108 ಆರೋಗ್ಯ ಕವಚ ಅಸಮರ್ಪಕ ಸೇವೆ
ಕ.ಪ್ರ.ವಾರ್ತೆ ಟಿ ಮಾಗಡಿ ಟಿ ಜೂ.23
108 ಆರೋಗ್ಯ ಕವಚ (ಅಂಬುಲೆನ್ಸ್) ಅಸಮರ್ಪಕ ಸೇವೆಯಿಂದ ಸಾರ್ವಜನಿಕರಿಗೆ ತುರ್ತು ಸೇವೆ ಸಿಗದೆ
ತುಂಬ ತೊಂದರೆ ಉಂಟಾಗುತ್ತಿದೆ.
ಹಿಂದೆ ಮುಖ್ಯಮಂತ್ರಿಯಾಗಿದ್ದ ಬಿ.ಎಸ್.ಯಡಿಯೂರಪ್ಪ ಅವರ ನೇತೃತ್ವದ ಸರ್ಕಾರದಲ್ಲಿ ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ಜಾರಿಗೆ ತಂದ ವಿಶೇಷ ಯೋಜನೆಯಲ್ಲೊಂದಾದ 108 ಆರೋಗ್ಯ ಕವಚದ ಸೇವೆಯಿಂದ ಲಕ್ಷಾಂತರ ಜೀವಗಳು ಉಳಿಯುತ್ತಿದೆ. ರಸ್ತೆ ಅಪಘಾತ, ಗರ್ಭಿಣಿ, ಬಾಣಂತಿಯರಿಗೆ 108 ಆರೋಗ್ಯ ಕವಚ ವರದಾನವಾಗಿ ಪರಿಣಮಿಸಿತ್ತು. ಆದರೆ ಇತ್ತೀಚೆಗೆ ತುರ್ತು ಸೇವೆ ಸಿಗದೆ 108 ಆರೋಗ್ಯ ಕವಚ ಅನಾರೋಗ್ಯದಿಂದ ಸಾಗುತ್ತಿದೆ ಎಂಬ ಆರೋಪ ಎಲ್ಲೆಡೆ ಕೇಳಿ ಬರುತ್ತಿದೆ.
108 ಸಮಸ್ಯೆಗಳ ನಡುವೆಯೇ 108 ಆರೋಗ್ಯ ಕವಚ ಸೇವೆ ಕುಂಟುತ್ತ ಸಾಗಿದೆ ಎಂದು ಆರೋಗ್ಯ ಕವಚ ನೌಕರರ ಸಂಘದ ಜಿಲ್ಲಾಧ್ಯಕ್ಷ ಕೆ.ಎಸ್.ನವೀನ್ ಆರೋಪಿಸಿದ್ದಾರೆ. ಅವರು ಸುದ್ದಿಗಾರರೊಂದಿಗೆ ಮಾತನಾಡುತ್ತಾ ಆಂಧ್ರ ಮೂಲದ ಜಿ.ವಿ.ಕೆ.ಎಂ.ಆರ್.ಐ ಫೌಂಡೇಷನ್ 108 ಆರೋಗ್ಯ ಕವಚದ ಸೇವೆಯನ್ನು ಗುತ್ತಿಗೆ ಪಡೆದಿದ್ದು, ಇತ್ತೀಚೆಗೆ ಅಸಮರ್ಪಕ ಸೇವೆ ಕಂಡುಬರುತ್ತ್ತಿದೆ. ಉದಾಹರಣೆಗೆ ರಾಮನಗರ, ಬಿಡದಿ, ಅರ್ಚಕರಹಳ್ಳಿ, ಕೊಡಂಬಳ್ಳಿ, ಸಾತನೂರು, ಕನಕಪುರ, ಚನ್ನಪಟ್ಟಣ, ಮಾಗಡಿ, ಕುದೂರು, ಸೋಲೂರು ಜಿಲ್ಲೆಯಲ್ಲಿ ಒಟ್ಟು 10, 108 ಆರೋಗ್ಯ ಕವಚ ಸಂಚರಿಸಬೇಕು. ಈಗ ಕೇವಲ 7 ಮಾತ್ರ ಚಲಿಸುತ್ತಿದೆ. ಬಿಡದಿ, ಅರ್ಚಕರಹಳ್ಳಿ, ಚನ್ನಪಟ್ಟಣ ಭಾಗದ 108 ಆರೋಗ್ಯ ಕವಚ ವಾಹನ ಚಲಿಸದೆ ಸ್ಥಗಿತಗೊಂಡಿದೆ. ಹಿಂದೆ ರಾಮನಗರ ಭಾಗದ 108 ಆರೋಗ್ಯ ಕವಚ ಅಪಘಾತಕ್ಕೊಳಗಾಗಿತ್ತು. 6 ತಿಂಗಳ ನಂತರ ದುರಸ್ಥಿಪಡಿಸಿ ನೀಡಲಾಗಿತ್ತು. ದುರಸ್ಥಿಗೆ ಕಳಪೆ ಗುಣಮಟ್ಟದ ಬಿಡಿಭಾಗಗಳನ್ನು ಬಳಸಿರುವ ಪರಿಣಾಮ ಮೂರೇ ದಿನದಲ್ಲಿ ಮತ್ತೆ ರಿಪೇರಿಗೆ ಬಂತು ಎಂದು ನವೀನ್ ತಿಳಿಸಿದರು.
