ಬೆಂಗಳೂರು ಗ್ರಾಮಾಂತರ

ನೇತ್ರಾವತಿ ತಿರುವು ಯೋಜನೆಗೆ ಚಾಲನೆ 24ಕ್ಕೆ

Published On :

ಯಲಹಂಕ: ಈ ತಿಂಗಳ 24ರಂದು ನಂದಿಬೆಟ್ಟದ ತಪ್ಪಲಿನ ಸಮೀಪದಲ್ಲಿ 800ಕೋಟಿ ವೆಚ್ಚದಲ್ಲಿ ನೇತ್ರಾವತಿ ತಿರುವು ಯೋಜನೆಗೆ ಚಾಲನೆ ನೀಡಲಾಗುವುದು ಎಂದು ಶಾಸಕ ಎಸ್.ಆರ್. ವಿಶ್ವನಾಥ್ ಹೇಳಿದರು.
ಬೆಂಗಳೂರು ಉತ್ತರ ತಾಲೂಕು ಸೊಣ್ಣೇನಹಳ್ಳಿಯಲ್ಲಿ ರೈತ ಸೇವಾ ಸಹಕಾರ ಸಂಘದ ನೂತನ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿದ ಅವರು, ನದಿ ಪುನಶ್ಚೇತನ ಯೋಜನೆಗೆ ಮುಂದಾಗಿದ್ದು ಇದಕ್ಕಾಗಿ 1800 ಕೋಟಿ ಮೀಸಲಿರಿಸಿದೆ.
ಇದರಲ್ಲಿ ಈ ವರ್ಷ 800 ಕೊಟಿ ಬಿಡುಗಡೆಯಾಗಿದ್ದು ಶಾಶ್ವತ ಕುಡಿಯುವ ಯೋಜನೆಗೆ ಗುದ್ದಲಿ ಪೂಜೆ ನೆರವೇರಿಸಲಾಗುವುದು. ಮೂರು ವರ್ಷಗಳಲ್ಲಿ ಕಾಮಗಾರಿ ಮುಗಿಯಲಿದೆ ಎಂದರು.
50 ಸಾವಿರ ಸಾಲ ಮಿತಿ: ಸರ್ಕಾರ ಸಣ್ಣ ಹಿಡುವಳಿದಾರರಿಗೆ ಅಲ್ಪಾವಧಿ ಸಾಲ ರು. 3ಲಕ್ಷ,  ಮಧ್ಯಮಾವಧಿ ಸಾಲವಾಗಿ 10 ಲಕ್ಷ ನೀಡುವಂತೆ ನಿಗದಿಪಡಿಸಿದ್ದರೂ ಸಹಕಾರ ಸಂಘಗಳ ಮೂಲಕ 50 ಸಾವಿರ ಮಾತ್ರ ನೀಡುತ್ತಿದ್ದಾರೆ. ಸಹಕಾರ ಸಂಘಗಳು ಸರ್ಕಾರ ನಿಗದಿ ಪಡಿಸಿರುವ ನಿಯಮವನ್ನು ಪಾಲಿಸಲು ಸಹಕಾರ ಸಂಘಗಳು ಮುಂದಾಗಬೇಕಾಗಿದೆ ಎಂದು ಸಲಹೆ ನೀಡಿದರು.
ರಾಷ್ಟ್ರೀಯ ಸಹಕಾರಿ ಅಭಿವೃದ್ಧಿ ಕ್ಷೇತ್ರಿಯ ನಿರ್ದೇಶಕ ಡಾ.ಕೆ.ಟಿ.ಚನ್ನೇಶಪ್ಪ, ಸಹಕಾರ ಸಂಘಗಳ ಮೂಲಕ ನೀಡುವ ಸವಲತ್ತುಗಳ ವಿವರ ತಿಳಿಸಿದರು. ಗೋದಾಮು, ಸಾಗಣಿಕೆ ವ್ಯವಸ್ಥೆ, ಶಿಥಲೀಕರಣ ಕೇಂದ್ರ, ಸಂಸ್ಕರಣಾ ಘಟಕ ಸ್ಥಾಪಿಸಲು ಸಹಾಯಧನ ಸಾಲ ಸೌಲಭ್ಯ ನೀಡಲಾಗುವುದು ಎಂದರು.
ಜಿಪಂ ಅಧ್ಯಕ್ಷೆ ವಾಣಿಶ್ರೀ ವಿಶ್ವನಾಥ್, ಸದಸ್ಯರಾದ ಮಾರೇಗೌಡ  ಮುಖಂಡರಾದ ಬಯಣ್ಣ ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.