'ಗುರು-ಶಿಷ್ಯರ ಸಂಬಂಧ ವೃದ್ಧಿಸಲಿ'
ಚನ್ನಪಟ್ಟಣ: ಶಿಕ್ಷಣ ಕ್ಷೇತ್ರದಲ್ಲಿ ಹೊಸದಾಗಿ ಅಳವಡಿಸಲಾಗುತ್ತಿರುವ ನಿಯಮಾವಳಿಗಳಿಂದಾಗಿ ಗುರುಗಳ ಬಗ್ಗೆ ಮಕ್ಕಳಲ್ಲಿದ್ದ ಗೌರವಕ್ಕೆ ಧಕ್ಕೆಯಾಗುತ್ತಿದೆ ಎಂದು ದೈಹಿಕ ಶಿಕ್ಷಣ ಸಂಯೋಜಕ ಕೆಂಪರಾಜು ಅಭಿಪ್ರಾಯಪಟ್ಟರು.
ತಾಲೂಕಿನ ಮಾರ್ಚನಹಳ್ಳಿ ಗ್ರಾಮದ ಸರ್ಕಾರಿ ಶಾಲೆಗೆ ಮುದುಗೆರೆ ಎಸ್ಬಿಎಂ ವತಿಯಿಂದ ಸೀಲಿಂಗ್ ಫ್ಯಾನ್‌ಅನ್ನು ಕೊಡುಗೆಯಾಗಿ ಸ್ವೀಕರಿಸಿ ಮಾತನಾಡಿ, ಹೊಸ ನಿಯಮಾವಳಿಗಳು ಗುರುಶಿಷ್ಯರನ್ನು ದೂರ ಮಾಡದೆ ಅವರಿಬ್ಬರ ನಡುವೆ ಉತ್ತಮ ಬಾಂಧವ್ಯ ಬೆಸೆಯುವಂತಿರಬೇಕೆಂದು ಅಭಿಪ್ರಾಯಪಟ್ಟರು.
ಯಾವುದೇ ಶಿಕ್ಷಕ ವಿದ್ಯಾರ್ಥಿಗಳನ್ನು ಸುಖಾಸುಮ್ಮನೆ ಶಿಕ್ಷಿಸುವುದಿಲ್ಲ. ಪ್ರತಿಯೊಬ್ಬ ವಿದ್ಯಾರ್ಥಿಯನ್ನು ಸತ್ಪ್ರಜೆ ಮಾಡಬೇಕೆಂಬ ಉದ್ದೇಶದಿಂದ ಶಿಕ್ಷಣ ಕಲಿಸುವುದಷ್ಟೇ ಅವನ ಕರ್ತವ್ಯವಾಗಿದ್ದು ಈ ಕರ್ತವ್ಯಕ್ಕೆ ಹೊಸ ಕಾನೂನುಗಳು ತೊಡಕಾಗಬಾರದೆಂದು ಅಭಿಪ್ರಾಯ ಪಟ್ಟರು.
ಗ್ರಾಮೀಣ ಭಾಗದ ಸರ್ಕಾರಿ ಶಾಲೆಗಳ ಬಗ್ಗೆ ಇತ್ತೀಚಿನ ದಿನಗಳಲ್ಲಿ ಪೋಷಕರಲ್ಲಿ ನಿರುತ್ಸಾಹ ಮೂಡುತ್ತಿದ್ದು ಇದನ್ನು ಹೋಗಲಾಡಿಸಿ ಪೂರಕವಾಗಿ ಸ್ಪಂದಿಸಬೇಕು, ಎಸ್ಬಿಎಂನಂತೆ ಇತರ ಸಂಸ್ಥೆಗಳು, ದಾನಿಗಳು ಸರ್ಕಾರಿ ಶಾಲೆಗಳಿಗೆ ಅಗತ್ಯವಿರುವ ಸೌಲಭ್ಯಗಳನ್ನು ಕಲ್ಪಿಸಿದಲ್ಲಿ ಸರ್ಕಾರಿ ಶಾಲೆಗಳು ಖಾಸಗಿ ಶಾಲೆಗಳಿಗೆ ಸಮಾನವಾಗಿ ಸ್ಪರ್ಧೆ ನೀಡಲು ಸಾಧ್ಯ ಎಂದರು.
ಸಾಮಾಜಿಕ ಕಳಕಳಿ: ಕಾರ್ಯಕ್ರಮದಲ್ಲಿ ಮಾತನಾಡಿದ ಎಸ್ಬಿಎಂ ಮುದುಗೆರೆ ಶಾಖಾ ವ್ಯವಸ್ಥಾಪಕ ವಿನಿತ್ ಕುಮಾರ್ ನಮ್ಮ ಬ್ಯಾಂಕ್ ಸಾಮಾಜಿಕ ಕಳಕಳಿಯೊಂದಿಗೆ ಕೆಲಸ ನಿರ್ವಹಿಸುತ್ತಿದ್ದು ಗ್ರಾಮೀಣ ಶಾಲೆಗಳಿಗೆ ನೆರವು ನೀಡುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಹಮ್ಮಿಕೊಂಡಿರುವುದಾಗಿ ತಿಳಿಸಿದರು.ಬ್ಯಾಂಕ್ ವತಿಯಿಂದ ಕೆಲ ಆಯ್ದ ಶಾಲೆಗಳಿಗೆ ಸೀಲಿಂಗ್ ಫ್ಯಾನ್ ವಿತರಣೆ ಮಾಡಲಿದ್ದು ಇಂತಹ ಕಾರ್ಯಕ್ಕೆ ಎಲ್ಲರೂ ಮುಂದಾದಲ್ಲಿ ಗ್ರಾಮೀಣ ಶಿಕ್ಷಣ ವ್ಯವಸ್ಥೆಗೆ ಭದ್ರ ಬುನಾದಿ ಹಾಕಲು ಸಾಧ್ಯ ಎಂದರು.
ಎಲ್‌ಐಸಿ ಶ್ರೀನಿವಾಸ್, ಎಸ್ಬಿಎಂನ ರಾಮಚಂದ್ರು, ಗ್ರಾ.ಪಂ ಅಧ್ಯಕ್ಷ ಯೋಗೇಶ್, ಸದಸ್ಯರಾದ ತಮ್ಮಯ್ಯ, ಲೋಕೇಶ್, ಸುನಿಲ್, ಸಮಾಜಸೇವಕ ಗೋಪಾಲಕೃಷ್ಣ, ದಗಲಾರಾಮ್ಜಿ, ವಿಕಾಸ ಸಂಸ್ಥೆಯ ಮುತ್ತುರಾಜು, ಮಂಗಳಮ್ಮ, ಶಿಕ್ಷಕ ಶಿವಕುಮಾರ್ ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

