ಬೆಂಗಳೂರು ಗ್ರಾಮಾಂತರ

20 ಜೀತದಾಳು ಮುಕ್ತ

Published On :

ಮಾಗಡಿ: ಮಾಗಡಿಯಲ್ಲಿ 20 ಮಂದಿ ಜೀತದಾಳುಗಳನ್ನು ಪತ್ತೆ ಹಚ್ಚಿ, ಜೀತದಿಂದ ಮುಕ್ತಿಗೊಳಿಸಿದ್ದಾಗಿ ತಹಸೀಲ್ದಾರ್ ಡಾ. ಬಿ.ಆರ್. ಹರೀಶ್ ನಾಯಕ್ ತಿಳಿಸಿದರು.
ಮಾಗಡಿ ತಾಲೂಕಿನ ಕೆಂಪಸಾಗರದ ಹತ್ತಿರದ ದೊಂಬರಪಾಳ್ಯದಲ್ಲಿ ಗೊಲ್ಲಹಳ್ಳಿಯ ಪಾಲನೇತ್ರ ಎಂಬವವರು ತಮ್ಮ ಜಮೀನಿನಲ್ಲಿ ಕೆಲವರನ್ನು ಕಳೆದ 13 ವರ್ಷಗಳಿಂದ ಕಲ್ಲು ಕ್ವಾರಿಯಲ್ಲಿ ಜೀತದಾಳುಗಳಾಗಿ ದುಡಿಸಿಕೊಳ್ಳುತ್ತಿದ್ದರು. ಅಂತಾರಾಷ್ಟ್ರೀಯ ಜಸ್ಟೀಸ್ ಮಿಷನ್, ತಹಸೀಲ್ದಾರ್, ಕಾರ್ಮಿಕ ಇಲಾಖೆ ಅಧಿಕಾರಿಗಳ ನೇತೃತ್ವದಲ್ಲಿ ಗುರುವಾರ ಜಂಟಿ ಕಾರ್ಯಾಚಾರಣೆ ನಡೆಸಲಾಗಿತ್ತು. ಸುಮಾರು 15 ಕುಟುಂಬಗಳನ್ನು ಜೀತದಿಂದ ಬಿಡುಗಡೆಗೊಳಿಸಿ, ತಾಲೂಕು ಕಚೇರಿಗೆ ಕರೆತಂದಿದ್ದಾಗಿ ತಹಸೀಲ್ದಾರ್ ತಿಳಿಸಿದರು. ಹೈದರಬಾದಿನ ಮೆಹಬೂಬ್‌ನಗರ ವಾಸಿಗಳಾದ ಮುರುಗೇಶ್, ಗಂಗಣ್ಣ, ಮುನಿಯಪ್ಪ, ಅಂಜಪ್ಪ, ಕಣ್ಣಪ್ಪ, ರತ್ನಮ್ಮ, ಲಕ್ಷ್ಮೀ, ಚಿನ್ನಮ್ಮ, ದುರ್ಗಮ್ಮ ,ಲಕ್ಷ್ಮೀ ಸೇರಿದಂತೆ 10 ಮಕ್ಕಳನ್ನು ಗೊಲ್ಲಹಳ್ಳಿಯ ಪಾಲನೇತ್ರ  ಎಂಬುವರು ದುಡಿಸಿಕೊಳ್ಳುತ್ತಿದ್ದರು. ಜೀತಪದ್ಧತಿ ಕಾಯ್ದೆ ಅನ್ವಯ ಕ್ವಾರಿ ಮಾಲೀಕ ಪಾಲನೇತ್ರ ಅವರ ವಿರುದ್ಧ ಮೊಕದೊಮ್ಮೆ ಹೂಡುವುದಾಗಿ ತಹಸೀಲ್ದಾರ್ ತಿಳಿಸಿದರು.
ವಸತಿ ಇಲ್ಲ: ಜೀತದಾಳುಗಳಿಗೆ ಇರಲು ವಸತಿಯಿಲ್ಲ, ತಿನ್ನಲು ತಿಂಡಿ, ಊಟ, ಕಾಫಿ ಸಹ ನೀಡುತ್ತಿರಲಿಲ್ಲ. ಕ್ವಾರಿಯಲ್ಲಿ ದುಡಿಯುತ್ತಿದ್ದಾಗ ಸಿಡಿಮದ್ದಿನಿಂದ ಗಾಯಗೊಂಡರೂ ಚಿಕಿತ್ಸೆ ಕೊಡಿಸುತ್ತಿರಲಿಲ್ಲ. ಅನಾರೋಗ್ಯಕ್ಕೆ ಒಳಗಾದರೂ ಆಸ್ಪತ್ರೆ ಕರೆದೊಯ್ದು ಚಿಕಿತ್ಸೆ ಸಹ ಕೊಡಿಸುತ್ತಿರಲಿಲ್ಲ. ವಾರ್ಷಿಕ ಬೋನಸ್ ಇಲ್ಲ, ಊರಿಗೂ ಕಳುಹಿಸುತ್ತಿರಲಿಲ್ಲ. ಇಂಥ ಸಂಕಷ್ಟದಲ್ಲಿ ಗುಡಿಸಲು ಹಾಕಿಕೊಂಡು ಮಳೆ, ಬಿಸಿಲು, ಗಾಳಿ ಎನ್ನದೆ ಕೈಗೂಸಿನೊಂದಿಗೆ ಜೀವಿಸುತ್ತಿದ್ದೆವು ಎಂದು ಮರುಗೇಶ್, ಗಂಗಣ್ಣ ಇತರರು ಅಳಲನ್ನು ತೋಡಿಕೊಂಡರು. ಕಾರ್ಮಿಕ ಇಲಾಖೆಯ ಅಧಿಕಾರಿ ಸುಂದರೇಶ್ ಜೀತದಾಳುಗಳಿಂದ ಪೂರ್ಣ ಮಾಹಿತಿ ಸಂಗ್ರಹಿಸಿದರು. ವಕೀಲರಾದ ಅನಿಲಾ, ಪೊಲೀಸ್ ಸಿಬ್ಬಂದಿಗಳು ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.