ವಿವೇಕಾನಂದರ ವಿಚಾರಧಾರೆ ಯುವ ಪೀಳಿಗೆಗೆ ತಿಳಿಸಿ'
ಕ.ಪ್ರ.ವಾರ್ತೆ ಮಾಗಡಿ ಜೂ.16-
ಸ್ವಾಮಿ ವಿವೇಕಾನಂದ ಅವರ ಸ್ಫೂರ್ತಿದಾಯಕ ವಿಚಾರಧಾರೆಯನ್ನು ಯುವ ಪೀಳಿಗೆಗೆ ತಿಳಿಸಿಕೊಡಬೇಕು ಎಂದು ತುಮಕೂರು ರಾಮಕೃಷ್ಣ ವಿವೇಕಾನಂದ ಆಶ್ರಮದ ವೀರೇಶಾನಂದಸ್ವಾಮಿ ಕರೆ ನೀಡಿದರು.
ಅವರು ತಾಲೂಕಿನ ಕುದೂರಿನಲ್ಲಿ ಸ್ವಾಮಿ ವಿವೇಕಾನಂದ ಅವರ 150ನೇ ಜನ್ಮದಿನಾಚಾರಣೆ ಪ್ರಯುಕ್ತ ಕುದೂರು ಗ್ರಾಮಕ್ಕೆ ಬರುವ ರಥಯಾತ್ರೆಯನ್ನು ಸ್ವಾಗತಿಸುವ ಪೂರ್ವ ಸಿದ್ಧತಾ ಸಭೆಯ ಸಾನಿಧ್ಯ ವಹಿಸಿ ಮಾತನಾಡುತ್ತಾ ಇಂದಿನ ಯುವ ಪೀಳಿಗೆಯ ಸರ್ವತೋಮುಖ ಬೆಳವಣಿಗೆಗೆ ಸ್ವಾಮಿ ವಿವೇಕಾನಂದರ ಶ್ರೇಷ್ಠ ಚಿಂತನ ವಿಚಾರಧಾರೆಗಳು ಮತ್ತು ಅವರ ಬಹುಮುಖ ವ್ಯಕ್ತಿತ್ವವನ್ನು ಪರಿಚಯಿಸುವ ಕೆಲಸ ಆಗಬೇಕಿದೆ. ಸ್ವಾಮಿ ವಿವೇಕಾನಂದರ ಉಪದೇಶಗಳಿಂದ ಪ್ರಭಾವಿತರಾದ ಯುವಕರಲ್ಲಿ ಆತ್ಮವಿಶ್ವಾಸ, ಕ್ರಿಯಾಶೀಲತೆ ಹಾಗೂ ಪರಿಪೂರ್ಣ ವ್ಯಕ್ತಿತ್ವವನ್ನು ವಿಕಸಿಸಲು ಸಹಕಾರಿಯಾಗುತ್ತದೆ ಎಂದರು.
ರಾಜ್ಯಾದ್ಯಂತ ರಥಯಾತ್ರೆ: ಸ್ವಾಮಿ ವಿವೇಕಾನಂದರ ರಥಯಾತ್ರೆ 2013 ರ ಮಾರ್ಚ್ 13 ರಂದು ರಾಮಕೃಷ್ಣ ಜಯಂತ್ಯುತ್ಸವವ ದಿನದಂದು ಆರಂಭಗೊಂಡಿದ್ದು, 2014 ರ ಜನವರಿಯವರೆಗೆ ರಾಜ್ಯಾದ್ಯಂತ ರಥಯಾತ್ರೆ ಸಂಚರಿಸಲಿದೆ. ಆ ವೇಳೆ ರಾಜ್ಯದಲ್ಲೆಡೆ ವಿವೇಕಾನಂದರ ವಿಚಾರಧಾರೆಗಳು, ಅವರ ವ್ಯಕ್ತಿತ್ವವನ್ನು ಯುವ ಪೀಳಿಗೆಗೆ ತಲುಪಿಸುವ ಕೆಲಸವಾಗಬೇಕಿದೆ ಎಂದರು.
ಗ್ರಾಮ ಪಂಚಾಯ್ತಿ ಮಾಜಿ ಅಧ್ಯಕ್ಷ ಕೆ.ಬಿ. ಬಾಲರಾಜು ಮಾತನಾಡಿ ಸ್ವಾಮಿ ವಿವೇಕಾನಂದರ ರಥಯಾತ್ರೆ ಅದ್ಭುತವಾದ ಐತಿಹಾಸಿಕ ಮಹತ್ವದ ಕಾರ್ಯಕ್ರಮವಾಗಿದೆ. ಕುದೂರಿನ ಪ್ರತಿಯೊಬ್ಬ ನಾಗರಿಕರು ವಿವೇಕಾನಂದರ ರಥಯಾತ್ರೆಯನ್ನು ಸ್ವಾಗತಿಸ ಬೇಕೆಂದರು.
ಪ್ರಬಂಧ ಸ್ಪರ್ಧೆ: ಸ್ವಾಮಿ ವಿವೇಕಾನಂದರ 150 ಜನ್ಮದಿನಾಚರಣೆ ಪ್ರಯುಕ್ತ ಆಗಮಿಸುವ ರಥಯಾತ್ರೆ ಅಂಗವಾಗಿ ಕುದೂರಿನಲ್ಲಿ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಪ್ರಬಂಧ ಸ್ವರ್ಧೆ ಏರ್ಪಡಿಸುವ ಮೂಲಕ ಬಹುಮಾನ ವಿತರಣೆಗೆ ಅಗತ್ಯ ಕ್ರಮ ವಹಿಸಲು ತೀರ್ಮಾನಿಸಲಾಗಿದೆ ಎಂದು ಗಣೇಶ್ ಮೆಡಿಕಲ್ ಮಾಲೀಕ ಉಮಾಪತಿ ತಿಳಿಸಿದರು.
ಪ್ರಶಸ್ತಿ ವಿಜೇತ ಕೆ.ಬಿ.ರಾಮಚಂದ್ರ, ಪದವಿ ಪೂರ್ವ ಕಾಲೇಜು ಅಭಿವೃದ್ಧಿ ಸಮಿತಿ ಅಧ್ಯಕ್ಷ ಕೆ.ಜಿ. ಹೊನ್ನಸ್ವಾಮಿ, ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಗಂ.ದಯಾನಂದ್, ವೆಂಕಟೇಶ್, ಸತ್ಯನಾರಾಯಣಶೆಟ್ಟಿ, ನಾರಾಯಣಮೂರ್ತಿ, ಕೇಶವಮೂರ್ತಿ, ಕು.ಮು. ದಯಾನಂದ್ ಇತರರು ಹಾಜರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

