10ಕ್ಕೆ ಸಹಸ್ರ ಕಲಶ ಕುಂಭಾಭೀಷೇಕ
ದೊಡ್ಡಬಳ್ಳಾಪುರ: ಇಲ್ಲಿನ ದೇವಾಂಗ ಮಂಡಳಿ ವತಿಯಿಂದ ರಾಮಲಿಂಗ ಚೌಡೇಶ್ವರಿ ದೇವಸ್ಥಾನದಲ್ಲಿ ಜೂ.9 ಮತ್ತು 10ರಂದು ಕುಂಭಾಭಿಷೇಕ ಮಹೋತ್ಸವ ಹಮ್ಮಿಕೊಳ್ಳಲಾಗಿದೆ. ಜೂ.9 ರಂದು ಬೆಳಗ್ಗೆ 8 ಗಂಟೆಗೆ ಕಲಶ ಸ್ಥಾಪನೆ ನೆರವೇರಿಸಲಾಗುವುದು. ನಂತರ ಪುಣ್ಯಹ, ರುದ್ವಿಗ್ವಾಹರಣ, ಕಂಕಣ ಧಾರಣೆ, ಕಲಶಗಳಿಗೆ ಪೂಜೆ ನೆರವೇರಿಸಲಾಗುವುದು. ನಂತರ ಜಪ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಜೂ.10ರಂದು ಬೆಳಗ್ಗೆ 9.30ರಿಂದ ಸ್ಥಾಪಿತ ಕಲಶಗಳಿಗೆ ಪೂಜೆ ನೆರವೇರಿಸಲಾಗುವುದು. ನಂತರ ಶ್ರೀ ರಾಮಲಿಂಗ ಸ್ವಾಮಿಗೆ ಪಂಚಾಮೃತ ಅಭಿಷೇಕದೊಂದಿಗೆ ಸಹಸ್ರ ಕುಂಭಾಭಿಷೇಕ, ರುದ್ರಹೋಮ, ಪೂರ್ಣಾಹುತಿ, ಮಹಾ ಮಂಗಳಾರತಿ ನೆರವೇರಿಸಲಾಗುವುದು. ನಂತರ ಪ್ರಸಾದ ವಿನಿಯೋಗ ಇರುವುದು ಎಂದು ದೇವಾಂಗ ಮಂಡಳಿ ಕಾರ್ಯಕಾರಿ ಸಮಿತಿ ತಿಳಿಸಿದೆ. ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಪಾಲ್ಗೊಳ್ಳಬೇಕೆಂದು ಮನವಿ ಮಾಡಿದೆ.
ಫಲಿತಾಂಶ ಪ್ರಕಟ
ಬೆಂಗಳೂರು: ಏಪ್ರಿಲ್, ಮೇನಲ್ಲಿ ನಡೆದ ತಾಂತ್ರಿಕ ಪರೀಕ್ಷಾ ಮಂಡಳಿಯ ವಿವಿಧ ಡಿಪ್ಲೊಮಾ ಪರೀಕ್ಷೆಗಳಿಗೆ ಹಾಜರಾಗಿದ್ದು, ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸುವ ಜ್ಛಜಡಿ ಪರೀಕ್ಷೆಗೆ ನೋಂದಣಿ ಮಾಡಿಸಿರುವ ವಿದ್ಯಾರ್ಥಿಗಳ ಫಲಿತಾಂಶ ಜೂ.6ರಂದು ರಾಜ್ಯದಲ್ಲಿನ ಎಲ್ಲ ಪಾಲಿಟೆಕ್ನಿಕ್ಗಳಲ್ಲಿ ಮಧ್ಯಾಹ್ನ 3 ಗಂಟೆಗೆ ಸಂಸ್ಥೆಯಲ್ಲಿ ಉಪಯೋಗಿಸುತ್ತಿರುವ ಛಿಡಿಜಟ್ಝಟ್ಢಿ ಆನ್ಲೈನ್ ಅಪ್ಲಿಕೇಷನ್ ಮೂಲಕ ಪ್ರಕಟಿಸಲಾಗುವುದೆಂದು ತಾಂತ್ರಿಕ ಪರೀಕ್ಷಾ ಮಂಡಳಿ ಪ್ರಕಟಣೆ ತಿಳಿಸಿದೆ.
ಅರ್ಜಿ ಆಹ್ವಾನ
ಬೆಂಗಳೂರು: 2013-14ನೇ ಸಾಲಿನ ಶಿಕ್ಷಕರ ವರ್ಗಾವಣೆಗೆ ಅರ್ಜಿ ಸಲ್ಲಿಸಲು ಬಯಸುವ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರು, ಪ್ರೌಢಶಾಲಾ ಮುಖ್ಯ ಶಿಕ್ಷಕರ ವೃಂದದ ಅಧಿಕಾರಿಗಳು ಮತ್ತು ವಿಷಯ ಪರೀಕ್ಷಕರು (ವೃತ್ತಿ) ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯಲ್ಲಿನ ದೈಹಿಕ ಶಿಕ್ಷಣ ಪರಿವೀಕ್ಷಕರು ಜೂ.6ರಿಂದ 12ರೊಳಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಯನ್ನು ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರ ಕಚೇರಿ ಬೆಂಗಳೂರು, ಅಪರ ಆಯುಕ್ತ ಕಚೇರಿ ಧಾರವಾಡ ಮತ್ತು ಗುಲ್ಬರ್ಗ, ಶಿಕ್ಷಣ ಇಲಾಖೆ ಸಹ ನಿರ್ದೇಶಕರ ಕಚೇರಿ, ರಾಜ್ಯದ ಎಲ್ಲ ಜಿಲ್ಲಾ ಉಪ ನಿರ್ದೇಶಕರ (ಆಡಳಿತ) ಕಚೇರಿ ಮತ್ತು ಢಿಢಿಢಿ.ಝ್ಛ್ಟ್ಟಟಜಜ್ಡ್ಛಛಡ್ಝ್ಟಿಟಿ.್ಞಛ್ಠ.ಟ್ಝ್ಛಿ.್ಝಟಿನಲ್ಲಿ ಮಾಹಿತಿ ಪಡೆಯಿರಿ.
ತಾಂತ್ರಿಕ ಕಾರ್ಯಾಗಾರ
ಬೆಂಗಳೂರು: ಎರಡು ದಿನಗಳ ಕಾಲ ಪರಂಪರೆ ಸ್ಮಾರಕಗಳ ನಿರ್ವಹಣೆ ಕುರಿತು ತಾಂತ್ರಿಕ ಕಾರ್ಯಾಗಾರವನ್ನು ನ್ಯಾಷನಲ್ ಗ್ಯಾಲರಿ ಆಫ್ ಮಾಡರ್ನ್ ಆರ್ಟ್, ಬಸವೇಶ್ವರ ವೃತ್ತದ ಬಳಿ ಆಯೋಜಿಸಿದೆ. ಕಾರ್ಯಾಗಾರ ಜೂ.7ರಿಂದ ಜೂ.8ರವರೆಗೆ ನಡೆಯಲಿದೆ ಎಂದು ಪುರಾತತ್ವ ಸರ್ವೇಕ್ಷಣಾ ಇಲಾಖೆ ಬೆಂಗಳೂರು ವಲಯದ ಅಧೀಕ್ಷಕ ಪುರಾತತ್ವ ಮುಖ್ಯಸ್ಥರಾದ ಡಾ.ಎಂ. ನಂಬಿರಾಜನ್ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

