ಬೆಂಗಳೂರು ಗ್ರಾಮಾಂತರ

ಗ್ಯಾಸೋಲಿನ್ ಎಂಜಿನ್ ಘಟಕ ಉದ್ಘಾಟನೆ

Published On :

ರಾಮನಗರ: ಟೊಯೋಟಾ ಸಂಸ್ಥೆಯಿಂದ ಭಾರತದಲ್ಲಿ ನಡೆಯುತ್ತಿರುವ ಕಾರ್ಯಾಚರಣೆಯು ಸಂಸ್ಥೆಯ ಜಾಗತಿಕ ತಂತ್ರಗಾರಿಕೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ ಎಂದು  ಟಿಕೆಎಂ ಉಪಾಧ್ಯಕ್ಷ ವಿಕ್ರಂ ಕಿರ್ಲೋಸ್ಕರ್ ಹೇಳಿದರು.
ಬಿಡದಿ ಬಳಿಯ ಟಿಕೆಎಂನಲ್ಲಿ ಶುಕ್ರವಾರ ನಡೆದ ಟೊಯೋಟಾ ಕಿರ್ಲೋಸ್ಕರ್ ಆಟೋ ಬಿಡಿ ಭಾಗಗಳ ಗ್ಯಾಸೋಲಿನ್ ಎಂಜಿನ್ ಮತ್ತು ಪ್ರಸರಣಾ ಘಟಕದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ನೂತನ ಘಟಕವು ಸಂಸ್ಥೆಯ ಅಭಿವೃದ್ಧಿ ನಿಟ್ಟಿನಲ್ಲಿ ಮತ್ತೊಂದು ಮೈಲುಗಲ್ಲು ಎಂದರು.
ಈಟಿಯೋಸ್ ಕಾರನ್ನು ಸಂಸ್ಥೆಯು ಭಾರದ ಮಾರುಕಟ್ಟೆಗಾಗಿಯೇ ಪರಿಚಯಿಸಿದೆ.  ಈಟಿಯೋಸ್ ಎಂಜಿನ್ ಹಾಗೂ ಪ್ರಸರಣದ ಉತ್ಪಾದನೆಯೊಂದಿಗೆ ಸಂಸ್ಥೆಯ ಸ್ಥಳೀಯ ಉತ್ಪಾದನೆ ಪ್ರಮಾಣವು ಸರಾಸರಿ ಶೇ.90ಕ್ಕೆ ಏರಿದಂತಾಗಿದೆ ಎಂದು ತಿಳಿಸಿದರು.  
500 ಕೋಟಿ ಹೂಡಿಕೆ: ನೂತನ ಘಟಕ ಸ್ಥಾಪನೆಗೆ ಸಂಸ್ಥೆಯು ರು.500 ಕೋಟಿ ಬಂಡವಾಳ ಹೂಡಿದ್ದು, ಎಂಜಿನ್ಘ್ಟಕದ ವಾರ್ಷಿಕ ಉತ್ಪಾದನೆ ಸಾಮರ್ಥ್ಯ 1.08 ಲಕ್ಷ ಯೂನಿಟ್ ಮತ್ತು ಪ್ರಸರಣಾ ಘಟಕದ ಸಾಮರ್ಥ್ಯ 2.40 ಲಕ್ಷ ಯೂನಿಟ್ನಷ್ಟು ಹೆಚ್ಚಳವಾಗಿದೆ ಎಂದು  ಟಿಕೆಎಪಿಯ ವ್ಯವಸ್ಥಾಪಕ ನಿರ್ದೇಶಕ ಯುಜಿ ಹಿರಾವಕ ಹೇಳಿದರು. ನೂತನ ಘಟಕದಿಂದ ಸಂಸ್ಥೆಯಲ್ಲಿ 500 ಉದ್ಯೋಗಗಳು ಸೃಷ್ಟಿಯಾಗಿದ್ದು, ಸರಬರಾಜುದಾರರ ಕಡೆಯಿಂದಲೂ ಸಾಕಷ್ಟು ಉದ್ಯೋಗಾವಕಾಶ ದೊರೆತಂತಾಗಲಿದೆ ಎಂದರು. ಮಧ್ಯಮ ಮತ್ತು ಬೃಹತ್ ಕೈಗಾರಿಕೆ ಸಚಿವ ಮುರುಗೇಶ್ ನಿರಾಣಿ ಅವರು ಶಿಲಾನ್ಯಾಸ ನೆರವೇರಿಸಿದರು. ಮಾಜಿ ಸಚಿವ ಆರ್.ವಿ. ದೇಶಪಾಂಡೆ, ಟಯೋಟಾ ಸಂಸ್ಥೆಯ  ಟಾಕಾಹಿರೋ ಇವಾಸೆ,  ಶೇಖರ್ ವಿಶ್ವನಾಥನ್, ಹಿರೋಷಿ ನಾಕಾಗಾವ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.