ಬೆಂಗಳೂರು ಗ್ರಾಮಾಂತರ

5ಕ್ಕೆ ಬೆಂಗಳೂರಲ್ಲಿ ಜನಪದ ಗೀತ ಗಾಯನ

Published On :

ರಾಮನಗರ: ಕರ್ನಾಟಕ ಜಾನಪದ ಪರಿಷತ್‌ನಿಂದ 2013ರ ಸಾಲಿಗೆ ನಾಡೋಜ ಎಚ್.ಎಲ್. ನಾಗೇಗೌಡರ ಪುತ್ರ ಹಾಗೂ ಜಾನಪದ ಪರಿಷತ್ತಿನ ಟ್ರಸ್ಟಿ ದಿವಂಗತ ಎಚ್.ಎನ್. ನಂಜರಾಜ ಸ್ಮರಣಾರ್ಥ ರಾಜ್ಯ ಮಟ್ಟದ ಜನಪದ ಗೀತ ಗಾಯನ ಸ್ಪರ್ಧೆ ಫೆ.5ರಂದು ಬೆಳಗ್ಗೆ 9ಕ್ಕೆ ಬೆಂಗಳೂರಿನ ಜೆ.ಸಿ.ರಸ್ತೆಯ ನಯನ ಸಭಾಂಗಣದಲ್ಲಿ ನಡೆಯಲಿದೆ.  15ರಿಂದ 35 ವರ್ಷದೊಳಗಿನವರು ಸ್ಪರ್ಧೆಯಲ್ಲಿ ಭಾಗವಹಿಸಲು ಅರ್ಹರಾಗಿರುತ್ತಾರೆ. ವಯಸ್ಸಿನ ದೃಢೀಕರಣದ ಬಗ್ಗೆ ದಾಖಲಾತಿ ಹೊಂದಿರಬೇಕು. ಸ್ಪರ್ಧಿಗಳು ಕನಿಷ್ಠ 3 ಗೀತೆಗಳನ್ನು ಹಾಡಲು ಸಿದ್ಧರಿರಬೇಕು. ಹಾಡುವವರ ಸಂಖ್ಯೆ ವಾದ್ಯದವರನ್ನು ಸೇರಿದಂತೆ ಆರನ್ನು ಮೀರಕೂಡದು. ಅವಶ್ಯಕತೆ ಇದ್ದಲ್ಲಿ ಮಾತ್ರ ಸೂಕ್ತ ವಾದ್ಯಗಳನ್ನು ಬಳಸಬಹುದು. ವಾದ್ಯ ಪರಿಕರಗಳನ್ನು ಸ್ಪರ್ಧಿಗಳೇ ತರಬೇಕು. ಆಸಕ್ತರು 50ರ ಪ್ರವೇಶ ಶುಲ್ಕದೊಂದಿಗೆ ಫೆ.2ರೊಳಗೆ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಲು ತಿಳಿಸಿದೆ. ವಿಜೇತರಿಗೆ ಪ್ರಥಮ 5, ದ್ವಿತೀಯ 3, ತೃತೀಯ 2 ಸಾವಿರ ಬಹುಮಾನ ಮತ್ತು ತಲಾ 500ರ ಎರಡು ಸಮಾಧಾನಕರ ಬಹುಮಾನ ನೀಡಲಾಗುವುದು.  ಬಹುಮಾನಗಳನ್ನು ಫೆ.10ರಂದು ಜನಪದ ಲೋಕದಲ್ಲಿ ಪ್ರದಾನ ಮಾಡಲಾಗುವುದು. ಮಾಹಿತಿಗೆ ಜಾನಪದ ಲೋಕದ ಸಂಯೋಜನಾಧಿಕಾರಿ ಡಾ.ಕುರವ ಬಸವರಾಜು, ದೂ. 080-27201143, ಮೊ 9448553375 ಸಂಪರ್ಕಿಸಿ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.