ಬೆಂಗಳೂರು ಗ್ರಾಮಾಂತರ

20ಕ್ಕೆ ಸೂಲಿಬೆಲೆಯಲ್ಲಿ ಗ್ರಾಮಸಭೆ

Published On :

ಸೂಲಿಬೆಲೆ: ಜೂ.18ರಿಂದ  ಎರಡು ದಿನಗಳ ಕಾಲ ಸೂಲಿಬೆಲೆ ವ್ಯಾಪ್ತಿಯ ವಾರ್ಡುಗಳಲ್ಲಿ ಸಭೆಗಳನ್ನು ಆಯೋಜಿಸಿದ್ದು, ಜೂ.20 ರಂದು ಸಂತೆ ಮೈದಾನದಲ್ಲಿ ಗ್ರಾಮಸಭೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಗ್ರಾಪಂ ಪ್ರಕಟಣೆಯಲ್ಲಿ ತಿಳಿಸಿದೆ.
ಜೂ.18 ರಂದು ಸೂಲಿಬೆಲೆ ಒಂದನೇ ವಾರ್ಡಿನ ಮದರಸ ಶಾಲೆ, 6ನೇ ವಾರ್ಡಿನ ಗಣೇಶನ ದೇವಸ್ಥಾನ, 7ನೇ ವಾರ್ಡಿನ ಪಾರ್ವತಿ ಪರಮೇಶ್ವರ ದೇವಸ್ಥಾನ ಹಾಗೂ ನಾಲ್ಕನೇ ವಾರ್ಡಿನ ಸಾಯಿಬಾಬಾ ಮಂದಿರದ ಬಳಿ ವಾರ್ಡು ಸಭೆಗಳನ್ನು ನಡೆಸಲಾಗಿದ್ದು, ಜನರು ತಮ್ಮ ಸಮಸ್ಯೆ ಮತ್ತು ಅಗತ್ಯ ಕಾಮಗಾರಿಗಳು ಪೂರ್ವ ತಯಾರಿಕೆ ಪಟ್ಟಿಯನ್ನು ನೀಡಿದ್ದಾರೆ. ಜೂ.19 ಬುಧವಾರ 2ನೇ ವಾರ್ಡಿನ ಸಮುದಾಯಭವನ, 3ನೇ ವಾರ್ಡಿನ ಈಶ್ವರ ದೇವಸ್ಥಾನ, 5ನೇ ವಾರ್ಡಿನ ಸುಗ್ಗಲಮ್ಮ ದೇಗುಲ ಹಾಗೂ ರಾಂಪುರ, ಕದನಪುರ ಗ್ರಾಮಗಳಲ್ಲಿ ವಾರ್ಡು ಸಭೆಗಳನ್ನು ಆಯೋಜಿಸಲಾಗಿದ್ದು, ಆಯಾ ವಾರ್ಡಿನ ಜನರು ತಮ್ಮ ಕುಂದು, ಕೊರತೆಗಳನ್ನು ತಿಳಿಸಬಹುದಾಗಿದೆ. ಜೂ.20 ರಂದು ನಡೆಯುವ ಗ್ರಾಮಸಭೆಗೆ ಶಾಸಕ ಎನ್.ನಾಗರಾಜ್, ಸಂಸದ ವೀರಪ್ಪ ಮೊಯ್ಲಿ, ಜಿಪಂ ಸದಸ್ಯೆ ವೆಂಕಟಲಕ್ಷಮ್ಮ, ತಾಪಂ ಸದಸ್ಯ ಬಿ.ವಿ ರಾಜಶೇಖರ್ ಗೌಡ ಭಾಗವಹಿಸಲಿದ್ದಾರೆ. ಗ್ರಾಪಂ ಅಧ್ಯಕ್ಷ ಕೆ.ನಾರಾಯಣಪ್ಪ ಅಧ್ಯಕ್ಷತೆ ವಹಿಸಲಿದ್ದು, ಹೊಸಕೋಟೆ ರೇಷ್ಮೆ ಇಲಾಖೆಯ ಸಹಾಯಕ ನಿರ್ದೇಶಕಿ ಮಂಜುಳಾ ದೇವಿ ನೋಡಲ್ ಅಧಿಕಾರಿಯಾಗಿ ಭಾಗವಹಿಸಲಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.