ಮಂಡಿಬೆಲೆ ವ್ಯ.ಸೇ.ಸ.ಬ್ಯಾಂಕ್ ವತಿಯಿಂದ ಚೆಕ್ ವಿತರಣೆ
ವಿಜಯಪುರ: ಸಹಕಾರಿ ಬ್ಯಾಂಕ್ಗಳು ಅಭಿವೃದ್ಧಿ ಹೊಂದಬೇಕಾದರೆ ರೈತರು ಕ್ರಮಬದ್ಧವಾಗಿ ಸರಿಯಾದ ಸಮಯದಲ್ಲಿ ಸಾಲ ಮರುಪಾವತಿಸಬೇಕು. ಈ ಬಾರಿ ಶೇ. 95ರಷ್ಟು ಮರುಪಾವತಿಯಾಗಿದ್ದು ಶೇ. 5ರಷ್ಚು ಮಾತ್ರ ಪಾವತಿಯಾಗಬೇಕಿದೆ ಎಂದು ವ್ಯವಸಾಯ ಸೇವಾ ಸಹಕಾರ ಬ್ಯಾಂಕ್ ಅಧ್ಯಕ್ಷ ಮಂಡಿಬೆಲೆ ರಾಜಣ್ಣ ತಿಳಿಸಿದರು.
ಅವರು ಪಟ್ಟಣ ಸಮೀಪದ ಮಂಡಿಬೆಲೆ ಗ್ರಾಮದ ಸಹಕಾರಿ ಬ್ಯಾಂಕ್ನಲ್ಲಿ ಕೃಷಿ ಸಾಲದ ಚೆಕ್ ವಿತರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು. 5ವರ್ಷದ ಅವಧಿಯಲ್ಲಿ 5 ಕೋಟಿ ರು. ನೀಡಲಾಗಿದ್ದು ಲಾಭದಾಯಕವಾಗಿ ಬ್ಯಾಂಕ್ ಮುನ್ನಡೆ ಸಾಧಿಸಿದೆ.ಇದೇ ಮಾದರಿಯಲ್ಲಿ ಸಾಲ ಮರುಪಾವತಿ ಮಾಡುವುದರಿಂದ ಬ್ಯಾಂಕ್ ಮತ್ತು ರೈತರು ಸಾಕಷ್ಟು ಅಭಿವೃದ್ಧಿ ಹೊಂದುತ್ತದೆ. ಇದನ್ನು ಎಲ್ಲರೂ ಮನಗಾಣಬೇಕು ಎಂದರು. ದೇವನಹಳ್ಳಿ ತಾಲೂಕು ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಕಾರಹಳ್ಳಿ ದೇವರಾಜ್ ಮಾತನಾಡುತ್ತಾ, ಈ ಸಾಲವನ್ನು ಕೃಷಿಗೆ ಸದುಪಯೋಗಪಡಿಸಿಕೊಳ್ಳಬೇಕು. ಸರ್ಕಾರದ ಆದೇಶದ ಮೇರೆಗೆ ಹೊಸ ರೈತರನ್ನು ಗುರುತಿಸಿ ಹಾಗೂ ಸಾಲ ಮರುಪಾವತಿ ಸಲ್ಲಿಸಿದವರಿಗೆ ಸಾಲವನ್ನು ನೀಡಲಾಗುತ್ತಿದೆ. ಹೊಸದಾಗಿ ಸ್ತ್ರೀ ಶಕ್ತಿ ಗುಂಪುಗಳು ಸ್ಥಾಪನೆ ಅದಲ್ಲಿ ಅಂತಹ ಸಂಘಗಳಿಗೆ 5ಲಕ್ಷದವರೆಗೆ ಸಾಲವನ್ನು ನೀಡಲಾಗುತ್ತದೆ ಎಂದು ಭರವಸೆ ನೀಡಿದರು. ಈ ಸಾಲಿನಲ್ಲಿ 22 ಲಕ್ಷ ರು. ಕೃಷಿ ಸಾಲಕ್ಕೆ ರೈತರ ಜಮೀನಿನ ಪಹಣಿಗೆ ಅನುಗುಣವಾಗಿ ಹಂತ ಹಂತವಾಗಿ 20ರಿಂದ60 ಸಾವಿರದವರೆಗೆ ಸಾಲದ ಚೆಕ್ ವಿತರಿಸಿದರು. ದೇವನಹಳ್ಳಿ ವ್ಯವಸಾಯೋತ್ಪನ್ನ ಸೊಸೈಟಿ ಅಧ್ಯಕ್ಷ ಗಂಗಾಧರ್ ಮಾತನಾಡಿದರು. ಇದೇ ಸಂದರ್ಭದಲ್ಲಿ ನಿರ್ದೇಶಕರಾದ ಚನ್ನಕೃಷ್ಣಪ್ಪ,ನಾರಾಯಣಸ್ವಾಮಿ, ಭೈಯಣ್ಣ, ಅಶ್ವತ್ಥಮ್ಮ, ಹಾಲು ಉತ್ಪಾದಕರ ಸಂಘದ ನಿರ್ದೇಶಕ ರಾಮಚಂದ್ರಪ್ಪ, ಯಲುವಳ್ಳಿ ನಟರಾಜ್ ಮತ್ತಿತರರು ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

