ಮಾಗಡಿ ಸರ್ಕಾರಿ ಆಸ್ಪತ್ರೆಗೆ ಶಾಸಕ ಬಾಲಕೃಷ್ಣ ಭೇಟಿ
ಕ.ಪ್ರ. ವಾರ್ತೆ ಮಾಗಡಿ ಜೂ.25
ಜುಲೈ 5 ರಂದು ಮಧ್ಯಾಹ್ನ 3 ಗಂಟೆಗೆ ಮಾಗಡಿ ಸರ್ಕಾರಿ ಆಸ್ಪತ್ರೆಯಲ್ಲಿ ಡಿಎಚ್‌ಓ ನೇತೃತ್ವದಲ್ಲಿ ಆಸ್ಪತ್ರೆ ವೈದ್ಯರ ಹಾಗೂ ಸಿಬ್ಬಂದಿಗಳ ಸಭೆ ಕರೆಯಲಾಗಿದೆ ಎಂದು ಶಾಸಕ ಎಚ್.ಸಿ. ಬಾಲಕೃಷ್ಣ ತಿಳಿಸಿದರು.
ಅವರು ಮಾಗಡಿ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ ಶಂಕಿತ ಡೆಂಘೀ ಜ್ವರದಿಂದ ದಾಖಲಾಗಿರುವ ರೋಗಿಗಳ ಯೋಗಕ್ಷೇವು ವಿಚಾರಿಸಿ, ರೋಗಿಗಳಿಗೆ ಅಗತ್ಯ ಚಿಕಿತ್ಸೆ ನೀಡುವಂತೆ ವೈದ್ಯರಿಗೆ ಸೂಚನೆ ನೀಡಿದರು.
ನಂತರ ವೈದ್ಯರೊಂದಿಗೆ ಚರ್ಚಿಸಿದ ಶಾಸಕರು, ತಾಲೂಕಿನಲ್ಲಿ ಸುಮಾರು 11ಕ್ಕೂ ಹೆಚ್ಚು ಮಂದಿಗೆ ಶಂಕಿತ ಡೆಂಘೀ ಜ್ವರ ಕಾಣಿಸಿಕೊಂಡಿದ್ದು, ಅವರ ರಕ್ತ ಪರೀಕ್ಷಿಸಿ ಚಿಕಿತ್ಸೆ ನೀಡುತ್ತಿದ್ದಾರೆ. ಇದಕ್ಕೆಲ್ಲ ಹದಗೆಟ್ಟ ನೈರ್ಮಲ್ಯ ಕಾರಣವಾಗಿದ್ದು, ಪಟ್ಟಣದ ಪುರಸಭೆ ಮುಂಜಾಗ್ರತಾ ಕ್ರಮವಾಗಿ ಚರಂಡಿಗಳ ಸ್ವಚ್ಛತಾ ಕಾರ್ಯ ಮಾಡಬೇಕು. ಪಟ್ಟಣದ ಎಲ್ಲಾ ವಾರ್ಡ್‌ಗಳ ಚರಂಡಿಗಳಿಗೂ ಬ್ಲಿಚೀಂಗ್ ಪೌಡರ್ ಸಿಂಪಡಿಸಬೇಕು ಎಂದರು.
ಪುಷ್ಕರಣಿ ರಕ್ಷಣೆಗೆ ಕ್ರಮ: ಮಾಗಡಿ ತಾಲೂಕಿನ ಐತಿಹಾಸಿಕ ತಿರುಮಲೆ ಶ್ರೀರಂಗನಾಥಸ್ವಾಮಿ ದೇವಾಲಯದ ಮುಂಭಾಗವಿರುವ ಪವಿತ್ರ ಪುಷ್ಕರಣಿ ಕಲುಷಿತ ಮಾಡಬಾರದು, ಈಜಾಡದಂತೆ ಎಚ್ಚರವಹಿಸಬೇಕು. ಪುಷ್ಕರಣಿ ರಕ್ಷಣೆಗೆ ಸುತ್ತಲು ತಂತಿ ಬೇಲಿ ಹಾಕಿಸಬೇಕು. ದೇವಾಲಯದಲ್ಲಿರುವ ಶಿಥಿಲ ವಿದ್ಯುತ್ ಸಂಪರ್ಕವನ್ನು ಸುಮಾರು 8 ಲಕ್ಷ ರು. ವೆಚ್ಚದಲ್ಲಿ ದುರಸ್ಥಿಪಡಿಸಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ದೇವಾಲಯಕ್ಕೆ ಬರುವ ಭಕ್ತರಿಗೆ ಅಗತ್ಯ ಶೌಚಾಲಯವಿದ್ದರೂ ನಿರುಪಯುಕ್ತವಾಗಿದೆ. ಶೌಚಾಲಯವನ್ನು ಉಪಯೋಗಕ್ಕೆ ಅನುವು ಮಾಡಿಕೊಡಬೇಕು. ಇದಕ್ಕಾಗಿ ಒಬ್ಬ ಸಿಬ್ಬಂದಿಯನ್ನು ನೇಮಿಸಲು ತಹಸೀಲ್ದಾರ್ ಅವರಿಗೆ ಸೂಚಿಸಲಾಗಿದೆ ಎಂದರು. ಇದೇ ರೀತಿ ಸಾವನದುರ್ಗದ ಶ್ರೀ ಲಕ್ಷ್ಮೀ ನರಸಿಂಹಸ್ವಾಮಿ, ಸುಗ್ಗನಹಳ್ಳಿ ನರಸಿಂಹಸ್ವಾಮಿ ದೇವಾಲಯಕ್ಕೂ ಮೂಲಭೂತ ಸೌಕರ್ಯ ಕಲ್ಪಿಸಲು ತಾಲೂಕು ಆಡಳಿತಕ್ಕೆ ಸೂಚಿಸಲಾಗಿದೆ ಎಂದರು.
