ಬೆಂಗಳೂರು ಗ್ರಾಮಾಂತರ

'ಆತ್ಮವಿಶ್ವಾಸದ ಬದುಕಿಗೆ ಕ್ರೀಡೆ ಸಹಕಾರಿ'

Published On :

ದೊಡ್ಡಬಳ್ಳಾಪುರ: ಕ್ರೀಡಾ ಚಟುವಟಿಕೆಗಳ ಮೂಲಕ ಬದುಕು ಕಟ್ಟುವ ಕಾಯಕ ಆಗಬೇಕಿದೆ. ಆತ್ಮವಿಶ್ವಾಸದ ಬದುಕಿಗೆ ಮತ್ತು ಜೀವನಪ್ರೀತಿಗೆ ಕ್ರೀಡೆ ಸಹಕಾರಿ ಎಂದು ಕೊಂಗಾಡಿಯಪ್ಪ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಸಂಜೀವಕುಮಾರ್ ಹೇಳಿದರು. ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ನೇತೃತ್ವದಲ್ಲಿ ಬೆಂ.ಗ್ರಾ.ಜಿಲ್ಲಾ ಕಸಾಪ ಸಹಯೋಗದಲ್ಲಿ ನಡೆದ ಗಂಗಹನುಮಯ್ಯ-ಗಂಗಹನುಮಕ್ಕ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಗ್ರಾಮಾಂತರ ಪ್ರದೇಶಗಳಲ್ಲಿ ಕ್ರೀಡೆಗಳ ಮಹತ್ವ ವಿಷಯದ ಕುರಿತು ಮಾತನಾಡಿದರು. ಇಂದು ಜೀವನೋತ್ಸಾಹ ಕಡಿಮೆಯಾಗುತ್ತಿದೆ. ದೈಹಿಕ ಮತ್ತು ಮಾನಸಿಕವಾಗಿ ನಾವು ಬಲಹೀನರಾಗುತ್ತಿದ್ದೇವೆ. ಜಾಗತಿಕ ಮಟ್ಟದಲ್ಲಿ ನಮ್ಮ ನೆಲದ ಸೊಗಡನ್ನು ಅತ್ಯಂತ ಯಶಸ್ವಿಯಾಗಿ ಪ್ರದರ್ಶಿಸುವುದು ಮತ್ತು ದೇಶದ ಘನತೆಯನ್ನು ಸಾರ್ವಜನಿಕವಾಗಿ ಅಭಿವ್ಯಕ್ತಿಸುವುದು ಕ್ರೀಡಾಪಟುವಿಗೆ ಮಾತ್ರ ಸಾಧ್ಯ. ವಿಶ್ವ ಭ್ರಾತೃತ್ವ, ವಿಶಾಲ ಆಲೋಚನಾ ಮನೋಭಾವ, ನಾಯಕತ್ವ, ಸೌಜನ್ಯ, ಸೋಲು-ಗೆಲವನ್ನು ಸಮಾನವಾಗಿ ಸ್ವೀಕರಿಸುವ ಮನೋಭಾವನೆಗಳು ಕ್ರೀಡಾಳುಗಳಲ್ಲಿ ಮೇಳೈಸಿರುತ್ತವೆ. ಇದು ಯಶಸ್ವೀ ಬದುಕಿನ ಗುಟ್ಟೂ ಹೌದು ಎಂದು ಅವರು ವಿಶ್ಲೇಷಿಸಿದರು.
ಕುವೆಂಪು ಅವರ  ದೀಕ್ಷೆಯ ತೊಡು ಇಂದೆ, ಕಂಕಣ ಕಟ್ಟಿಂದೆ, ಕನ್ನಡ ನಾಡೊಂದೆ...ಎಂದೆಂದೂ ತಾನೊಂದೆ  ಎಂಬ ಸಾಲುಗಳನ್ನು ವಾಚಿಸುವ ಮೂಲಕ ಕಾಲೇಜಿನ ಪ್ರಾಂಶುಪಾಲ ಪ್ರೊ.ಎಸ್.ಪಿ.ರಾಜಣ್ಣ ಕಾರ್ಯಕ್ರಮ ಉದ್ಘಾಟಿಸಿದರು. ಕಸಾಪ ಮೂಲಭೂತ ಚಿಂತನೆಗಳನ್ನು ವಿದ್ಯಾರ್ಥಿಗಳಲ್ಲಿ ಬಿತ್ತುವ ಉತ್ತಮ ಕೆಲಸ ಮಾಡುತ್ತಿದೆ. ಸಮಾಜಸ್ನೇಹಿ ವಿಚಾರಗಳ ಮೂಲಕ ವಿದ್ಯಾರ್ಥಿಗಳ ಹೊಣೆಗಾರಿಕೆಯ ಬಗ್ಗೆ ಅರಿವು ಮೂಡಿಸುವುದು ಉತ್ತಮ ಕೆಲಸ ಎಂದರು. ತಾ.ಕಸಾಪ ಅಧ್ಯಕ್ಷ ಕೆ.ಆರ್.ರವಿಕಿರಣ್ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಸಿ.ರಾಮಚಂದ್ರಯ್ಯ, ಕಸಾಪ ತಾ.ಕಾರ್ಯದರ್ಶಿ ಕೆ.ಎಚ್.ಪ್ರವೀಣ್, ಉಪನ್ಯಾಸಕ ದೇವರಾಜ್, ಎನ್ಎಸ್ಎಸ್ ಅಧಿಕಾರಿ ಶ್ರೀನಿವಾಸಯ್ಯ, ಆಂಗ್ಲ ವಿಭಾಗದ ಮುಖ್ಯಸ್ಥ ರಘುಕುಮಾರ್, ಕರವೇ ಜಿಲ್ಲಾ ಮುಖಂಡ ಟಿ.ಜಿ.ಮಂಜುನಾಥ್, ರಾಜಘಟ್ಟ ರವಿ ಇತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.