ಹೆಚ್ಚುವರಿ ಟೈರ್ ನೀಡಿಲ್ಲ: ಬಹುತೇಕ 108 ಆರೋಗ್ಯ ಕವಚ ವಾಹನಗಳಿಗೆ ಹೆಚ್ಚುವರಿ ಟೈರ್ಗಳನ್ನು ನೀಡಿಲ್ಲ, ಹಿಂದೆ ಅಪೋಲೋ ಟೈರ್ ಒದಗಿಸಲಾಗುತ್ತಿತ್ತು. ಈಗ ಕಳಪೆ ಗುಣಮಟ್ಟದ ಗುಡ್ ಎಂಬ ಹೆಸರಿನ ಟೈರ್ ಒದಗಿಸುತ್ತಿದ್ದು, ಇದು ವಾಹನ ಚಾಲಕರಿಗೆ ವೇಗಕ್ಕೆ ಅಡಚಣೆಯಾಗುತ್ತಿರುವುದಲ್ಲದೆ ಸರಿ ಹೊಂದುತ್ತಿಲ್ಲ ಎಂಬ ಆರೋಪ ಕೇಳಿ ಬರುತ್ತಿದೆ. ಇತರೆ ದುರಸ್ಥಿ ಬಿಡಿಭಾಗಗಳು ಸಹ ಕಳಪೆ ಗುಣಮಟ್ಟದ ಒದಗಿಸುತ್ತಿರುವುದರಿಂದ ಒಂದಲ್ಲ, ಒಂದು ರಿಪೇರಿ ಇದ್ದೇ ಇರುತ್ತದೆ ಎಂದು ನವೀನ್ ಆರೋಪಿಸಿದರು.
ಸಾರ್ವಜನಿಕರ ತುರ್ತು ಸೇವೆಗೆ ಸರ್ಕಾರ ಸಾಕಷ್ಟು ಅನುದಾನ ನೀಡುತ್ತಿದೆ. ಅನುದಾನ ಪಡೆದ ಸಂಸ್ಥೆ ಮಾತ್ರ ನಿರ್ವಹಣೆಯಲ್ಲಿ ನಿರ್ಲಕ್ಷ್ಯ ತೋರುತ್ತಿದ್ದು, ಗುಣಮಟ್ಟದ ಸೇವೆ ನೀಡುತ್ತಿಲ್ಲ. ಇದರಿಂದಾಗಿ 108 ಆರೋಗ್ಯ ಕವಚದ ಸೇವೆ ಸಾರ್ವಜನಿಕರ ತುರ್ತು ಸೇವೆಗೆ ಗಗನ ಕುಸುಮವಾಗುತ್ತಿದ್ದು, ತುಂಬ ತೊಂದರೆಗೆ ಒಗಾಗುತ್ತಿದ್ದಾರೆ. ಇನ್ನು ಮುಂದಾದರೂ ಸಂಬಂಧಪಟ್ಟ ಸಚಿವರು ಕೂಡಲೆ ಇತ್ತ ಗಮನಹರಿಸಿ ಸಾರ್ವಜನಿಕರ ತರ್ತು ಸೇವೆಗೆ 108 ಆರೋಗ್ಯ ಕವಚದ ಸೇವೆ ಸಿಗುವಂತಾಗಲಿ ಎಂಬುದು ನಾಗರಿಕರ ಆಶಯವಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