ಆರು ತಿಂಗಳಲ್ಲಿ ಪೂರ್ಣ: ಕೆಎಸ್‌ಆರ್‌ಟಿಸಿ ನೂತನ ಬಸ್ ನಿಲ್ದಾಣ ಕಾಮಗಾರಿ ಬರದಿಂದ ನಡೆದಿದೆ. ಈಗಾಗಲೇ 4.5 ಕೋಟಿ ರು ವೆಚ್ಚದಲ್ಲಿ ಸುಸಜ್ಜಿತ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ಕಾಮಗಾರಿ ನಡೆದಿದ್ದು, ಇನ್ನು ಆರು ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳ್ಳಲಿದೆ. ಅದಕ್ಕೂ ಮುನ್ನವೇ ನಿಲ್ದಾಣದಿಂದ ಬಸ್ ಸಂಚಾರಕ್ಕೆ ಅಗತ್ಯ ಕ್ರಮ ಕೈಗೊಳ್ಳುವಂತೆ ಸಂಬಂಧಪಟ್ಟ ಎಂಜಿನಿಯರ್ ಅವರಲ್ಲಿ ಚರ್ಚಿಸಿದ್ದೇನೆ ಎಂದರು.
ಆಧಾರ್ ಕಾರ್ಡ್ ಕೇಂದ್ರ ಹೆಚ್ಚಿಸಲು ಕ್ರಮ: ಮಾಗಡಿ ಪಟ್ಟಣದ ಹೊಸಪೇಟೆ, ಎನ್‌ಇಎಸ್ ಮತ್ತು ಕಲ್ಯಗೇಟ್ ಬಳಿ ಆಧಾರ್ ಕೇಂದ್ರ ತೆರೆದು ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಬೇಕು. ಸುಖಸುಮ್ಮನೆ ಸಾರ್ವಜನಿಕರಿಗೆ ತೊಂದರೆ ಕೊಡಬಾರದು. ಈ ನಿಟ್ಟಿನಲ್ಲಿ ಗ್ರಾಮೀಣ ಭಾಗದಲ್ಲಿ ಆಧಾರ್ ಕೇಂದ್ರ ತೆರೆದು ಹಳ್ಳಿ ಜನತೆಗೆ ಅನುಕೂಲ ಮಾಡಬೇಕು. ಈ ಸಂಬಂಧ ಅಗತ್ಯ ಕ್ರಮ ವಹಿಸುವಂತೆ ಆಧಾರ್ ಅಧಿಕಾರಿಗಳಲ್ಲಿ ಶಾಸಕರು ಸೂಚನೆ ನೀಡಿದರು.
ಕೆರೆಗಳ ಜೀರ್ಣೋದ್ಧಾರ: ಮಾಗಡಿ ಪಟ್ಟಣದ ಪ್ರಸಿದ್ಧ ಗೌರಮ್ಮನಕೆರೆ, ಹೊಂಬಾಳಮ್ಮನಕೆರೆ ಜೀರ್ಣೋದ್ಧಾರ ಕಾಮಗಾರಿ ಅರ್ಧಕ್ಕೆ ನಿಂತಿದ್ದು, ಸರ್ಕಾರದಿಂದ ಹಣ ಬಿಡುಗಡೆಯಾಗಬೇಕಿದ್ದು, ಸದ್ಯದಲ್ಲೇ ಕಾಮಗಾರಿ ಪುರ್ನರಾಂಭಗೊಳ್ಳಲು ಕ್ರಮ ವಹಿಸಿದ್ದೇನೆ ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

