರ ಕ್ರೀಡಾ ಸಂಸ್ಥೆಯ ಜಂಟಿ ಕಾರ್ಯದರ್ಶಿ ಎಚ್.ಸಿ. ಷಣ್ಮುಗಂ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸ್ಥಾನ ಗಳಿಸಿದವರು: ಎಚ್.ಆರ್.ಸೋಮನಾಥ್-ಷಾಟ್ಪುಟ್,ಡಿಸ್ಕಸ್ ಎಸೆತ (ಪ್ರಥಮ), ಎಚ್.ಆರ್.ಶಂಕರ್-ಷಾಟ್ಪುಟ್(ಪ್ರಥಮ),ಡಿಸ್ಕಸ್, ಹ್ಯಾವರ್ ಎಸೆತ, (ದ್ವಿತೀಯ), ಸುಶೀಲಾಮೂರ್ತಿ- ಷಾಟ್ಪುಟ್, ಡಿಸ್ಕಸ್, ಹ್ಯಾಮರ್ ಎಸೆತ,(ಪ್ರಥಮ), ಪಿ.ಮೈತ್ರಿದೇವಿ -ಜಾವೆಲಿನ್, ಹ್ಯಾಮರ್ ಎಸೆತ(ಪ್ರಥಮ), ಕೆಂಪಯ್ಯ- ಹೈಜಂಪ್ (ಪ್ರಥಮ), ಲಾಂಗ್ಜಂಪ್ (ದ್ವಿತೀಯ), ಬಿ.ಎಸ್.ಕನಕ್ ಕುಮಾರ್-ಜಾವೆಲಿನ್(ಪ್ರಥಮ), ಎಸ್.ನಾರಾಯಣಸ್ವಾಮಿ-ಹ್ಯಾಮರ್ (ಪ್ರಥಮ), ಎಲ್ಲಮ್ಮ-ಹ್ಯಾಮರ್ (ಪ್ರಥಮ), ಡಿಸ್ಕಸ್ (ದ್ವಿತೀಯ), ಪೂಜಮ್ಮ-5 ಕಿ.ಮಿ.ನಡಿಗೆ (ಪ್ರಥಮ),500 ಮೀ.ಓಟ (ತೃತೀಯ), ಸೌಭಾಗ್ಯ-100ಮೀ.ಓಟ,ಲಾಂಗ್ಜಂಪ್(ದ್ವಿತೀಯ), ಜಯಪದ್ಮ-ಜಾವೆಲಿನ್,ಹ್ಯಾವರ್ ಎಸೆತ(ದ್ವಿತೀಯ), ಯಶೋದಮ್ಮ-ಜಾವೆಲಿನ್(ದ್ವಿತೀಯ), 100ಮೀ.ಓಟ(ತೃತೀಯ), ಜಯಮ್ಮ-ಲಾಂಗ್ಜಂಪ್ (ದ್ವಿತೀಯ),ಟ್ರಿಪಲ್ ಜಂಪ್, ಡಿಸ್ಕಸ್ ಎಸೆತ(ತೃತೀಯ), ಕೆ.ಮಂಜುನಾಥ್-5 ಕಿ.ಮಿ.ನಡಿಗೆ (ದ್ವಿತೀಯ), 5,000 ಮೀ.ಓಟ(ತೃತೀಯ), ಎನ್.ಜಿ.ಕಾಗಿಲಿ-400 ಮೀ.ಹರ್ಡಲ್ಸ್, 5,000 ಮೀ.ಓಟ(ದ್ವಿತೀಯ),ಎಚ್.ಆರ್.ನಾರಾಯಣಸ್ವಾಮಿ-ಡಿಸ್ಕಸ್ ಎಸೆತ (ದ್ವಿತೀಯ), ಮುನಿರಾಜು- ಷಾಟ್ಪುಟ್ ಎಸೆತ (ತೃತೀಯ), ಜಗನ್ನಾಥ್-ಹ್ಯಾಮರ್ ಎಸೆತ (ತೃತೀಯ).
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

