4 ಸಂಸ್ಥೆ, ಇಬ್ಬರಿಗೆ ಪರಿಸರ ಶ್ರೀ ಪ್ರಶಸ್ತಿ ಪ್ರದಾನ
ಬೆಂಗಳೂರು: ಪ್ರಸಕ್ತ ಸಾಲಿನ ಪರಿಸರ ಶ್ರೀ ಪ್ರಶಸ್ತಿಯನ್ನು 4 ಸಂಸ್ಥೆಗಳು ಹಾಗೂ ವೈಯಕ್ತಿಕವಾಗಿ ಇಬ್ಬರಿಗೆ ಅರಣ್ಯ ಸಚಿವ ಬಿ. ರಮಾನಾಥ್ ರೈ ಮಂಗಳವಾರ ಪ್ರದಾನ ಮಾಡಿದರು.
ರಾಮನಗರದ ಸಾಲುಮರದ ನಿಂಗಣ್ಣ, ಬಾಗಲಕೋಟೆಯ ಪಿ.ಡಿ. ವಾಲೀಕರ್, ಶಿವಮೊಗ್ಗದ ಪರಿಸರ ಅಧ್ಯಯನ ಕೇಂದ್ರ, ಮಂಗಳೂರಿನ ಡೆವಲಪ್ಮೆಂಟ್ ಇನಿಶಿಯೇಷನ್ ಫಾರ್ ಸಸ್ಟೆನೇಬಲ್ ಹ್ಯೂಮನ್ ಅಡ್ವಾನ್ಸ್ಮೆಂಟ್(ದಿಶಾ), ಹಾಸನದ ಜಯಲಕ್ಷ್ಮಿ ಐಟಿಸಿ ಲಿಮಿಟೆಡ್, ಲಿಂಗನಸೂರಿನ ಸಜ್ಜನ ಶ್ರೀ ಕೃಷಿ ಅಧ್ಯಯನ ಮತ್ತು ಗ್ರಾಮೀಣಾಭಿವೃದ್ಧಿ ಕೇಂದ್ರಕ್ಕೆ ಪ್ರಶಸ್ತಿ ವಿತರಿಸಲಾಯಿತು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಗೈರು ಹಾಜರಿಯಲ್ಲಿ ಅರಣ್ಯ ಸಚಿವರು ಪ್ರಶಸ್ತಿ ವಿತರಿಸಿದರು.
'ನಾವು ಸೇವಿಸುವ ಆಹಾರದಲ್ಲಿ ಶೇ.33ರಷ್ಟನ್ನು ದುರ್ಬಳಕೆ ಮಾಡುತ್ತಿದ್ದೇವೆ. ಹಸಿವಿನಿಂದ ಪ್ರತಿದಿನ ಸಾವಿರಾರು ಮಕ್ಕಳು ಸಾವನ್ನಪ್ಪುತ್ತಿದ್ದಾರೆ. ಮತ್ತೊಂದೆಡೆ ಆಹಾರದ ದುರ್ಬಳಕೆಯಿಂದ ಪರಿಸರ ಮಾಲಿನ್ಯವೂ ಆಗುತ್ತದೆ. ಈ ಹಿನ್ನೆಲೆಯಲ್ಲಿ ಆಹಾರ ಸೇವನೆಯಲ್ಲಿ ಎಲ್ಲರೂ ಶಿಸ್ತು ತಂದುಕೊಳ್ಳಬೇಕು' ಎಂದು ರಮಾನಾಥ್ ರೈ ಹೇಳಿದರು.
ಪರಿಸರ ಜಾಗೃತಿಗೆ ಸಂಬಂಧಿಸಿ ಮಾಲಿನ್ಯ ನಿಯಂತ್ರಣ ಮಂಡಳಿ ಹಾಗೂ ಅರಣ್ಯ ಇಲಾಖೆಯು ಇನ್ನು ಹೆಚ್ಚಿನ ಕಾರ್ಯಕ್ರಮಗಳನ್ನು ಆಯೋಜಿಸಬೇಕು. ರಾಜ್ಯದ ಪ್ರತಿ ಭಾಗದಲ್ಲೂ ಇದು ನಡೆಯಬೇಕು ಎಂದು ಸಚಿವರು ಅಭಿಪ್ರಾಯಪಟ್ಟರು.
ಬೆಂಗಳೂರು ಸೇರಿದಂತೆ ರಾಜ್ಯದ ಇತರೆ ಭಾಗದಲ್ಲಿ ಆಗುತ್ತಿರುವ ತ್ಯಾಜ್ಯ ಸಮಸ್ಯೆಗೆ ಸಾರ್ವಜನಿಕರ ಬೇಜವಬ್ದಾರಿಯೂ ಕಾರಣವಾಗಿದೆ. ತ್ಯಾಜ್ಯ ನಿರ್ವಹಣೆಯೂ ಪ್ರತಿಯೊಬ್ಬರ ಮನೆಯಿಂದಲೇ ಪ್ರಾರಂಭವಾಗಬೇಕು ಎಂದು ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಡಾ.ವಾಮನಾಚಾರ್ಯ ಹೇಳಿದರು.
ಕಾರ್ಯಕ್ರಮದಲ್ಲಿ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹಾಗೂ ಮಲ್ಲೇಶ್ವರದ ಶಾಸಕ ಡಾ.ಅಶ್ವತ್ಥ್ನಾರಾಯಣ ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

