ಬೆಂಗಳೂರು ಗ್ರಾಮಾಂತರ

'ಅಸಹಾಯಕನಿಗೆ ಹೆಚ್ಚಿನ ಹಣ ನೀಡುವುದೇ ದಾನ'

Published On :

ನೆಲಮಂಗಲ: ದುಡಿದಂತಹ ಹೆಚ್ಚುವರಿ ಹಣವನ್ನು ಅಸಹಾಯಕನಿಗೆ ನೀಡುವುದೇ ದಾನ ಎಂದು ವನಕಲ್ಲು ಮಠದ ಶ್ರೀ ಬಸವರಮಾನಂದ ಸ್ವಾಮಿಗಳು ಹೇಳಿದರು.
ಅವರು ಭಾನುವಾರ ತಾಲೂಕಿನ ವನಕಲ್ಲು ಮಲ್ಲೇಶ್ವರ ಮಠದ ಅನಾಥ ಮಕ್ಕಳಿಗೆ ಶ್ರೀಗಂಧ ಕನ್ನಡ ಬಳಗದವರು ನೀಡಿದ ಉಚಿತ ನೋಟ್ ಪುಸ್ತಕ, ಬಟ್ಟೆ ಹೊದಿಕೆ ಮತ್ತು ಪಠ್ಯೇತರ ಚಟುವಟಿಕೆಗಳ ಸಾಮಗ್ರಿಗಳನ್ನು ವಿತರಿಸಿ ಮಾತನಾಡುತ್ತಾ ಬಸವಣ್ಣನವರು ತಮ್ಮ 8ನೇ ವಯಸ್ಸಿನಲ್ಲಿ ಮನೆ ತ್ಯಾಗ ಮಾಡಿ ಸಮಾಜದ ಸುಧಾರಣೆಗೆ ತಮ್ಮ ಜೀವನವನ್ನು ಮುಡುಪಾಗಿಟ್ಟಿದ್ದರು ಎಂದರು.
ಆಯ್ದಕ್ಕಿ ಲಕ್ಕಮ್ಮ, ಮಾರಯ್ಯ, ಸಂತ ಶ್ರೇಷ್ಠ ಕನಕದಾಸ ಅಂಥವರು ಸಹ ತಮ್ಮಲ್ಲಿದುದ್ದನ್ನು ದಾನ ಮಾಡಿ ಸಮಾಜದ ಒಳಿತಿಗೆ ಶ್ರಮಿಸಿದ್ದಾರೆ ಎಂದು ನುಡಿದರು.
ಮಕ್ಕಳು ವಿದ್ಯೆ ಕಲಿತರೆ ಸಮಾಜಕ್ಕೆ ಒಳಿತನ್ನು ಮಾಡುತ್ತಾರೆ. ಸತ್ಯ ಶುದ್ಧ ಕಾಯಕ ಮಾಡುವ ಮೂಲಕ ಯುವಕರು ಸಮಾಜವನ್ನು ಪರಿವರ್ತಿಸಬೇಕು ಎಂದು ಶ್ರೀಗಂಧ ಕನ್ನಡ ಬಳಗದ ಮುಖ್ಯಸ್ಥ ಅಂಜನ್ ತಿಳಿಸಿದರು.  ಸಿಬ್ಬೇಗೌಡ, ಪ್ರಶಾಂತ್, ಹರೀಶ್, ಚಲುವರಂಗಸ್ವಾಮಿ, ಮುತ್ತುಕೃಷ್ಣ ಸೇರಿದಂತೆ ನೂರಾರು ಜನ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.