ಬೆಂಗಳೂರು ಗ್ರಾಮಾಂತರ

ದೇವನಹಳ್ಳಿ ಪುರಸಭೆ: 92 ನಾಮಪತ್ರ 14 ಸ್ಥಾನ ಅವಿರೋಧ ಆಯ್ಕೆ ಸಂಭವ

Published On :

ದೇವನಹಳ್ಳಿ: ಮಾ.7 ರಂದು ನಡೆಯುವ ದೇವನಹಳ್ಳಿ ಪುರಸಭಾ ಚುನಾವಣೆಗೆ ನಾಮಪತ್ರ ಸಲ್ಲಿಸಲು ಕೊನೆಯ ದಿನವಾದ ಶನಿವಾರ  23 ವಾರ್ಡ್ಗಳಿಗೆ 92 ನಾಮಪತ್ರಗಳು ಸಲ್ಲಿಕೆಯಾಗಿವೆ.
 ವಿಶೇಷವೆಂದರೆ ವಾರ್ಡ್ ನಂ. 14ರಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ವೈ.ಸಿ.ಸತೀಶ್ಕುಮಾರ್ ಒಬ್ಬರೇ ನಾಮಪತ್ರ ಸಲ್ಲಿಸಿದ್ದಾರೆ. ಈ ವಾರ್ಡಿನಲ್ಲಿ ಯಾವುದೇ ರಾಜಕೀಯ ಪಕ್ಷಗಳ ಅಥವ ಪಕ್ಷೇತರ ಅಭ್ಯರ್ಥಿಗಳಾಗಲಿ ನಾಮಪತ್ರ ಸಲ್ಲಿಸಿಲ್ಲ. ಫೆ.25 ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದ್ದು ಸತೀಶ್ಕುಮಾರ್ ಅವರ ನಾಮಪತ್ರ ಸ್ವೀಕಾರವಾದರೆ ಅಧಿಕೃತವಾಗಿ ಅವಿರೋಧ ಸದಸ್ಯರಾಗಿ ಆಯ್ಕೆಯಾಗುತ್ತಾರೆ.
    ಫೆ.22 ರಂದು 32 ನಾಮಪತ್ರಗಳು ಸಲ್ಲಿಕೆಯಾಗಿದ್ದು ಶನಿವಾರ 59 ಮಂದಿ ತಮ್ಮ ನಾಮಪತ್ರ ಸಲ್ಲಿಸಿದ್ದಾರೆ. ಪ್ರಮುಖವಾಗಿ ಮಾಜಿ ಅಧ್ಯಕ್ಷರಾದ ರತ್ನಮ್ಮ ಗಾರೆ ರವಿಕುಮಾರ್, ವಿ. ಪದ್ಮಾವತಮ್ಮ, ಸದಸ್ಯರುಗಳಾಗಿದ್ದ ಜಿ.ಜನಾರ್ದನ್, ಎನ್.ರಘು, ಜಿ.ಎನ್. ವೇಣುಗೋಪಾಲ್,  ಸೋಮಶೇಖರ ಬಾಬು, ಜಿ.ಎ. ರವೀಂದ್ರ, ವಿ.ಹನುಮಂತಪ್ಪ, ಆರ್.ಕುಮಾರ್,  ಕೃಷ್ಣಕುಮಾರಿ, ಆರ್.ನಾರಾಯಣಸ್ವಾಮಿ, ಅನಂತಕುಮಾರಿ, ಕಸ್ತೂರಿ ಮಂಜುನಾಥ್, ಕಣದಲ್ಲಿ ಇದ್ದಾರೆ. ಪತ್ರಕರ್ತ ಶಾಂತಮೂರ್ತಿ ನಾಮಪತ್ರ ಸಲ್ಲಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.