'ಭಾಷೆ ಮಾನವನ ಬೌದ್ಧಿಕ ವಿಕಸನದ ಗುರುತು'
ಚನ್ನಪಟ್ಟಣ: ಭಾಷೆ ಮಾನವನ ಭೌದ್ಧಿಕ ವಿಕಸನದ ಗುರುತಾಗಿದ್ದು ಮಾನವರು ಭಾಷೆಯನ್ನು ಕಲಿಯಲು ಸಾವಿರಾರು ವರ್ಷಗಳೇ ಬೇಕಾಯಿತು ಎಂದು ಉಪನ್ಯಾಸಕ ಎ.ಎಂ. ಮಹೇಶ್ ತಿಳಿಸಿದರು.
ತಾಲೂಕಿನ ಮತ್ತೀಕೆರೆ ಶೆಟ್ಟಿಹಳ್ಳಿ ಸಾರ್ವಜನಿಕ ಕಾಲೇಜಿನಲ್ಲಿ ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ರಸಗ್ರಹಣ ಯೋಜನೆಯಡಿ ಹಮ್ಮಿ ಕೊಂಡಿದ್ದ ಉಪನ್ಯಾಸ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿ ಶಿಲಾಯುಗಗಳು, ಲೋಹ ಯುಗ ಹೀಗೆ ಹಲವು ಯುಗಗಳನ್ನು ದಾಟಿ ನಾಗರಿಕತೆಯನ್ನು ತಲುಪಿದ ಮಾನವನ ಸಂವಹನ ಸಾಧನವಾದ ಭಾಷೆ ನಮ್ಮೆಲ್ಲರ ಪ್ರಗತಿಯಲ್ಲಿ ಪ್ರಮುಖ ಪಾತ್ರ ವಹಿಸಿದೆ ಎಂದರು.
2500 ವರ್ಷಗಳ ಸುದೀರ್ಘ ಇತಿಹಾಸ ಹೊಂದಿರುವ ಕನ್ನಡ ಆಯಾ ಕಾಲಘಟ್ಟದಲ್ಲಿ ತನ್ನದೇ ಆದ ಪ್ರಯೋಗ ಶೀಲತೆಯನ್ನು ಕಂಡಿದೆ ಎಂದು ತಿಳಿಸಿದರು.
ಕನ್ನಡ ಭಾಷೆ ಭೌಗೋಳಿಕ ಮತ್ತು ರಾಜಕೀಯವಾಗಿ ಬಳಕೆಯಾದ ಹಾಗೆಯೇ ಬೆಳವಣಿಗೆ ಹೊಂದಿದ ಬಗೆಯನ್ನು ಕಿಟಲ್ ಮತ್ತು ಬಿ.ಎಲ್.ರೈಸ್ ವಿವರಿಸಿದ್ದು ಕನ್ನಡದ ಬೆಳವಣಿಗೆ ಅಚ್ಚರಿ ಪಡುವಂತಹುದು ಎಂದರು.
ಕಾರ್ಯಕ್ರಮದಲ್ಲಿ ಶಿವಕುಮಾರ್, ಮುಖ್ಯ ಶಿಕ್ಷಕ ಸುರೇಶ್,ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕ ದೇವರಾಜು, ಶಿಕ್ಷಕ ಕೃಷ್ಣೇಗೌಡ, ಸವಿತ, ಚಿಕ್ಕಮಳೂರಯ್ಯ, ಎಂ.ಸಿ.ಮಮತ, ಸಪ್ತಸ್ವರ ಟ್ರಸ್ಟ್ ಕಾರ್ಯದರ್ಶಿ ಎಸ್.ಅಶೋಕ್ ಪ್ರಭು ಮುಂತಾದವರು ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

