ಬೈಕ್ ಅಡ್ಡಗಟ್ಟಿ ನಗ, ನಾಣ್ಯ ಅಪಹರಣ
ರಾಮನಗರ: ಬೈಕ್ನಲ್ಲಿ ಹೋಗುತ್ತಿದ್ದ ವ್ಯಕ್ತಿಯನ್ನು ಅಡ್ಡಗಟ್ಟಿದ ದುಷ್ಕರ್ಮಿಗಳು ಆತನ ಬಳಿ ಇದ್ದ ರು. 85 ಸಾವಿರ ಹಾಗೂ ಚಿನ್ನದ ಉಂಗುರವನ್ನು ದೋಚಿ ಪರಾರಿಯಾಗಿರುವ ಘಟನೆ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಯರೇಹಳ್ಳಿ ಗ್ರಾಮದ ವೀರಭದ್ರಯ್ಯ ದರೋಡೆಗೆ ಒಳಗಾದವರು. ಬುಧವಾರ ರಾತ್ರಿ 10.30ರಲ್ಲಿ ಸ್ವಗ್ರಾಮಕ್ಕೆ ತೆರಳುತ್ತಿದ್ದಾಗ ಶ್ಯಾನುಭೋಗನಹಳ್ಳಿ ಬಳಿ ಹಿಂದಿನಿಂದ ಟಾಟಾ ಮೊಬೈಲ್ ಕಾರು ಮತ್ತು ಬೈಕ್ನಲ್ಲಿ ಬಂದ 7 ದುಷ್ಕರ್ಮಿಗಳು ವೀರಭದ್ರಯ್ಯ ಅವರನ್ನು ಅಡ್ಡಗಟ್ಟಿ ದೋಚಿದ್ದಾರೆ.
ನಂತರ ಅವರನ್ನು ಕಾರಿಗೆ ಎಳೆದುಕೊಂಡು ರಾಡಿನಿಂದ ಹೊಡೆದು, ಕೈಕಾಲು ಕಟ್ಟಿ, ಬಾಯಿಗೆ ಪ್ಲಾಸ್ಟರ್ ಹಾಕಿದರು. ಬಳಿಕ ನಗದು, ಉಂಗುರ ದೋಚಿ ಅವರನ್ನು ರಸ್ತೆ ಪಕ್ಕದ ಮಾವಿನ ತೋಟಕ್ಕೆ ಎಸೆದು ಪರಾರಿಯಾಗಿದ್ದಾರೆ. ಈ ಸಂಬಂಧ ಪೊಲೀಸರು ದೂರು ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ಇಂದು ಕಾನೂನು ಅರಿವು ಕಾರ್ಯಕ್ರಮ
ರಾಮನಗರ: ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ವಕೀಲರ ಸಂಘ ಹಾಗೂ ಅರಣ್ಯ ಇಲಾಖೆಯಿಂದ ಜೂ.29ರ ಬೆಳಗ್ಗೆ 9.30ಕ್ಕೆ ಶಾಂತಿನಿಕೇತನ ಸಮೂಹ ಶಿಕ್ಷಣ ಸಂಸ್ಥೆಯಲ್ಲಿ ವನಮಹೋತ್ಸವ ಮತ್ತು ಕಾನೂನು ಅರಿವು ಕಾರ್ಯಕ್ರಮ ನಡೆಯಲಿದೆ. ಕಾರ್ಯಕ್ರಮವನ್ನು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಎಂ.ಕೆ. ಪ್ರಹ್ಲಾದ್ ಉದ್ಘಾಟಿಸುವರು. ಶಾಂತಿನಿಕೇತನ ಸಮೂಹ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಕಾರ್ಯದರ್ಶಿ ಆರ್. ಕುಮಾರಸ್ವಾಮಿ ಅಧ್ಯಕ್ಷತೆ ವಹಿಸುವರು. ಉಪ ಅರಣ್ಯ ಸಂರಕ್ಷಣಾಧಿಕಾರಿ ತಾಕತ್ಸಿಂಗ್ ರಣಾವತ್, ವಕೀಲರ ಸಂಘದ ಅಧ್ಯಕ್ಷ ಟಿ.ಕೆ. ಶಾಂತಪ್ಪ, 1ನೇ ಅಡಿಷನಲ್ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಕೆ. ಸುರೇಶ್, ಅಪರ ಹಿರಿಯ ಸಿವಿಲ್ ನ್ಯಾಯಾಧೀಶೆ ನಾಗಶ್ರೀ ಭಾಗವಹಿಸುವರು. ವನ ಸಂರಕ್ಷಣೆಯಲ್ಲಿ ನಾಗರಿಕರ ಕರ್ತವ್ಯ ಕುರಿತು ವಲಯ ಅರಣ್ಯಾಧಿಕಾರಿ ಜಿ.ಸಿ. ಲಿಂಗರಾಜು ಉಪನ್ಯಾಸ ನೀಡುವರು.
