ಬಜೆಟ್‌ನಲ್ಲಿ ಹಣ ನೀಡುವಂತೆ ಮನವಿ ಮಾಡಿರುವುದು ಹಾಸ್ಯಾಸ್ಪದ: ಎ.ಮಂಜು
ಕ.ಪ್ರ. ವಾರ್ತೆ ಮಾಗಡಿ ಜು.5
ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ತಮ್ಮ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುವುದಾಗಿ ಹೇಳಿಕೆ ನೀಡಿದ್ದ ಶಾಸಕ ಎಚ್.ಸಿ. ಬಾಲಕೃಷ್ಣ ಅವರು ಈಗ ಮುಖ್ಯಮಂತ್ರಿ ಸಿದ್ದರಾಮಯ್ಯ ಬಳಿ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಬಜೆಟ್‌ನಲ್ಲಿ ಹಣ ಮೀಸಲಿಡುವಂತೆ ಮನವಿ ಮಾಡಿರುವುದು ಹಾಸ್ಯಾಸ್ಪದವಾಗಿದೆ ಎಂದು ಎ.ಮಂಜು ಶಾಸಕರಿಗೆ ತಿರುಗೇಟು ನೀಡಿದರು.
ಮಾಗಡಿ ಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ ಈ ಸಂಬಂಧ ಏರ್ಪಡಿಸಿದ್ದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.
ಲೋಕೋಪಯೋಗಿ ಇಲಾಖೆಯಲ್ಲಿ ನಡೆದಿದ್ದ ಹಗರಣ ಬಯಲು ಮಾಡಿ, ಹಗರಣ ಸಾಬೀತು ಪಡಿಸಿದ್ದೇನೆ, ಜಿಲ್ಲಾ ಪಂಚಾಯ್ತಿ ಹಗರಣ ಸದ್ಯದಲ್ಲೇ ಬಯಲು ಮಾಡುವುದಾಗಿ ಎಚ್ಚರಿಸಿರುವ ಎ.ಮಂಜು, ಲೋಕೋಪಯೋಗಿ ಇಲಾಖೆಯಲ್ಲಿ ನಡೆದಿರುವ ಹಗರಣದ ಹಣವನ್ನು ಸರ್ಕಾರದ ಖಜಾನೆಗೆ ತುಂಬುವಂತೆ ಗುತ್ತಿಗೆದಾರರಿಗೆ ಸದನ ಸಮಿತಿ ಈಗಾಗಲೇ ಸೂಚನೆ ನೀಡಿದೆ ಎಂದರು.
ಗೋದಾಮು ನಿರ್ಮಿಸಲಿ: ಮಾಗಡಿ ಪಟ್ಟಣದ ಹೊಸಪೇಟೆ ಬಳಿ ಪಡಿತರ ಆಹಾರ ದಾಸ್ತಾನು ಮಾಡುವ ಗೋದಾಮು ನಿರ್ಮಿಸಲು ಟಿಎಪಿಸಿಎಂಎಸ್ ಭೂ ಪರಿವರ್ತನೆ ಮಾಡಿಸಿಲ್ಲ, ಯಾವುದೇ ಇಲಾಖೆಯಿಂದ ಎನ್‌ಓಸಿ ಪಡೆದಿಲ್ಲ, ಪರವಾನಗಿಯಿಲ್ಲ, ಅಕ್ರಮವಾಗಿ ಗೋದಾಮು ನಿರ್ಮಿಸುತ್ತಿದೆ. ಆದರೆ, ಕಾನೂನು ಬದ್ಧವಾಗಿ ಗೋದಾಮು ನಿರ್ಮಿಸಲು ನಮ್ಮ ಅಭ್ಯಂತರವಿಲ್ಲ ಎಂದು ಎ.ಮಂಜು ತಿಳಿಸಿದರು.
ಮಂಚನಬಲೆ ಜಲಾಶಯದಿಂದ ಪಟ್ಟಣಕ್ಕೆ ಕುಡಿಯುವ ನೀರು ಸರಬರಾಜಿಗೆ ಪ್ರತ್ಯೇಕವಾಗಿ ವಿದ್ಯುತ್ ತಡೆಯಲಾಗಿದೆ. ಆದರೆ ಸುತ್ತಮುತ್ತಲ ಹಳ್ಳಿಗಳ ಜನತೆ ಪ್ರತ್ಯೇಕ ವಿದ್ಯುತ್ ತನ್ನಿಂದಲೇ ಅಕ್ರಮವಾಗಿ ವಿದ್ಯುತ್ ಪಡೆಯುತ್ತಿದ್ದಾರೆ. ಬಿಲ್ ಮಾತ್ರ ಪುರಸಭೆ ಕಟ್ಟುತ್ತಿದೆ. ಅಕ್ರಮಕ್ಕೆ ಅವಕಾಶ ನೀಡುವ ಶಾಸಕರಿಗೆ, ಕ್ಷೇತ್ರದ ಸಮಗ್ರ ಅಭಿವೃದ್ಧಿ ಹೇಗೆ ಸಾಧ್ಯ ಎಂದು ಎ.ಮಂಜು ಟೀಕಿಸಿದರು. ಪುರಸಭಾ ಮಾಜಿ ಅಧ್ಯಕ್ಷ ಪಿ.ವಿ.ಸೀತಾರಾಂ,ನಯಜ್, ಪುರಸಭಾ ಸದಸ್ಯರಾದ ಎಂ.ಎನ್.ಮಂಜು,ಎಸ್.ಮಹದೇವ್, ಕೆ.ವಿ.ಬಾಲು, ಶಿವಕುಮಾರ್,ಸೋಮಶೇಖರ್ ಇತರರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

