ಬೆಂಗಳೂರು ಗ್ರಾಮಾಂತರ

ಸಾಮಾಜಿಕ ಸೇವೆಯಿಂದಲೇ ಸಾರ್ಥಕ್ಯದ ಬದುಕು ಸಾಧ್ಯ

Published On :

ದೊಡ್ಡಬಳ್ಳಾಪುರ: ಸೇವೆಗೆ ಅನ್ವರ್ಥವಾಗಿರುವ ಲಯನ್ಸ್ ಸಂಸ್ಥೆ ಹಲವು ರಚನಾತ್ಮಕ ಕಾರ್ಯಕ್ರಮಗಳ ವ್ಯವಸ್ಥಿತ ಅನುಷ್ಠಾನದ ಮೂಲಕ ತನ್ನ ಕಾರ್ಯವ್ಯಾಪ್ತಿಯನ್ನು ಮತ್ತಷ್ಟು ವಿಸ್ತರಿಸಿಕೊಳ್ಳಬೇಕು. ಸಮಾಜಸೇವೆಯ ಮೂಲ ಉದ್ದೇಶ ಎಲ್ಲ ಲಯನ್ ಸದಸ್ಯರ ಧ್ಯೇಯವಾಗಿರಬೇಕು ಎಂದು ಜಿಲ್ಲಾ ರಾಜ್ಯಪಾಲ ಸಿ.ಕೆ.ಕೃಷ್ಣಮೂರ್ತಿ ಅಭಿಪ್ರಾಯಪಟ್ಟರು.
ಇಲ್ಲಿನ ಲಯನ್ಸ್ ಭವನದಲ್ಲಿ ನಡೆದ ವಾರ್ಷಿಕ ಜಿಲ್ಲಾ ರಾಜ್ಯಪಾಲರ ಅಧಿಕೃತ ಭೇಟಿ ವೇಳೆ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ದೊಡ್ಡಬಳ್ಳಾಪುರದ ಲಯನ್ಸ್ ಸಂಸ್ಥೆ ತನ್ನ ವಿಶಿಷ್ಟ ಸೇವಾ ಕಾರ್ಯಗಳ ಮೂಲಕ ಇಡೀ ರಾಜ್ಯದಲ್ಲಿ ಉತ್ತಮ ಹೆಸರುಗಳಿಸಿದೆ. ಈಗ ಈ ಸಂಸ್ಥೆಯ ಮೂಲಕ ಶಾಶ್ವತ ಯೋಜನೆಯೊಂದನ್ನು ರೂಪಿಸಿ ಅನುಷ್ಠಾನದ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಿದ್ದಾರೆ. ಸದ್ಯದಲ್ಲೇ ಇಲ್ಲಿ ತಲೆಎತ್ತಲಿರುವ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಬಡ ಜನರಿಗೆ, ರೋಗಿಗಳಿಗೆ ನೆರವು ನೀಡುವ ಆಶ್ರಯತಾಣವಾಗಲಿ. ಈ ಹಂತದಲ್ಲಿ ಎಲ್ಲ ದಾನಿಗಳ ಸಹಕಾರ ಅನನ್ಯ ಎಂದರು.
ಪ್ರಮಾಣವಚನ: ಇದೇ ಸಂದರ್ಭದಲ್ಲಿ ಲಯನ್ಸ್ ಕ್ಲಬ್ ಅಧ್ಯಕ್ಷರ ಅಕಾಲಿಕ ನಿಧನದಿಂದ ತೆರವಾದ ಅಧ್ಯಕ್ಷ ಸ್ಥಾನಕ್ಕೆ ನೂತನವಾಗಿ ಆಯ್ಕೆಯಾದ ಸಿ.ವೆಂಕಟೇಶ್ ಮತ್ತು ನೂತನ ಕಾರ್ಯದರ್ಶಿಯಾಗಿ ಆರ್.ಎನ್.ನಾಗರಾಜ್ ಮತ್ತು ಖಜಾಂಚಿಯಾಗಿ ಸಿ.ಎಸ್.ರಾಜಶೇಖರ್ ಅವರಿಗೆ ಪ್ರಮಾಣವಚನ ನೀಡಲಾಯಿತು.
