ಬೆಂಗಳೂರು ಗ್ರಾಮಾಂತರ

ಮಹಿಳೆಯ ವ್ಯಾನಿಟಿ ಬ್ಯಾಗ್ ಕಸಿದು ನಗದು, ಮೊಬೈಲ್ ಕಳವು

Published On :


ಚನ್ನಪಟ್ಟಣ:  ಬ್ಯಾಂಕ್‌ನ ಖಾತೆಗೆ ಹಣ ಕಟ್ಟುತ್ತಿದ್ದ ಮಹಿಳೆಯ ವ್ಯಾನಿಟಿ ಬ್ಯಾಗ್ ಕಸಿದು 19 ಸಾವಿರ ರು. ನಗದು ಮತ್ತು ಮೊಬೈಲ್ ಕಳವು ಮಾಡಿರುವ ಘಟನೆ ಪಟ್ಟಣದ ಕರ್ನಾಟಕ ಬ್ಯಾಂಕ್‌ನಲ್ಲಿ ನಡೆದಿದೆ.
ಪಟ್ಟಣದ ಚರ್ಚ್ ರಸ್ತೆಯ ನಿವಾಸಿ ರಾಜೇಶ್ವರಿ ಹಣ ಕಳೆದು ಕೊಂಡ ಮಹಿಳೆಯಾಗಿದ್ದು ಹಣ ಕಟ್ಟಲು ಕೌಂಟರ್ ಬಳಿ ನಿಂತಿದ್ದಾಗ ಅಲ್ಲೇ ಇದ್ದ ಕಳ್ಳ ಹಣವಿದ್ದ ಬ್ಯಾಗ್‌ಅನ್ನು ಕಸಿದು ಕೊಂಡು ಪರಾರಿಯಾಗಿದ್ದಾನೆ.
ಘಟನೆಗೆ ಸಂಬಂಧಿಸಿದಂತೆ ಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಬ್ಯಾಂಕ್‌ನಲ್ಲಿ ಕಳವು ಮಾಡಿರುವ ವ್ಯಕ್ತಿಯ ಪತ್ತೆಗೆ ಪೊಲೀಸರು ಸಿಸಿ ಟಿವಿಯಲ್ಲಿ ಸೆರೆಹಿಡಿದಿರುವ ಚಿತ್ರಕ್ಕೆ ಮೊರೆ ಹೋಗಿದ್ದಾರೆ.
ಪುರ ಠಾಣೆಯ ಸನಿಹದಲ್ಲೇ ಇರುವ ಕರ್ನಾಟಕ ಬ್ಯಾಂಕ್‌ನಲ್ಲಿ ಈ ಕೃತ್ಯ ನಡೆದಿರುವುದು ಬ್ಯಾಂಕ್‌ನಲ್ಲಿ ವ್ಯವಹರಿಸಲು ಬರುವ ಗ್ರಾಹಕರಲ್ಲಿ ಆತಂಕ ಮೂಡಿಸಿದೆ.
ವಾಣಿಜ್ಯ ಮಳಿಗೆಗಳ ಮೇಲೆ ದಾಳಿ: ಸಮರ್ಪಕವಾಗಿ ವಾಣಿಜ್ಯ ತೆರಿಗೆ ಪಾವತಿ ಮಾಡದ, ಗ್ರಾಹಕರಿಗೆ ಸೂಕ್ತ ರಶೀದಿ ನೀಡದೆ ವಾಣಿಜ್ಯ ತೆರಿಗೆ ನೀತಿಯನ್ನು ಉಲ್ಲಂಘಿಸಿದ ವಾಣಿಜ್ಯ ಮಳಿಗೆಗಳ ಮೇಲೆ ದಾಳಿಮಾಡಿದ ವಾಣಿಜ್ಯತೆರಿಗೆ ಇಲಾಖೆ ಅಧಿಕಾರಿಗಳು ದಾಖಲಾತಿಗಳನ್ನು ತಪಾಸಣೆ ಮಾಡಿದ್ದಾರೆ.
ಪಟ್ಟಣದ ಜೆ.ಸಿ ರಸ್ತೆ ಮತ್ತು ವಿವಿಧೆಡೆ ಇಲಾಖೆ ಹಿರಿಯ ಅಧಿಕಾರಿಗಳ ಸೂಚನೆಯ ಮೇಲೆಗೆ ದಾಳಿ ಮಾಡಿದ ವಾಣಿಜ್ಯ ತೆರಿಗೆ ಇಲಾಖೆ ಸಿಬ್ಬಂದಿ ಅಂಗಡಿ ಮಾಲೀಕರಿಂದ ವ್ಯತ್ಯಾಸವಾಗಿದ್ದ ತೆರಿಗೆ ಹಣವನ್ನು ವಸೂಲಿ ಮಾಡಿದ್ದಾರೆ.
ಬೆಂಗಳೂರಿನಿಂದ ವಾಣಿಜ್ಯ ತೆರಿಗೆ ಇಲಾಖೆ ಜಾಗಣತತ್ವಿಭಾಗದ ಸಿಬ್ಬಂದಿ ಚಂದು ಎಲೆಕ್ಟ್ರಾನಿಕ್ ಸೇರಿದಂತೆ ವಿವಿಧ ಅಂಗಡಿ ಮಳಿಗೆಗಳ ಮೇಲೆ ದಾಳಿ ನಡೆಸಿ ಅಗತ್ಯವಿರುವ ದಾಖಲೆಗಳನ್ನು ವಶಕ್ಕೆ ಪಡೆದು ತಪಾಸಣೆ ನಡೆಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.