ಡೆಂಘೀ ಭೀತಿ ಬೇಡ: ವೈದ್ಯಾಧಿಕಾರಿ ಅಭಯ
ಮಾಗಡಿ: ಡೆಂಘೀ ಕುರಿತು ಭೀತಿ ಬೇಡ, ಜ್ವರ ಕಂಡ ಬಂದ ಕೂಡಲೆ ಸರ್ಕಾರಿ ಆಸ್ಪತ್ರೆಯಲ್ಲಿ ಕಡಿಮೆ ದರದಲ್ಲಿ ಸಿಗುವ ಐಜಿಜಿ ಮತ್ತು ಐಜಿಎಂ ಪರೀಕ್ಷೆ ಮಾಡಿಸಿಕೊಂಡು ರೋಗದ ಬಗ್ಗೆ ಖಾತರಿಪಡಿಸಿಕೊಳ್ಳುವಂತೆ ವೈದ್ಯಾಧಿಕಾರಿ ರವಿಕುಮಾರ್ ತಿಳಿಸಿದ್ದಾರೆ.
ಅವರು ಸುದ್ದಿಗಾರರೊಂದಿಗೆ ಮಾತನಾಡಿ, ನಾಗರಿಕರು ತಮ್ಮ ಮನೆಯ ಸುತ್ತಮುತ್ತಲ ಪರಿಸರದಲ್ಲಿ ಹೆಚ್ಚು ಕಾಲ ನೀರು ನಿಲ್ಲದಂತೆ ನೋಡಿಕೊಳ್ಳಬೇಕು. ಮನೆಯಲ್ಲಿನ ತೊಟ್ಟಿ, ಇತರೆ ಪಾತ್ರೆಗಳಲ್ಲಿ ನೀರನ್ನು ಹೆಚ್ಚು ಕಾಲ ಶೇಖರಣೆ ಮಾಡಿಕೊಳ್ಳಬಾರದು. ತೊಟ್ಟಿ, ಪಾತ್ರೆಗಳನ್ನು ಆಗಾಗ್ಗೆ ಸ್ವಚ್ಛ ಗೊಳಿಸುತ್ತಿರಬೇಕು, ನಿಂತ ನೀರಿನಲ್ಲಿ ಸೊಳ್ಳೆಗಳು ಮೊಟ್ಟೆಯಿಟ್ಟು ಸೊಳ್ಳೆಗಳು ಉತ್ಪತಿಯಾಗುತ್ತದೆ. ಈ ಸೊಳ್ಳೆ ಕಚ್ಚಿದರೆ ಡೆಂಘೀ ಜ್ವರ ಹರಡವುದಲ್ಲದೆ ರೋಗಗಳು ಬಹಳ ಬೇಗ ಹರಡುತ್ತದೆ ಎಂದರು.
ಡೆಂಘೀ ಹಾಗು ಚಿಕನ್ ಗೂನ್ಯಗಳಿಗೆ ನಿರ್ದಿಷ್ಟ ಔಷಧಿ ಅಥವಾ ಲಸಿಕೆಯಿಲ್ಲ, ರೋಗಗಳ ಲಕ್ಷಣಗಳ ಅನುಸಾರವಾಗಿ ಚಿಕಿತ್ಸೆ ನೀಡಲಾಗುತ್ತಿದೆ. ಹಾಗಾಗಿ ಜ್ವರ ಕಂಡು ಬಂದ ಕೂಡಲೆ ಹತ್ತಿರದ ಸರ್ಕಾರಿ ಆಸ್ಪತ್ರೆಗಳಲ್ಲಿ ಸಿಗುವ ಸೌಲಭ್ಯಗಳನ್ನು ಬಳಸಿಕೊಳ್ಳಬಹುದು.
ಮಾಗಡಿ ಸರ್ಕಾರಿ ಆಸ್ಪತ್ರೆಯಲ್ಲಿ ರೋಗ ಲಕ್ಷಗಳ ಬಗ್ಗೆ ಐಜಿಜಿ ಮತ್ತು ಐಜಿಎಂ ಕಡಿಮೆ ದರದಲ್ಲಿ ಮಾಡಲಾಗುವುದು.
ಈಗಾಗಲೇ ಆರೋಗ್ಯ ರಕ್ಷಾ ಸಮಿತಿ ವತಿಯಿಂದ ಪರೀಕ್ಷೆಗೆ ಅಗತ್ಯ ಸೌಲತ್ತುಗಳನ್ನು ಖರೀದಿಸಿದ್ದು, ಸಾರ್ವಜನಿಕರು ಇದರ ಸದ್ಬಳಕೆ ಮಾಡಿಕೊಳ್ಳುವಂತೆ ಕರೆ ನೀಡಿದ್ದಾರೆ. ಈ ಪರೀಕ್ಷೆಯ ಅಂತಿಮವಲ್ಲ, ನಂತರವೂ ಜಿಲ್ಲಾ ಆರೋಗ್ಯ ಕೇಂದ್ರಕ್ಕೆ ಇಲ್ಲಿನ ಸ್ಯಾಪಂಲ್ ಕಳಿಸಿ
ಮತ್ತೊಮ್ಮೆ ಪರೀಕ್ಷಿಸಿ ಡೆಂಘೀ ಬಗ್ಗೆ ಖಾತರಿ ಪಡಿಸಲಾಗುವುದು ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

