ಬೆಂಗಳೂರು ಗ್ರಾಮಾಂತರ

ಮಕ್ಕಳು ಗಣಿತ ವಿಷಯದಲ್ಲಿ ಆಸಕ್ತಿ ಬೆಳೆಸಿಕೊಳ್ಳಬೇಕು

Published On :

ವಿಜಯಪುರ: ಮಕ್ಕಳ ಬುದ್ಧಿಮಟ್ಟ ಹೆಚ್ಚಿಸಲು ಗಣಿತ ಅತ್ಯಂತ ಸಹಕಾರಿ ಮತ್ತು ಮಕ್ಕಳು ಗಣಿತ ವಿಷಯದಲ್ಲಿ ಹೆಚ್ಚಿನ ಆಸಕ್ತಿ ಬೆಳೆಸಿಕೊಳ್ಳಬೇಕು ಎಂದು ಶಿಕ್ಷಕ ರುದ್ರೇಶ್ ಮೂರ್ತಿ ತಿಳಿಸಿದರು. ಪಟ್ಟಣದ ಎವರ್ ಗ್ರೀನ್ ಶಾಲೆಯಲ್ಲಿ ನಡೆದ ಗಣಿತ ತಜ್ಞ ಶ್ರೀನಿವಾಸ್ ರಾಮಾನುಜನ್ ಅವರ 125ನೇ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿ ಮಾತನಾಡಿದ ಅವರು, ರಾಮಾನುಜನ್ ಅವರು ಗಣಿತದಲ್ಲಿ ಮಾಡಿರುವ ಸಾಧನೆಯನು ಪರಿಗಣಿಸಿ ಅವರ ಜನ್ಮ ದಿನವನು ರಾಷ್ಟ್ರೀಯ ಗಣಿತ ವರ್ಷಾಚರಣೆ ಎಂದೇ ಆಚರಿಸಲಾಗುತ್ತಿದೆ ಎಂದರು. ವಿಜ್ಞಾನ ಮತ್ತು ಗಣಿತ ಕ್ಷೇತ್ರಕ್ಕೆ ಭಾರತೀಯರು ಹೆಚ್ಚಿನ ಕೊಡುಗೆ ನೀಡಿದ್ದರೂ ಅದನು ಪ್ರಯೋಗಿಸಿ ಅಳವಡಿಸಿಕೊಂಡಿದ್ದು ಮಾತ್ರ ವಿದೇಶಿಯರು ಎಂದು ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆಯನು ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ ಪ್ರತಿನಿಧಿ ಶಿಕ್ಷಕ ಅಶೋಕ್ ಕುಮಾರ್ ವಹಿಸಿದ್ದರು. ಶಾಲೆಯ ಕಾರ್ಯದರ್ಶಿ ಅನಿಲ್ ಕುಮಾರ್, ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಕಾರ್ಯಕ್ರಮವನು ರಾಜ್ಯ ವಿಜ್ಞಾನ ಪರಿಷತ್, ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯಿತಿ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ಹಮ್ಮಿಕೊಳ್ಳಲಾಗಿತ್ತು.