ಕಾರ್ಯಕ್ರಮಕ್ಕೂ ಮುನ್ನ ಹಮಾಮ್ ಗ್ರಾಮದಲ್ಲಿ ಪಶು ಆರೋಗ್ಯ ತಪಾಸಣೆ ಶಿಬಿರ, ಬಸವಭವನದ ಬಳಿ ಲಯನ್ಸ್ನಿಂದ ದೊಡ್ಡಬಳ್ಳಾಪುರ ನಗರ ಸ್ವಾಗತ ಫಲಕ, ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ 1.5ಲಕ್ಷ ರು ವೆಚ್ಚದಲ್ಲಿ ಸ್ಥಾಪಿಸಲಾಗಿರುವ ನೀರು ಶುದ್ದೀಕರಣ ಘಟಕಕ್ಕೆ ಚಾಲನೆ ನೀಡಲಾಯಿತು. ನೇಯ್ಗೆ ಬೀದಿ ಶಾಲೆಯಲ್ಲಿನ ಮಕ್ಕಳಿಗೆ ಉಚಿತ ದಂತ ವೈದ್ಯಕೀಯ ಶಿಬಿರ, ಟೂತ್ಬ್ರೆಷ್ ಮತ್ತು ಪೇಸ್ಟ್ ವಿತರಣೆ  ಮಾಡಲಾಯಿತು.
 ಕಾರ್ಯಕ್ರಮದಲ್ಲಿ ಹಲವು ಫಲಾನುಭವಿ ಮಹಿಳೆಯರಿಗೆ ದಾನಿಗಳ ನೆರವಿನಿಂದ ಹೊಲಿಗೆ ಯಂತ್ರಗಳನ್ನು, ಸಿದ್ದೇನಾಯಕನ ಹಳ್ಳಿ ಶಾಲೆ ಮಕ್ಕಳ ಮಧ್ಯಾಹ್ನದ ಬಿಸಿಯೂಟಕ್ಕೆ ತಟ್ಟೆಗಳನ್ನು ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನವನ್ನು ನೀಡಲಾಯಿತು. ಲಯನ್ಸ್ ಸುದ್ದಿ ಮಾಹಿತಿ ಬಿಡುಗಡೆ ಮಾಡಲಾಯಿತು.
ಲಯನ್ಸ್ ಕ್ಲಬ್ ಅಧ್ಯಕ್ಷ ಪಿ.ಸಿ.ವೆಂಕಟೇಶ್ ಅಧ್ಯಕ್ಷತೆ ವಹಿಸಿದ್ದರು.  ಕಾರ್ಯಕ್ರಮದಲ್ಲಿ ಸಿಎಂಜೆಎಫ್ ಪದ್ಮ ಕೃಷ್ಣಮೂರ್ತಿ, ಪಿಎಂಜೆಎಫ್ ಉನ್ನಿಕೃಷ್ಣನ್ ನಾಯರ್, ಸತ್ಯನಾರಾಯಣರಾಜು, ವಲಯ ಚೇರ್ಮನ್ ಎಂ.ಸುಬ್ರಹ್ಮಣ್ಯ, ಲಯನ್ಸ್ ಚಾರಿಟೀಸ್ ಅಧ್ಯಕ್ಷ ಕೆ.ಎಂ.ಹನುಮಂತರಾಯಪ್ಪ, ಲಯನ್ಸ್ ಕಾರ್ಯದರ್ಶಿ ನಾಗಪ್ರಿಯ, ಖಜಾಂಚಿ ರಾಜಶೇಖರ್, ಎಸ್. ನಟರಾಜ್, ಲಯನೆಸ್ ಅಧ್ಯಕ್ಷ ರಾಧಿಕಾ ಶ್ರೀನಿವಾಸ್, ಮಂಜುಳಾಗುಪ್ತಾ, ಕವಿತಾ ರಾಜಶೇಖರ್, ಪುಷ್ಪಾ ಶಿವಶಂಕರ್ ಮತ್ತಿತರರು ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.