ಬೆಂಗಳೂರು ಗ್ರಾಮಾಂತರ

ಕುಂದುಕೊರತೆಗಳ ಪರಿಶೀಲನಾ ಸಭೆ

Published On :

ಕನಕಪುರ: ಕನಕಪುರದ ತಾಪಂ ಸಭಾಂಗಣದಲ್ಲಿ ಶಾಸಕ ಡಿ.ಕೆ. ಶಿವಕುಮಾರ್ ಅಧ್ಯಕ್ಷತೆಯಲ್ಲಿ ಪರಿಶಿಷ್ಟಜಾತಿ, ವರ್ಗಗಳ ಕುಂದುಕೊರತೆಗಳ ಪರಿಶೀಲನಾ ಸಭೆ ನಡೆಯುತು.
 ತಾಪಂ ಕಾರ್ಯನಿರ್ವಹಣಾಧಿಕಾರಿ ಜಿ.ಜೆ. ನಾಯಕ್ ಹಾಗೂ ಪುರಸಭಾ ಮುಖ್ಯಾಧಿಕಾರಿ ಮಾಯಣ್ಣಗೌಡ ಕಲಾಪಗಳನ್ನು ಮಂಡಿಸಿದರು. ತಹಸೀಲ್ದಾರ್ ಡಾ.ದಾಕ್ಷಾಯಣಿ ಪಾಲ್ಗೊಂಡಿದ್ದರು.
 ಸಭೆಯಲ್ಲಿ ವಾದಪ್ರತಿವಾದಗಳು ನಡೆದು ಜೋರುಮಾತಿನ ಚರ್ಚೆಗಳಿಂದ ಗೊಂದಲದ ಗೂಡಾಗಿ ಪರಿವರ್ತನೆಗೊಂಡಿತು. ದಲಿತ ಮುಖಂಡರುಗಳು ತಹಸೀಲ್ದಾರರು ದಲಿತರನ್ನು ಉಪೇಕ್ಷಿಸುತ್ತಿದ್ದಾರೆ, ಕಾರ್ಯಗಳನ್ನು ಸಮರ್ಪಕವಾಗಿ ನಿರ್ವಹಿಸುತ್ತಿಲ್ಲ ಎಂದು ಆಕ್ಷೇಪಿಸಿದರು. ದಲಿತ ಮುಖಂಡರುಗಳ ಕೋಪತಾಪಗಳು ಸಮಾಜಕಲ್ಯಾಣ ಅಧಿಕಾರಿ ಬಾಲಚಂದ್ರ ಅವರನ್ನೂ ಬಿಡಲಿಲ್ಲ.  ಕೊನೆಗೆ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಶಾಸಕ ಡಿ.ಕೆ. ಶಿವಕುಮಾರ್, ತಾವು ದಲಿತ ವಿರೋಧಿಯಲ್ಲ, ತಾಲೂಕಿನಲ್ಲಿ  ದಲಿತರ ಅಭೃದ್ಧಿಗೆ ಹತ್ತು ಹಲವು ಯೋಜನೆಗಳನ್ನು ಅನುಷ್ಠಾನಗೊಳಿಸಿದ್ದೇನೆ, ಪ್ರತಿಯೊಂದು ದಲಿತ ಕುಟುಂಬಕ್ಕೂ ನಿವೇಶನ, ಮನೆ ದೊರೆಯುವಂತೆ ಮಾಡುತ್ತಿದ್ದೇನೆಎಂದು ಹೇಳಿದರು.  ಸಭೆಯಲ್ಲಿ ಬಿಎಸ್ಪಿ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ, ಜೆ.ಎಂ. ಶಿವಲಿಂಗಯ್ಯ, ಗೋಪಿ, ಮಲ್ಲೇಶ್,ನೀಲಿ ರಮೇಶ್, ಮಹದೇವ ನಾಯಕ್, ರಾಂಪುರ ನಾಗೇಶ್, ರಾಜಗೋಪಾಲ, ಕೋಟೆಕುಮಾರ್, ವೃತ್ತನಿರೀಕ್ಷಕ ಧನಂಜಯ, ಅಶೋಕ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.