ವ್ಯಕ್ತಿತ್ವದ ಬೆಳವಣಿಗೆಗೆ ದುಶ್ಚಟಗಳು ಮಾರಕ
ಕ.ಪ್ರ.ವಾರ್ತೆ ಕನಕಪುರ ಜು.29

ವ್ಯಕ್ತಿತ್ವದ ಬೆಳವಣೆಗೆಗೆ ದುಶ್ಚಟಗಳು ಮಾರಕವಾಗಿದ್ದು ವಿದ್ಯಾರ್ಥಿಗಳು ಯಾವುದೇ ದುರಭ್ಯಾಸಗಳಿಗೆ ತುತ್ತಾಗಬಾರದು, ತಮ್ಮ ಎಲ್ಲಾ ಗಮನವನು ನಿಶ್ಚಿತ ಗುರಿಯ ಕಡೆಗೆ ಕೇಂದ್ರೀಕರಿಸಿ ಉತ್ತಮ ರೀತಿಯಲ್ಲಿ ವ್ಯಾಸಂಗ ಮಾಡಿ ಜೀವನದಲ್ಲಿ ಯಶಸ್ಸು ಪಡೆಯ ಬೇಕು ಎಂದು ನ್ಯಾಯವಾದಿ ಎ.ಆರ್.ಖಾನ್ ಹೇಳಿದ್ದಾರೆ.
ಅವರು ಕನಕಪುರ ತಾಲೂಕು ಹಾರೋಹಳ್ಳಿಯ ಗ್ರಾಮಾಂತರ ಪ್ರೌಢಶಾಲೆಯಲ್ಲಿ ಪ್ರತಿಭಾ ಪುರಸ್ಕಾರ ಸಮಾರಂಭದ ಉದ್ಘಾಟನೆಯನು ನೆರವೇರಿಸಿ ಮಾತನಾಡುತ್ತಿದ್ದರು. ವಿದ್ಯಾಸಂಸ್ಥೆ ಕಾರ್ಯದರ್ಶಿ ಭುಜಂಗಯ್ಯ ಅಧ್ಯಕ್ಷತೆ ವಹಿಸಿದ್ದರು.
ಕಾರ್ಯಕ್ರಮದ ಅಂಗವಾಗಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಉತ್ತಮ ಅಂಕಗಳನು ಗಳಿಸಿ ತೇರ್ಗಡೆಯಾದ ಶಾಲೆಯ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ನೆನಪಿನ ಕಾಣಿಕೆಗಳನು ನೀಡಿ ಗೌರವಿಸಲಾಯಿತು. ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ತುಮಕೂರು ವಿವಿ ಕಲಾ ಕಾಲೇಜಿನ ಪ್ರಾಂಶುಪಾಲ, ಪ್ರಾಧ್ಯಾಪಕ ಹರಿಪ್ರಸಾದ್ ವಿದ್ಯಾರ್ಥಿಗಳಿಗೆ ಉತ್ತೇಜನಾ ಉಪನ್ಯಾಸ ನೀಡಿದರು. ಖಜಾಂಚಿ ಶ್ರೀನಿವಾಸ್ ವಂದಿಸಿದರು.

ಗ್ರಾಮೀಣ ಪ್ರದೇಶದ ಮಕ್ಕಳು ನಗರದ ಮಕ್ಕಳಿಗಿಂತ ಪ್ರತಿಭಾನ್ವಿತರು
ಕನಕಪುರ:
ಕನಡ ಸಾಹಿತ್ಯ ಪರಿಷತ್ತು ಕನಕಪುರ ಘಟಕದ ವತಿಯಿಂದ ಕೊಟ್ಟಗಾಳು ಗ್ರಾಮದ ಸಂಗಮ ಪ್ರೌಢಶಾಲೆ ಆವರಣದಲ್ಲಿ ಭೂಹಳ್ಳಿ ಪುಟ್ಟಸ್ವಾಮಿ ದತ್ತಿ ಉಪನ್ಯಾಸ ಕಾರ್ಯಕ್ರಮ ನಡೆಯಿತು. ತಾ.ಕಸಾಪ ಅಧ್ಯಕ್ಷ ಶಿವನಹಳ್ಳಿ ಶಿವಲಿಂಗಯ್ಯ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದ ಅಂಗವಾಗಿ ವಿಶೇಷ ಉಪನ್ಯಾಸ ನೀಡಿದ ನಿವೃತ್ತ ಮುಖ್ಯಶಿಕ್ಷಕ ಚಾಮರಾಜ ಮಾತನಾಡಿ, ನಿಸರ್ಗದ ಮಡಿಲಿನಲ್ಲಿ ಬೆಳೆಯುವ ಗ್ರಾಮೀಣ ಪ್ರದೇಶದ ಮಕ್ಕಳು ನಗರದ ಮಕ್ಕಳಿಗಿಂತ ಪ್ರತಿಭಾನ್ವಿತರಾಗಿರುತ್ತಾರೆ. ಸೂಕ್ತ ಸಮಯದಲ್ಲಿ ಅವರ ಪ್ರತಿಭೆಯನು ಗುರುತಿಸಿ ಪ್ರೋತ್ಸಾಹಿಸುವ ವೇದಿಕೆಯನು ಸಂಘಸಂಸ್ಥೆಗಳು ಕಲ್ಪಿಸಿಕೊಡಬೇಕು  ಎಂದು ಹೇಳಿದರು. ಕೊಟ್ಟಗಾಳು ಗ್ರಾಪಂ ಸದಸ್ಯ ಹಾಗೂ ನ್ಯಾಯವಾದಿ ದೇವುರಾವ್ ಜಾಧವ್ ಮಾತನಾಡಿದರು. ಶಿಕ್ಷಕ ಗೋವಿಂದರಾಜು ಸ್ವಾಗತಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.