ಬೆಂಗಳೂರು ಗ್ರಾಮಾಂತರ

ವಿಕಲಚೇತನರಿಗೆ ಅನುಕಂಪಕ್ಕಿಂತ ಪ್ರೋತ್ಸಾಹ ಅಗತ್ಯ

Published On :

ಹೊಸಕೋಟೆ: ವಿಕಲಚೇತನರ ಬಗ್ಗೆ ಅನುಕಂಪ ತೋರುವುದಕ್ಕಿಂತಲೂ ಸಾಮಾಜಿಕವಾಗಿ ಸಮಾನವಾದ ಸ್ಥಾನಮಾನ ಪಡೆಯಲು ಪ್ರೋತ್ಸಾಹ ನೀಡಾಬೇಕಾದ್ದು ಅತ್ಯವಶ್ಯವಾಗಿದೆ ಎಂದು ಸೌತ್ ರೌಂಡ್ ಟೇಬಲ್ ಇಂಡಿಯಾದ ಅಧ್ಯಕ್ಷ ಹರೀಶ್ ಶೆಣೈ ಹೇಳಿದರು. ಪಟ್ಟಣದಲ್ಲಿ ಸೇವಾ ಇನ್ ಆಕ್ಷನ್‌ಗಾಗಿ ನೂತನ ಶಾಲಾ ಕಟ್ಟಡ ಉದ್ಘಾಟಿಸಿ ಅವರು ಮಾತನಾಡಿದರು. ಗ್ರಾಮಿಣ ಪ್ರದೇಶದಲ್ಲಿ ವಿಕಲಚೇತನರ ಸರ್ವತೋಮುಖ ಬೆಳವಣಿಗೆಗಾಗಿ ಕಳೆದ 27 ವರ್ಷಗಳಿಂದ ಶ್ರಮಿಸುತ್ತಿರುವ ಸೇವಾ ಇನ್ ಆಕ್ಷನ್‌ನ ಕಾರ್ಯದಕ್ಷತೆಯನ್ನು ಪರಿಗಣಿಸಿ ಒಟ್ಟು 14.40 ಲಕ್ಷ ರು. ಗಳ ವೆಚ್ಚದಲ್ಲಿ 3 ಕೊಠಡಿಗಳನ್ನು 2.50 ಲಕ್ಷ ರು. ವೆಚ್ಚದಲ್ಲಿ ಸುಸಜ್ಜಿತವಾದ ಶೌಚಾಲಯ ನಿರ್ಮಿಸಿ ಕೊಡಲಾಗಿದೆ. ವಿಕಲಚೇತನರಿಗೆ ಸೂಕ್ತ ಶಿಕ್ಷಣ ದೊರಕಿಸಿಕೊಡಲು ಪೋಷಕರು ಕಾಳಜಿ ವಹಿಸಬೇಕು. ಇದರಿಂದ ಕೀಳರಿಮೆ ತೊರೆದು ಮುಖ್ಯ ವಾಹಿನಿಯಲ್ಲಿ ಬೆಳವಣಿಗೆ ಹೊಂದಲು ಸಾಧ್ಯವಾಗಲಿದೆ ಎಂದರು. ಲೇಡಿಸ್‌ಸರ್ಕಲ್ ಇಂಡಿಯಾದ ಅಧ್ಯಕ್ಷರಾದ ಪೂಜಾ ಭಾಟಿಯಾ, ಭಾವನಾ ಆನೆಗುಂದಿ,  ನಾಗರಾಜ್  ಗುಪ್ತ ಗಲುಂದಿಯಾ, ಮನೋಜ್ ಮೆಹ್ರಾ, ಕಾಜೋಲ್ ಮುಂತಾದವರು ಭಾಗವಹಿಸಿದ್ದರು.

ಸಾರಿಗೆ ಬಸ್ ಡಿಕ್ಕಿ: ಬೈಕ್ ಸವಾರ ಸಾವು
ಮೈಸೂರು: ಸಾರಿಗೆ ಬಸ್ ಹಿಂಬದಿಯಿಂದ ಡಿಕ್ಕಿಯಾಗಿ ದ್ವಿಚಕ್ರವಾಹನ ಸವಾರನೊಬ್ಬ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಬಿಎನ್ ರಸ್ತೆಯಲ್ಲಿರುವ ಗ್ರಾಮಾಂತರ ಬಸ್ ನಿಲ್ದಾಣದ ಬಳಿ ಶನಿವಾರ ಸಂಜೆ ನಡೆದಿದೆ. ರಾಮನಗರ ಜಿಲ್ಲೆ ಕನಕಪುರ ತಾಲೂಕು ಕೊಡಂಗಳ್ಳಿನಪುರ ನಿವಾಸಿ ಕೇಶವ (23) ಮೃತಪಟ್ಟವರು. ಇವರು ಟಾರ್ಪಲ್ ಬ್ಯಾಗ್ ವ್ಯಾಪಾರ ಮಾಡಿಕೊಂಡಿದ್ದು, ದ್ವಿಚಕ್ರವಾಹನದಲ್ಲಿ ಬ್ಯಾಗ್ ಕಟ್ಟಿಕೊಂಡು ಬರುತ್ತಿದ್ದಾಗ ಹಿಂಬದಿಯಿಂದ ಬಂದ ಬಸ್ ಡಿಕ್ಕಿಯಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಲಷ್ಕರ್ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರತಿಭಟನೆ: ಸಂಚಾರಿ ಪೊಲೀಸರು ಬಸ್ ನಿಲ್ದಾಣದ ಬಳಿ ಹೆಲ್ಮೆಟ್ ಇಲ್ಲದವರನ್ನು ಹಿಡಿಯುತ್ತಿದ್ದರು. ಹೆಲ್ಮೆಟ್ ಧರಿಸದ ಕೇಶವ ತಪ್ಪಿಸಿಕೊಂಡು ಬರುವಾಗ ಬಸ್ಸಿಗೆ ಸಿಕ್ಕಿ ಮೃತಪಟ್ಟಿರುವುದಾಗಿ ಸ್ಥಳೀಯರು ಆರೋಪಿಸಿ ಕೆಲಕಾಲ ಪ್ರತಿಭಟಿಸಿದರು. ಕೆಲವು ಕಿಡಿಗೇಡಿಗಳು 3-4 ಕೆಎಸ್‌ಆರ್‌ಟಿಸಿ ಬಸ್ಸುಗಳ ಮೇಲೆ ಕಲ್ಲು ತೂರಿ ಗಾಜುಗಳನ್ನು ಪುಡಿ ಮಾಡಿದರು. ಇದರಿಂದ ಗೊಂದಲ ನಿರ್ಮಾಣವಾಗಿತ್ತು. ಈ ವೇಳೆ ಸ್ಥಳದಲ್ಲಿದ್ದ ಲಷ್ಕರ್, ನಜರ್‌ಬಾದ್ ಠಾಣೆ ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿ ಗುಂಪು ಚದುರಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.