ಪ್ರೇಮಿಸಿ ಕೈಕೊಟ್ಟ ಶಿಕ್ಷಕನ ವಿರುದ್ಧ ದೂರು ದಾಖಲು
ರಾಮನಗರ: ಪ್ರೇಯಸಿಯನ್ನು ಗರ್ಭಿಣಿಯಾಗಿಸಿ ಕೈಕೊಟ್ಟಿರುವ ಶಿಕ್ಷಕನ ವಿರುದ್ಧ ಚನ್ನಪಟ್ಟಣ ಪೂರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಚನ್ನಪಟ್ಟಣದ ಮದರಸಾ ಅರಬ್ಬಿ ಶಾಲೆಯ ಶಿಕ್ಷಕ ಸೈಯದ್ ಇಮ್ರಾನ್ ಅಶ್ರಫಿ ವಿರುದ್ಧ ಪ್ರಕರಣ ದಾಖಲಾಗಿದೆ. ಈತ ತನ್ನ ಪ್ರೇಮಿಸುವುದಾಗಿ ನಂಬಿಸಿ, ಅತ್ಯಾಚಾರ ಎಸಗಿದ್ದಾನೆ ಎಂದು ಶಿಕ್ಷಕಿಯೊಬ್ಬರು ಪೊಲೀಸರಿಗೆ ದೂರು ನೀಡಿದ್ದಾರೆ. ಸೈಯದ್ ಇಮ್ರಾನ್ ಅಶ್ರಫಿಯು ಮದರಸಾದ ನೂರ್ ಇಸ್ಲಾಂ ಅವರನ್ನು ಲೈಬ್ರರಿಗೆ ಬರಹೇಳಿ ತನ್ನ ಮೇಲೆ ಮೊದಲ ಬಾರಿ ಅತ್ಯಾಚಾರ ನಡೆಸಿದ್ದು, ಅದಾದ ಬಳಿಕ ಮನೆಗೆ ಬಂದು ಯಾರೂ ಇಲ್ಲದಿದ್ದಾಗಲೂ ಅತ್ಯಾಚಾರ ನಡೆಸಿದ್ದಾನೆ ಎಂದು ಆಕೆ ದೂರಿನಲ್ಲಿ ಆರೋಪಿಸಿದ್ದಾರೆ. ಈ ವಿಷಯ ಬಹಿರಂಗಪಡಿಸಿದರೆ ಕೊಲೆ ಮಾಡುವ ಬೆದರಿಕೆ ಒಡ್ಡಿದ್ದನು. ಹೀಗಾಗಿ ದೂರು ನೀಡುವುದು ವಿಳಂಬವಾಯಿತು ಎಂದು ಆಕೆ ವಿವರಿಸಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಆರೋಪಿ ಪತ್ತೆಗೆ ಕ್ರಮ ಕೈಗೊಂಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

