ಜಾನಪದ ಲೋಕ ಪ್ರಶಸ್ತಿಗೆ ಆಯ್ಕೆ
ಕರ್ನಾಟಕ ಜಾನಪದ ಪರಿಷತ್ತಿನ ವಾರ್ಷಿಕ ಪ್ರಶಸ್ತಿಗಳನ್ನು ಪ್ರಕಟಿಸಲಾಗಿದೆ. ಜಾನಪದ ಲೋಕದ ಸ್ಥಾಪಕ ನಾಡೋಜ ಡಾ.ಎಚ್.ಎಲ್.ನಾಗೇಗೌಡ ಜಾನಪದ ಲೋಕಶ್ರೀ ಪ್ರಶಸ್ತಿಗೆ ಜಾನಪದ ವಿದ್ವಾಂಸ ಕ.ರಾ.ಕೃಷ್ಣಸ್ವಾಮಿ, ನಾಡೋಜ ಜಿ.ನಾರಾಯಣ ಜಾನಪದ ಲೋಕಶ್ರೀ ಪ್ರಶಸ್ತಿಗೆ ದಕ್ಷಿಣ ಕನ್ನಡದ ಜಾನಪದ ಸಂಘಟಕ ಡಾ.ಮೋಹನ್ ಆಳ್ವ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಪರಿಷತ್ತಿನ ಅಧ್ಯಕ್ಷ ಟಿ.ತಿಮ್ಮೇಗೌಡ ಹೇಳಿದರು.
ದತ್ತಿನಿಧಿಯ ವಿವಿಧ ಪ್ರಶಸ್ತಿಗಳಿಗೆ ಕೊಪ್ಪಳದ ಬೀರಪ್ಪ ಗೂಳಪ್ಪ ಯಾಡಿಯಾಪುರ, ಧಾರವಾಡದ ಗದಿಗವ್ವ ಈರಯ್ಯ, ತುಮಕೂರಿನ ತಂಗಳಮುದ್ದೆ ಅಮಾಸಮ್ಮ, ಉತ್ತರ ಕನ್ನಡದ ಶ್ರೀಧರ ಷಡಕ್ಷರಿ, ಚಿತ್ರದುರ್ಗದ ಗಂಗಮ್ಮ, ಶಿವಮೊಗ್ಗದ ಗುಡ್ಡಪ್ಪ ಜೋಗಿ, ಬಳ್ಳಾರಿಯ ಗುರುಮೂರ್ತಿ ಪೆಂಡಕೂರು, ಬಳ್ಳಾರಿಯ ಜೋಗೇರ ಗೋಣಪ್ಪ, ರಾಯಚೂರಿನ ಮರಿಯಪ್ಪದಾಸರು ಪಡೆದುಕೊಂಡಿದ್ದಾರೆ ಎಂದು ಅವರು ತಿಳಿಸಿದರು.
ಜಾನಪದ ಲೋಕದ ದತ್ತಿನಿಧಿ ಪ್ರಶಸ್ತಿಗಳಿಗೆ ಬಾಗಲಕೋಟೆಯ ಚೌರವ್ವ ಕಾಶಪ್ಪ ಬಾಗನ್ನವರ, ಗದಗದ ಮಹಮದ್ ಆಲಿ ಕಾ ಸನ್ನಿ, ಗುಲ್ಬರ್ಗದ ಮಾಳಪ್ಪ ಜಾಮದಾರ, ಬೆಳಗಾವಿಯ ಬಸಪ್ಪ ಯಮುನಪ್ಪ ಕೋಲಕಾರ, ಹಾಸನದ ದ್ಯಾಮವ್ವ, ಚಿಕ್ಕಮಗಳೂರಿನ ಹಾಲಪ್ಪ ನಾಯಕ, ಮಂಡ್ಯದ ಚಿಕ್ಕಮಾದಮ್ಮ, ಕೆ.ಆರ್.ಪೇಟೆಯ ಧನೇಂದ್ರಗೌಡ, ಬೆಂಗಳೂರು ಗ್ರಾಮಾಂತರದ ಚಂದ್ರಶೇಖರಯ್ಯ, ರಾಮನಗರದ ಚಿಕ್ಕಪ್ಪಾಜಿ, ತುಮಕೂರಿನ ಲಕ್ಷ್ಮಮ್ಮ, ಉತ್ತರ ಕನ್ನಡದ ಕೃಷ್ಣಮಾಣಿ ಅಗೇರ, ಲಕ್ಷ್ಮಮ್ಮ, ಬಾಗಲಕೋಟೆಯ ಕುಶಾಲಪ್ಪ ತಿಪ್ಪಣ್ಣ ಸಣ್ಣಕ್ಕಿ, ವಿಶೇಷ ಪುರಸ್ಕಾರಕ್ಕೆ ಕೊಪ್ಪಳದ ರಾಜಾರಾಂ, ದಾವಣಗೆರೆಯ ಯುಗಧರ್ಮ ರಾಮಣ್ಣ, ಮುಂಬೈನ ಎಚ್.ಡಿ.ಎಲ್. ರಾವ್, ಕಾಸರಗೋಡಿನ ಸಂಬೈಲು ಸತೀಶ ಅಡೆಪ್ಪ ಪಡೆದುಕೊಂಡಿದ್ದಾರೆ ಎಂದು ತಿಮ್ಮೇಗೌಡ ವಿವರಿಸಿದರು.
ಪ್ರಶಸ್ತಿಯನ್ನು ರಾಮನಗರದ ಜಾನಪದ ಲೋಕದಲ್ಲಿ ಫೆ.10ರಂದು ಸಂಜೆ 5.30ಕ್ಕೆ ನಡೆಯುವ ಜಾನಪದ ಲೋಕೋತ್ಸವದಲ್ಲಿ ಪ್ರದಾನ ಮಾಡಲಾಗುವುದು. ಮೂರು ದಿನದ ಉತ್ಸವದಲ್ಲಿ 30ಕ್ಕೂ ಹೆಚ್ಚು ಕಲಾತಂಡಗಳು ಭಾಗವಹಿಸಲಿವೆ. ಆಹಾರ ಮೇಳ ಹಾಗೂ ಕರಕುಶಲ ಮೇಳ ನಡೆಯಲಿದ್ದು, ಈ ಮೂರು ದಿನಗಳು ಸಾರ್ವಜನಿಕರಿಗೆ ಜಾನಪದ ಲೋಕಕ್ಕೆ ಉಚಿತ ಪ್ರವೇಶವಿರುತ್ತದೆ ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

