ಪ್ರತಿಭಾವಂತ ಮಕ್ಕಳು ದೇಶದ ಆಸ್ತಿ
ಕ.ಪ್ರ.ವಾರ್ತೆ , ಮಾಗಡಿ , ಜು.23
ಪ್ರತಿಭಾವಂತ ಮಕ್ಕಳು ದೇಶದ ಆಸ್ತಿಯಿದ್ದಂತೆ ಎಂದು ಮಾಗಡಿ ವಿಜಯಾ ಬ್ಯಾಂಕ್ ವ್ಯವಸ್ಥಾಪಕ ಮೋಹಿತ್ ಹೇಳಿದರು.
ಮಾಡಬಾಳ್ ಗ್ರಾಮ ಪಂಚಾಯಿತಿಯಲ್ಲಿ ಇನ್ಫೋಸಿಸ್ ಉದ್ಯೋಗಿ ನಾಗರಾಜು ಅವರ ಸಹಯೋಗದಲ್ಲಿ ಏರ್ಪಡಿಸಿದ್ದ ಕಂಪ್ಯೂಟರ್ ವಿತರಣಾ ಸಮಾರಂಭ ಉದ್ಘಾಟಿಸಿ ಮಾತನಾಡಿ, ಆಧುನಿಕ ಯುಗದಲ್ಲಿ ಶಿಕ್ಷಣ ವ್ಯಾಪಾರೀಕರಣ ಆಗಿದೆ. ಆದರೆ, ಗ್ರಾಮೀಣ ಪ್ರತಿಭಾವಂತ ಮಕ್ಕಳಿಗೆ ಕಂಪ್ಯೂಟರ್ ಸೇರಿದಂತೆ ಅಗತ್ಯ ಸೌಲಭ್ಯ ಕೊರತೆಯಿಂದ ಹೆಚ್ಚಿನ ಅವಕಾಶಗಳಿಂದ ವಂಚಿತರಾಗುತ್ತಿದ್ದಾರೆ. ಗ್ರಾಮೀಣ ಪ್ರತಿಭಾವಂತ ಮಕ್ಕಳಿಗೆ ಉಳ್ಳವರು, ಸಮಾಜ ಸುಧಾರಕರು ಅಗತ್ಯ ಸಹಕಾರ ನೀಡುವ ಮೂಲಕ ಸವಲತ್ತು ನೀಡಿ ಪ್ರೋತ್ಸಾಹಿಸಿದರೆ ಈ ದೇಶದ ಪ್ರಗತಿಗೆ ತಮ್ಮ ಆದ ರೀತಿಯಲ್ಲಿ ಕೊಡುಗೆ ನೀಡಲಿದ್ದಾರೆ. ಉದ್ಯೋಗಿ ನಾಗರಾಜು ಅವರು, ಜಯದೇವ್ ಮತ್ತು ಟೆಂಪೋ ಜಯಣ್ಣ ಅವರ ಮಾರ್ಗದರ್ಶನದಲ್ಲಿ ತೀರ ಹಿಂದುಳಿದ ಮಾಡಬಾಳ್ ಹಾಗೂ ನೇತೇನಹಳ್ಳಿ ಶಾಲೆಗಳಿಗೆ ಕಂಪ್ಯೂಟರ್ ವಿತರಣೆ ಮಾಡಿರುವುದನ್ನು ಶ್ಲಾಘಿಸಿದರು.
ಮಾಡಬಾಳ್ ಗ್ರಾಮ ಪಂಚಾಯಿತಿ ಅಧ್ಯಕ್ಷ ಮಂಜುನಾಥ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಇಂದಿನ ಮಕ್ಕಳೇ ಮುಂದಿನ ಸತ್ಪ್ರಜೆಗಳು ಎಂಬಂತೆ ಯುವಶಕ್ತಿಗೆ ಪ್ರೋತ್ಸಾಹ ನೀಡಿದರೆ ದೇಶವನ್ನು ಪ್ರಗತಿಪಥದತ್ತ ಕೊಂಡೊಯ್ಯಲು ಸಾಧ್ಯವಾಗುತ್ತದೆ ಎಂದರು.
ಸಿಆರ್ಪಿ ಮಂಜುನಾಥ್ ಮಾತನಾಡಿ, ಗ್ರಾಮೀಣ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಪೂರಕ ಕಾರ್ಯಕ್ರಮ ಹಾಕಿಕೊಂಡರೆ ನಿಜಕ್ಕೂ ಪ್ರತಿಭೆ ಅರಳಲು ಸಹಕಾರಿಯಾಗುತ್ತದೆ. ಮಕ್ಕಳ ಕಂಪ್ಯೂಟರ್ ಕಲಿಕೆಗೆ ಉತ್ತೇಜನ ನೀಡುತ್ತಿರುವ ಇನ್ಫೋಸಿಸ್ ಸೇವೆ ಅರ್ಥಪೂರ್ಣ ಮತ್ತು ಔಚಿತ್ಯವೂ ಆಗಿದೆ ಎಂದರು. ಇದೇ ವೇಳೆ ಮಾಡಬಾಳ್ ಪಂಚಾಯಿತಿ ವ್ಯಾಪ್ತಿಯ, ನೇತೇನಹಳ್ಳಿ ಪಂಚಾಯಿತಿ ವ್ಯಾಪ್ತಿಯ ಶಾಲೆಗೆ ಸುಮಾರು 10 ಕಂಪ್ಯೂಟರ್ ವಿತರಿಸಿದರು.
ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಎಂ.ಕೆ. ಶಿವಬೀರಯ್ಯ ಅವರು ಇನ್ಫೋಸಿಸ್ ಉದ್ಯೋಗಿ ನಾಗರಾಜು ಅವರ ಸೇವೆಯನ್ನು ಶ್ಲಾಘಿಸಿದರು. ಎಸ್ಡಿಎಂಸಿ ಅಧ್ಯಕ್ಷ ಎಂ.ಜಿ. ಮಹದೇವಯ್ಯ, ಗ್ರಾಪಂ ಸದಸ್ಯ ನರೇಂದ್ರಕುಮಾರ್, ಶಿವಲಿಂಗಯ್ಯ, ಶಿವರುದ್ರಚಾರ್, ಸದಸ್ಯೆಯರಾದ ಗೌರಮ್ಮ, ನಾಗಮ್ಮ, ಗಂಗಮ್ಮ, ಜಯಮ್ಮ, ವಿಎಸ್ಎಸ್ಎನ್ ಅಧ್ಯಕ್ಷ ವಂಕಟರಾಮಯ್ಯ, ಚೆನ್ನರಾಯಪ್ಪ, ಪಿಡಿಒ ನಾಗರಾಜು, ಕಾರ್ಯದರ್ಶಿ ವಂಕಟರಾಜು, ಟೆಂಪೋ ಜಯಣ್ಣ, ಜಯದೇವ್, ಗಂಗರಾಜು, ಸಿಆರ್ಪಿಗಳಾದ ಮಂಜುನಾಥ್, ನಾಗರತ್ನಮ್ಮ ಮತ್ತಿತರರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

