ಆಫ್ರಿಕನ್ ಕ್ಯಾಟ್ಫಿಷ್ ಸಾಕಣೆ ಅಬ್ಬರ, ವಾಸನೆಯಿಂದ ಜನ ತತ್ತರ...
ಸೂಲಿಬೆಲೆ: ಯಲಹಂಕ ಸುತ್ತಮುತ್ತ ಖಾಲಿಯಾದ ನಿಷೇಧಿತ ಆಫ್ರಿಕನ್ ಕ್ಯಾಟ್ ಫಿಷ್ ಸೂಲಿಬೆಲೆಗೆ ಒಕ್ಕರಿಸಿಕೊಂಡಿದ್ದು, ಸಾಕಣಿಕೆಗೆ ಬಳಿಸುತ್ತಿರುವ ಆಹಾರ ಪದಾರ್ಥಗಳಿಂದ ಬರುತ್ತಿರುವ ವಾಸನೆ ಜನರ ನೆಮ್ಮದಿಗೆ ಭಂಗತಂದಿದೆ.ಸೂಲಿಬೆಲೆ ಹೊರವಲಯದ ಬೆಟ್ಟಹಳ್ಳಿ ಕೆರೆ ಅಂಗಳದಲ್ಲಿ ಕಳೆದ ಒಂದು ತಿಂಗಳಿಂದ ರಾಜಾರೋಷವಾಗಿ ನಿಷೇಧಿತ ಆಫ್ರಿಕನ್ ಕ್ಯಾಟ್ಫಿಷ್ ಸಾಕಣಿಕೆ ಮಾಡಲು ಸುಮಾರು 95 ಹೊಂಡಗಳನ್ನು ನಿರ್ಮಿಸಿದ್ದು, ಆಫ್ರಿಕನ್ ಕ್ಯಾಟ್ ಫಿಷ್ ದಂದೆ ಸದ್ದಿಲ್ಲದೆ ಸೂಲಿಬೆಲೆ ಸುತ್ತಮುತ್ತ ಆಕ್ರಮಿಸಿಕೊಳ್ಳುತ್ತಿವೆ. ಯಾವುದೇ ಅನುಮತಿಯಲ್ಲದೆ ನಡೆಸುತ್ತಿರುವ ಹೊಂಡಗಳಲ್ಲಿ ಸಾಕುವ ಫಿಷ್ಗಳಿಗೆ ಸತ್ತ ಕೋಳಿ, ನಾಯಿ, ರೇಷ್ಮೆ ಹುಳು ಇತ್ಯಾದಿ ಪ್ರಾಣಿಗಳ ಮಾಂಸ ಬೇಯಿಸಿ ಹಾಕುತ್ತಿರುವುದು ಪರಿಸರ ಹಾಳಾಗಲು ಕಾರಣವಾಗುತ್ತಿದೆ. ಇದಕ್ಕೆ ಹಾಕುವ ಮಾಂಸದ ಚೂರುಗಳನ್ನು ತಿನ್ನಲು ಪುಂಡ ನಾಯಿಗಳ ಹಾವಳಿ ಹೆಚ್ಚಾಗಿ ತಮ್ಮ ಸಂತತಿಯನ್ನು ಹೆಚ್ಚಿಸಿಕೊಂಡು ಜನರಿಗೆ ಕಿರಿಕಿರಿಯನ್ನುಂಟುಮಾಡುತ್ತಿವೆ. ಪದಾರ್ಥಗಳು ಅನೈಸರ್ಗೀಕವಾಗಿರುವ ಕಾರಣ ವಿಪರೀತ ವಾಸನೆ ಹರಡಿ ಸಮಸ್ಯೆಯನ್ನು ಸೃಷ್ಟಿಸುತ್ತಿವೆ ಎಂದು ಗ್ರಾಮಸ್ಥರು ದೂರಿದ್ದಾರೆ. ಒಂದು ಮೂಲದ ಪ್ರಕಾರ ಬಾಗಲೂರಿನಲ್ಲಿ ಈ ದಂದೆಯನ್ನು ನಡೆಸುತ್ತಿರುವ ವ್ಯಕ್ತಿಗಳು ಅಲ್ಲಿಂದ ಎತ್ತಂಗಡಿಯಾದ ನಂತರ ಸೂಲಿಬೆಲೆಗೆ ಬಂದ ಇಲ್ಲಿನ ಮಾರ್ವೆ ಮೀನುಗಳನ್ನು ಸಾಕುತ್ತಿದ್ದ ಹೊಂಡಗಳನ್ನು 1.5 ಲಕ್ಷಕ್ಕೆ ಒಂದರಂತೆ ಖರೀದಿಸಿದ್ದಾರೆ ಎನ್ನಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

