ಬೆಂಗಳೂರು ಗ್ರಾಮಾಂತರ

ಮಾನವ ಸಂಪನ್ಮೂಲ ಸಮರ್ಥ ಬಳಕೆಯಾಗಲಿ: ಅಂಗೂರ್

Published On :

ಆನೇಕಲ್: ಮಾನವ ಸಂಪನ್ಮೂಲ ಭಾರತದಲ್ಲಿ ವಿಪುಲವಾಗಿದೆ.  ಯುವ ಶಕ್ತಿಗಳ ಸಮರ್ಥ ಬಳಕೆ ಯಾಗಬೇಕಿದೆ ಎಂದು ಅಲಯನ್ಸ್  ವಿಶ್ವವಿದ್ಯಾಲಯದ ಕುಲಪತಿ ಡಾ. ಮಧುಕರ್ ಅಂಗೂರ್ ತಿಳಿಸಿದ್ದಾರೆ.
ಅವರು ಅಲಯನ್ಸ್ ಬಿಸಿನೆಸ್ ಕಾಲೇಜು ಹಾಗೂ ಅಸೆಂಟ್ ಕಾಲೇಜಿನ ಎಂಬಿಎ ವಿದ್ಯಾರ್ಥಿಗಳಿಗಾಗಿ ಸೋಮವಾರ ಏರ್ಪಡಿಸಿದ್ದ ಮಾನವ ಸಂಪನ್ಮೂಲದ ಸಮರ್ಥ ಬಳಕೆ (ಸಮ್ಮಿಟ್ - 2013) ಕಾರ್ಯಾಗಾರದಲ್ಲಿ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿ ಭಾರತದ ಮಾನವ ಸಂಪನ್ಮೂಲದ ಬಗ್ಗೆ ಚರ್ಚೆ ಮಾಡುತ್ತಿದ್ದ ಕಾಲವು ಮಾಯವಾಗಿ ವಿಶ್ವದ ಇತರ ದೇಶಗಳ ಉತ್ತಮ ಮಾನವ ಸಂಪನ್ಮೂಲಕ್ಕೆ ಸೆಡ್ಡು ಹೊಡೆಯುವಂತಹ ಶ್ರೇಷ್ಠ ಹಾಗೂ ವಿಶಿಷ್ಟವಾದ ಕೌಶಲ್ಯ ತರಬೇತಿ ನೀಡಿದ ವ್ಯಕ್ತಿಗಳನ್ನು ಸೃಷ್ಟಿಸಬೇಕಾದ ಅವಶ್ಯಕತೆ ಇದೆ ಎಂದರು.
ಜಾಗತಿಕ ಬದಲಾವಣೆಯಲ್ಲಿ ಎಲ್ಲ ತರಬೇತಿ ಕೌಶಲ್ಯ ಜಗತ್ತಿನ ಎಲ್ಲ ಮೂಲಗಳಿಂದಲೂ ಎಲ್ಲರಿಗೂ ಲಭ್ಯವಾಗುತ್ತದೆ. ವೈವಿಧ್ಯಮಯ ಹಾಗೂ ವಿಶಿಷ್ಟ  ಕೌಶಲ್ಯಗಳನ್ನು ರೂಢಿಸಿಕೊಳ್ಳುವ ಕಲೆಯನ್ನು ಕರಗತಮಾಡಿಕೊಳ್ಳಬೇಕೆಂದು ಕರೆ ನೀಡಿದರು.
ಉದ್ಯಮಿ ಹಾಗೂ ಸಂಪನ್ಮೂಲ ವ್ಯಕ್ತಿಗಳಾದ ಡಾ. ರೆಬುಕಾ ರೇ ಮತ್ತು ಜೂಲನ್ ಡಿಸೋಜ ಮಾತನಾಡಿ ಸಮಯದ ಸದ್ಬಳಕೆ, ಸಮಯೋಚಿತ ನಿರ್ಧಾರ ಆಧುನಿಕ ವಿಷಯಗಳ ಅರಿವು ಇದ್ದಲ್ಲಿ ಯಾವುದೇ ಸಮಸ್ಯೆಯನ್ನು   ನಿಭಾಯಿಸಬಹುದು. ಗ್ರಹಿಕೆ, ಆಲೋಚನೆ ಹಾಗೂ ನಿರ್ಧಾರಗಳ ಬಗ್ಗೆ ಜಾಗೃತ ಹಾಗೂ ಸ್ಪಷ್ಟ ನಿಲುವನ್ನು ಹೊಂದುವುದೇ ನಾಯಕತ್ವ ಗುಣದ ಪ್ರಮುಖ ಅಂಶ ಎಂದರು.
ಡೀನ್ ರಾಮದಾಸ್ ಸ್ವಾಗತ, ಪರಿಚಯ ಹಾಗೂ ಪ್ರಾಸ್ತಾವಿಕ ನುಡಿದರು. ವಿಷಯ ತಜ್ಞರಾದ ಶ್ರೀಕಾಂತ್,  ಆರ್. ನಂದ, ಅವರು ಕಾರ್ಯಾಗಾರದಲ್ಲಿ ಉಪಯುಕ್ತ ವಿಷಯ ತಿಳಿಸಿದರು.
ಅನುಭವಿ ಉದ್ಯಮಿಗಳು,ವಿಷಯಾಸಕ್ತರು ಭಾಗವಹಿಸಿದ್ದರು.  ಶೈಲಜ, ಗಾಯತ್ರಿ ದೇವಿ ವಂದನೆ ಸಲ್ಲಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.