ಬೆಂಗಳೂರು ಗ್ರಾಮಾಂತರ

ಗರಿಗೆದರಿದ ರಾಜ್ಯ ಸರ್ಕಾರಿ ನೌಕರರ ಚುನಾವಣೆ

Published On :

ಕ.ಪ್ರ.ವಾರ್ತೆ  ಆನೇಕಲ್  ಜು. 16
ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಆನೇಕಲ್ ತಾಲೂಕು ಹಾಗೂ ಯೋಜನಾ ಘಟಕಗಳ ಕಾರ್ಯಕಾರಿ ಸಮಿತಿಯ ಚುನಾವಣೆ ರಂಗೇರಿದ್ದು ಸೋಮವಾರ ಸಂಜೆ ವೇಳೆಗೆ 30 ಸ್ಥಾನಗಳಿಗೆ 63 ನಾಮಪತ್ರಗಳು ಸಲ್ಲಿಕೆಯಾಗಿದ್ದವು.
ಮಂಗಳವಾರ ನಾಮಪತ್ರ ವಾಪಸ್ ಪಡೆಯಲು ಕಡೆಯ ದಿನವಾಗಿದ್ದು 21 ಜನರ ಅವಿರೋಧ ಆಯ್ಕೆಯಾಗಿದ್ದಾರೆ.  ಉಳಿಕೆ 9 ಸ್ಥಾನಗಳಿಗೆ 19 ಜನ ಕಣದಲ್ಲಿದ್ದು ಜು.22 ಸೋಮವಾರ ಚುನಾವಣೆ ನಡೆಯಲಿದೆ ಎಂದು ಚುನಾವಣಾಧಿಕಾರಿ ರವಿಚಂದ್ರ ತಿಳಿಸಿದ್ದಾರೆ.
ಪ್ರಾಥಮಿಕ ಶಿಕ್ಷಣ ಇಲಾಖೆಯ 3 ಸ್ಥಾನಗಳಿಗೆ  18 ನಾಮಪತ್ರಗಳ ಸಲ್ಲಿಕೆಯಾಗಿದ್ದು  ಮಂಗಳವಾರ ಸಂಜೆ 15 ನಾಮಪತ್ರಗಳು ವಾಪಸ್ ಪಡೆದು ಮೂವರು ಅವಿರೋಧವಾಗಿ ಆಯ್ಕೆಯಾದರು. ಆರ್. ಶ್ರೀನಿವಾಸ್, ಜಿ. ನಾಗರಾಜು, ಹಾಗೂ ಲೋಕೇಶ್ ಅವಿರೋಧವಾಗಿ ಆಯ್ಕೆಯಾದ ಶಿಕ್ಷಕರು.
ಅರಣ್ಯ ಇಲಾಖೆಯ ಬೈಲಪ್ಪ, ಮೀನುಗಾರಿಕೆ ಇಲಾಖೆಯ ದೀಪಾಂಜಲಿ ಅಪ್ಪಣ್ಣಿ, ಅಭಿಯೋಜನೆ ಇಲಾಖೆಯ ಅನಿತ, ನ್ಯಾಯಾಂಗ ಇಲಾಖೆಯ ನಾಜಿ, ತಾಪಂಯ ನಾಗರಾಜು, ಅಬಕಾರಿಯಿಂದ ವೀರಪ್ಪ, ಕಾಲೇಜು ಶಿಕ್ಷಣದಿಂದ ಎ.ಎಂ. ಉದಯಕುಮಾರ್, ಭೂ ಮಾಪನಾ ಇಲಾಖೆಯಿಂದ ಚಂದ್ರಶೇಖರ್, ಸಾರಿಗೆಯಿಂದ ಷಣ್ಣುಗ ಹಡಗದ್, ಆಹಾರ ಇಲಾಖೆಯಿಂದ ಶಂಕರ್, ಜಿಪಂ ವಿಭಾಗದಿಂದ ಸತ್ಯನಾರಾಯಣ್, ಲೋಕೋಪಯೋಗಿ ಇಲಾಖೆಯಿಂದ ಸೀನಪ್ಪ, ಸಿಡಿಪಿಒ ದಿಂದ ಸುಮಿತ್ರ, ಸಮಾಜ ಕಲ್ಯಾಣದಿಂದ ಪಿಳ್ಳಾರೆಡ್ಡಿ, ಪ್ರೌಢ ಶಿಕ್ಷಣದಿಂದ ಪ್ರಕಾಶ್, ಜಲಾನಯನದಿಂದ ನಾಗರಾಜ್, ಖಜಾನೆಯಿಂದ ಸತ್ಯಸುಂದರ್ ಅವಿರೋಧವಾಗಿ ಆಯ್ಕೆಯಾಗಿರುತ್ತಾರೆ. ಶಿಕ್ಷಣ ಇಲಾಖೆಯ ಬೋಧಕೇತರ ವಿಭಾಗದಿಂದ ಸಿ.ಆರ್. ನಾಗಭೂಷಣ್ ಹಾಗೂ ಗವಿರಂಗಯ್ಯ ಸ್ಪರ್ಧಿಸಿದ್ದು  ನೇರ ಸ್ಪರ್ಧೆ ಇದೆ.
ಆರೋಗ್ಯ ಮತ್ತು ಕುಟುಂಬ ಇಲಾಖೆಯಿಂದ 4 ಸ್ಥಾನಗಳಿಗೆ 8 ಜನ ಸ್ಪರ್ಧಿಸಿದ್ದು 13 ಮತಗಳಿವೆ. ಕಂದಾಯ ಇಲಾಖೆಯ 2 ಸ್ಥಾನಕ್ಕೆ 4 ಜನ ಸ್ಪರ್ಧಿಸಿದ್ದು 74 ಮತಗಳಿವೆ. ಕೃಷಿ ಮತ್ತು ತೋಟಗಾರಿಕೆಯಿಂದ ನೇರ ಸ್ಪರ್ಧೆ ಇದ್ದು 21 ಮತಗಳಿಗಾಗಿ ಕುಮಾರ್ ಮತ್ತು ಸೋಮಶೇಖರ್ ಸೆಣಸುತ್ತಿದ್ದಾರೆ.
ರೇಷ್ಮೆ ಮತ್ತು ತೋಟಗಾರಿಕೆ ಇಲಾಖೆಯಿಂದ 1 ಸ್ಥಾನಕ್ಕೆ ಮೂವರು ಸ್ಪರ್ಧಿಸಿದ್ದು 56 ಮತಗಳಿವೆ. ಶ್ರೀನಿವಾಸ್, ರಾಜೇಂದ್ರ ಹಾಗೂ ಸೈಮನ್ ರಾಜು ಸ್ಪರ್ಧಿಸಿದ್ದಾರೆ ಎಂದು ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.