ಗ್ರಾಮೀಣ ಮಕ್ಕಳಿಗೆ ಉಳ್ಳವರು ಶೈಕ್ಷಣಿಕ ಸವಲತ್ತು ನೀಡಿ
ಮಾಗಡಿ: ಗ್ರಾಮೀಣ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಪೂರಕವಾಗಿ ಸೌಲಭ್ಯ ನೀಡುವ ಮೂಲಕ ಪ್ರೋತ್ಸಾಹಿಸಲಾಗುತ್ತಿದೆ ಎಂದು ಬಿಬಿಎಂಪಿ ಸದಸ್ಯ ಎ.ಎಚ್.ಬಸವರಾಜು ನುಡಿದರು.
ಅವರು ಮಾಗಡಿ ತಾಲೂಕಿನ ಅತ್ತಿಂಗೆರೆ ಪ್ರಾಥಮಿಕ ಶಾಲಾ ಮಕ್ಕಳಿಗೆ ಉಚಿತವಾಗಿ ನೋಟ್ ಪುಸ್ತಕ ಮತ್ತು ಸ್ಕೂಲ್ ಬ್ಯಾಗ್ ವಿತರಿಸಿ ಮಾತನಾಡುತ್ತಾ ಜಗತ್ತು ಸ್ಪರ್ಧಾತ್ಮಕವಾಗಿದೆ. ಎಲ್ಲಾ ರಂಗದಲ್ಲೂ ಸ್ಪರ್ಧೆ ಇದ್ದೇ ಇದೆ. ಗ್ರಾಮೀಣ ಮಕ್ಕಳಿಗೆ ನಗರ ಮಕ್ಕಳ ಜತೆ ಶೈಕ್ಷಣಿಕ ಸ್ಪರ್ಧೆ ಕಬ್ಬಿಣದ ಕಡಲೆಯಾಗಿದೆ. ಗ್ರಾಮೀಣ ಮಕ್ಕಳಿಗೆ ಉಳ್ಳವರು, ದುಡಿದ ಸ್ವಲ್ಪ ಭಾಗವನ್ನು ಗ್ರಾಮೀಣ ಮಕ್ಕಳ ಶೈಕ್ಷಣಿಕ ಪೂರಕವಾಗಿ ಸೌಲತ್ತು ನೀಡುವ ಮೂಲಕ ಪ್ರೋತ್ಸಾಹ ನೀಡಿದರೆ ಸಾಕು, ನಗರದ ಶಾಲಾ ಮಕ್ಕಳ ಜತೆ ಉತ್ಸಾಹದಿಂದ ಸ್ಪರ್ಧಿಸಬಹುದು. ಎಲ್ಲರ ಸಹಕಾರ ಪ್ರೋತ್ಸಾಹದ ಸೌಲತ್ತುಗಳನ್ನು ಬಳಸಿಕೊಂಡು ಮಕ್ಕಳು ಸ್ಪರ್ಧಾತ್ಮಕವಾಗಿ ಚೆನ್ನಾಗಿ ಓದಬೇಕು. ಸಮಾಜದ ಮುಖ್ಯವಾಹಿನಿಗೆ ಬರಬೇಕು. ಜತೆಗೆ ದೇಶಪ್ರೇಮ, ದೇಶಭಕ್ತಿ ಬೆಳೆಸಿಕೊಳ್ಳುವಂತೆ ಕರೆ ನೀಡಿದರು.
ಹುಟ್ಟೂರು ಅತ್ತಿಂಗೆರೆ ಶಾಲಾ ಮಕ್ಕಳು ಶೈಕ್ಷಣಿಕವಾಗಿ ಮುಂದೆ ಬರಬೇಕು. ಈ ನಿಟ್ಟಿನಲ್ಲಾದರೂ ಹುಟ್ಟೂರಿನ ಋಣ ತೀರಿಸಬೇಕೆಂಬ ಆಸೆಯಿಂದ ಕಳೆದ 10 ವರ್ಷಗಳಿಂದ ಶಾಲಾ ಮಕ್ಕಳಿಗೆ ನೋಟ್ ಪುಸ್ತಕ, ಸ್ಕೂಲ್ ಬ್ಯಾಗ್ ವಿತರಿಸಿಕೊಂಡು ಬರುತ್ತಿದ್ದೇನೆ ಎಂದರು.
ಬೆಂಗಳೂರು ನಗರ ಬಿಜೆಪಿ ಪ್ರಧಾನ ಕಾರ್ಯದರ್ಶಿ ಎಂ.ಸಿ. ರಾಜಣ್ಣ ಮಾತನಾಡಿ ಗ್ರಾಮೀಣ ಶಾಲಾ ಮಕ್ಕಳು ಚೆನ್ನಾಗಿ ಓದಬೇಕು. ಈ ನಿಟ್ಟಿನಲ್ಲಿ ಸಮಾಜಕ್ಕೆ ಋಣಿಯಾಗಬೇಕು ಎಂದರು. ಬೆಂಗಳೂರು ಬನಶಂಕರಿ ಗಣೇಶನ ವಾರ್ಡ್ ಅಧ್ಯಕ್ಷ ಬೋರೇಗೌಡ, ಗ್ರಾ.ಪಂ ಸದಸ್ಯ ನಂಜುಂಡಪ್ಪ, ಹೊಸಪೇಟೆ ಅಶ್ವಥ್, ವಿಶ್ವನಾಥ್, ಗೋವಿಂದರಾಜು, ಲೋಕೇಶ್ ಇತರರಿದ್ದರು. ಇದೇ ಸಂದರ್ಭದಲ್ಲಿ ಮತ್ತ, ಕರಲಮಂಗಲ, ವಿ.ಜಿ.ದೊಡ್ಡಿ, ಹೊಸದೊಡ್ಡಿ, ದಬ್ಬಗುಳಿ, ಮಾಡಬಾಳ್ ಶಾಲೆಗಳಿಗೆ ಸುಮಾರು 10 ಸಾವಿರಕ್ಕೂ ಹೆಚ್ಚು ನೋಟ್ಪುಸ್ತಕಗಳನ್ನು ಎ.ಎಚ್. ಬಸವರಾಜು ವಿತರಣೆ ಮಾಡಿದರು. ಅತ್ತಿಂಗೆರೆ ಅಕ್ಕಪಕ್ಕದ ದೇವಾಲಯದ ಅರ್ಚಕರುಗಳಿಗೆ ದೇವರ ಪೂಜಾ ಸಾಮಾಗ್ರಿಗಳನ್ನು ಇದೇ ಸಂದರ್ಭದಲ್ಲಿ ವಿತರಿಸಲಾಯಿತು.
ನಾಗರಾಜು, ಮಹದೇವಯ್ಯ, ಚಿಕ್ಕಣ್ಣ, ಜಗದೀಶ್, ನಂಜೇಗೌಡ ಹಾಗು ಗ್ರಾಮಸ್ಥರು ಹಾಜರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

