ಉತ್ತೇಜನ ಇಲ್ಲದೆ ನರಳುತ್ತಿರುವ ಚದುರಂಗ
ಕ.ಪ್ರ. ವಾರ್ತೆ, ದೊಡ್ಡಬಳ್ಳಾಪುರ, ಜು.24
ಚದುರಂಗ ಭಾರತದ ಪಾರಂಪರಿಕ ಕ್ರೀಡೆಯಾಗಿದ್ದು, ಉತ್ತೇಜನದ ಕೊರತೆಯಿಂದ ನಲುಗುತ್ತಿದೆ. ಯುವಜನರಲ್ಲಿ ಚೆಸ್ನ ಕುರಿತು ಆಸಕ್ತಿ ಮೂಡಿಸುವ ಪ್ರಯತ್ನಗಳು ನಿರಂತರವಾಗಿ ನಡೆಯಬೇಕು ಎಂದು ರಾಷ್ಟ್ರೀಯ ಚೆಸ್ ಆಟಗಾರ ಶ್ರೀಪಾದ ಕರೆ ನೀಡಿದರು.
ಇಲ್ಲಿನ ಕನ್ನಡ ಜಾಗೃತ ಭವನದಲ್ಲಿ ದೊಡ್ಡಬಳ್ಳಾಪುರ ಚೆಸ್ ಅಸೋಸಿಯೇಷನ್ ನೇತೃತ್ವದಲ್ಲಿ ನಡೆದ ತಾಲೂಕು ಮಟ್ಟದ ಚೆಸ್ ಪಂದ್ಯಾವಳಿಗಳ ಬಹುಮಾನ ವಿತರಣೆ ಸಮಾರಂಭದಲ್ಲಿ ಮಾತನಾಡಿದರು.
ಇಂದು ನಗರ ಪ್ರದೇಶಗಳಲ್ಲಿ ಚೆಸ್ ಜನಪ್ರಿಯವಾಗಿದೆ. ಆದರೆ ಗ್ರಾಮಾಂತರ ಪ್ರದೇಶದಲ್ಲಿ ಇಂದಿಗೂ ಈ ಆಟದ ಬಗ್ಗೆ ಆಸಕ್ತರ ಕೊರತೆ ಇದೆ. ಆದರೆ ಇತ್ತೀಚಿನ ದಿನಗಳಲ್ಲಿ ಗ್ರಾಮಾಂತರ ಪ್ರದೇಶಗಳಲ್ಲಿ ಈ ಕ್ರೀಡೆಗೆ ಉತ್ತೇಜನ ನೀಡುವ ಕೆಲಸ ಕೆಲ ಸಂಘಟನೆಗಳಿಂದ ಆಗುತ್ತಿರುವುದು ಸಂತಸದ ವಿಚಾರ ಎಂದರು.
ಹಿರಿಯ ವಕೀಲ ಎಸ್. ರುದ್ರಾರಾಧ್ಯ ಅಧ್ಯಕ್ಷತೆ ವಹಿಸಿದ್ದರು. ಪಂದ್ಯಾವಳಿಯಲ್ಲಿ 331 ಸ್ಪರ್ಧಿಗಳು ಭಾಗವಹಿಸಿದ್ದರು.
ನಗರಸಭೆ ಮಾಜಿ ಅಧ್ಯಕ್ಷ ಜೆ. ರಾಜೇಂದ್ರ, ಆರ್ಎಲ್ಜೆಐಟಿ ಮಾಜಿ ನಿರ್ದೇಶಕ ಜೆ. ನಾಗೇಂದ್ರಸ್ವಾಮಿ, ವಕೀಲ ಮನೋಹರ ಕಾಳೆ, ಕರವೇ ರಾಜ್ಯ ಉಪಾಧ್ಯಕ್ಷ ಚಂದ್ರಶೇಖರ್, ವಕೀಲ ರೇಣುಕಾರಾಧ್ಯ, ದೊಡ್ಡಬಳ್ಳಾಪುರ ಚೆಸ್ ಅಸೋಸಿಯೇಷನ್ನ ನಾಗರಾಜ್, ರಮೇಶ್, ಮಲ್ಲೇಶ್ ಮತ್ತಿತರರು ಭಾಗವಹಿಸಿದ್ದರು. ವಿಜೇತರುಣ 16 ವರ್ಷದೊಳಗಿನವರ ವಿಭಾಗದಲ್ಲಿ ಆರ್. ಹರೀಶ್(ಪ್ರಥಮ), ಎನ್.ಎಸ್. ಧನರಾಜ್(ದ್ವಿತೀಯ), ಸುಹಾಸ್ ರಾವ್(ತೃತೀಯ), ಆರ್. ರಾಹುಲ್(4ನೇ ಸ್ಥಾನ), ಬಿ.ಆರ್. ಅಮೃತ್(5ನೇ ಸ್ಥಾನ). 16 ವರ್ಷ ಮೇಲ್ಪಟ್ಟವರ ವಿಭಾಗದಲ್ಲಿ ಟಿ. ಗಂಗಾಧರ(ಪ್ರಥಮ), ಸುಚಿತ್ ಯು. ಶೆಟ್ಟಿ(ದ್ವಿತೀಯ), ಮೋಹನ್ಕುಮಾರ್(ತೃತೀಯ), ರಾಕೇಶ್ಕುಮಾರ್(4ನೇ ಸ್ಥಾನ), ಎಂ.ಎಸ್. ಪವನ್(5ನೇ ಸ್ಥಾನ)ಬಹುಮಾನ ಪಡೆದಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

