ಕರ್ತವ್ಯಕ್ಕೆ ಅಡ್ಡಿ: 11 ಮಂದಿ ವಿರುದ್ಧ ದೂರು
ಸೂಲಿಬೆಲೆ: ಕಾನೂನು ಮತ್ತು ಸುವ್ಯವ್ಯಸ್ಥೆ ಕಾಪಾಡಲು ಅರಸನಹಳ್ಳಿ ಗ್ರಾಮಕ್ಕೆ ಹೋದ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದ ಮೇಲೆ 11 ಜನರ ವಿರುದ್ಧ ಸೂಲಿಬೆಲೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಗ್ರಾಮದಲ್ಲಿ ಎರಡು ಗುಂಪುಗಳ ಮಧ್ಯೆ ಗಲಾಟೆ ನಡೆಯುತ್ತಿದೆ ಎಂಬ ಮಾಹಿತಿ ಮೇರಿಗೆ ಪರಿಸ್ಥಿತಿ ನಿಯಂತ್ರಣಕ್ಕಾಗಿ ಪಿಎಸ್ಐ ರಾಜಣ್ಣ ಸಿಬ್ಬಂದಿಯೊಂದಿಗೆ ಗ್ರಾಮಕ್ಕೆ ತೆರಳಿದ್ದರು. ಈ ವೇಳೆ ಗುಂಪು ಕಟ್ಟಿಕೊಂಡು ಬಂದ ಚನ್ನಪ್ಪ, ನಾರಾಯಣಸ್ವಾಮಿ, ಸೋಮಶೇಖರ್, ದೇವರಾಜ್, ವೆಂಕಟರಮಣಪ್ಪ,ಪುಟ್ಟರಾಜು, ಕರಿಗೌಡ, ರಾಜ, ಮುನೇಗೌಡ, ನಾಗರಾಜ, ಮಂಜುನಾಥ ಎಂಬವರು ಏರುದನಿಯಲ್ಲಿ ಮಾತಾಡುತ್ತಲೇ ಪೊಲೀಸ್ ವಾಹನವನ್ನು ಸುತ್ತುವರಿ ಗಲಾಟೆ ಎಬ್ಬಿಸಿದರು.
ಈ ಸಂದರ್ಭ ಚನ್ನಪ್ಪ, ನಾರಾಯಣಸ್ವಾಮಿ ಇತರರು ಅವಾಚ್ಯ ಶಬ್ಬಗಳಿಂದ ಬೈಯ್ದ ಪರಿಣಾಮ ಪ್ರಕ್ಷುಬ್ಧವಾಯಿತು. ದೇವರಾಜ್, ಸೋಮಶೇಖರ್, ಇತರರು ಪೊಲೀಸ್ ವಾಹನವನ್ನು ಹಿಡಿದು ಅಲ್ಲಾಡಿಸಿದ್ದಲ್ಲದೆ, ಗ್ರಾಮದ ಒಳಗೆ ವಾಹನ ಬಿಡಲು ಅಡ್ಡಿಪಡಿಸಿ ಹಿಂದಿರುಗುವಂತೆ ಹೇಳಿದ್ದಾರೆ. ಇದರಿಂದ ಪೊಲೀಸರು 11 ಮಂದಿ ವಿರುದ್ಧ ದೂರು ದಾಖಲಿಸಿ ಮುಂದಿನ ಕ್ರಮ ಜರುಗಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

