ಬೆಂಗಳೂರು ಗ್ರಾಮಾಂತರ

ಗುಂಪು ಘರ್ಷಣೆ ನಿಯಂತ್ರಿಸಲು ಮುಂದಾದ ಪಿಎಸೈ ಮೇಲೆ ಹಲ್ಲೆ

Published On :

ಚನ್ನಪಟ್ಟಣ: ನಗರಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಆರಂಭಗೊಂಡಿದ್ದ ಗುಂಪು ಘರ್ಷಣೆಯನ್ನು ನಿಯಂತ್ರಿಸಲು ಮುಂದಾದ ಪಿಎಸೈಮೇಲೆ ಹಲ್ಲೆ ನಡೆಸಿರುವ ಘಟನೆ ಪಟ್ಟಣದ ಮದೀನಾ ಚೌಕ್‌ನಲ್ಲಿ ಶುಕ್ರವಾರ ರಾತ್ರಿ ನಡೆದಿದೆ.
ಪೂರ್ವ ಪೊಲೀಸ್ ಠಾಣೆಯ ಕ್ರೈಂ ಪಿಎಸೈ ಶರತ್ ಕುಮಾರ್ ಗಾಯಗೊಂಡಿರುವ ಅಧಿಕಾರಿಯಾಗಿದ್ದು, ಮಾರಕಾಯುದ ಹಿಡಿದು ತಿರುಗಾಡುತ್ತಿದ್ದ ವ್ಯಕ್ತಿಯನ್ನು ಬಂಧಿಸಿ ಠಾಣೆಗೆ ಕರೆತರುವಾಗ ಈ ಘಟನೆ ನಡೆದಿದೆ. 22ನೇ ವಾರ್ಡ್‌ನ ಜೆಡಿಎಸ್ ಅಭ್ಯರ್ಥಿಯ ಪತಿ ಪರೀದ್ ಖಾನ್ ಘೋರಿ ಎಂಬುವರನ್ನು ಕೊಲೆಗೈಯಲು ಖಲೀಲ್ ಎಂಬಾತ ಮುಂದಾಗಿದ್ದಾನೆ ಎಂದು ಸ್ಥಳೀಯರು ದೂರವಾಣಿ ಕರೆಮಾಡಿ ತಿಳಿಸಿದ ಹಿನ್ನೆಲೆಯಲ್ಲಿ ಸ್ಥಳಕ್ಕೆ ಧಾವಿಸಿದ ಶರತ್‌ಕುಮಾರ್ ಆತನನ್ನು ವಶಕ್ಕೆ ತೆಗೆದುಕೊಂಡು ಠಾಣೆಗೆ ತೆರಳುವಾಗ ಮದೀನಾ ಚೌಕ್‌ನಲ್ಲಿ ತಡರಾತ್ರಿಯಾದರೂ ಕೆಲ ಹೋಟೆಲ್ ಮತ್ತು ಟೀ ಅಂಗಡಿ ತೆರೆದಿರುವುದನ್ನು ಕಂಡು ಮುಚ್ಚಿಸಲು ಮುಂದಾಗಿದ್ದಾರೆ.
ಈ ಸಂದರ್ಭದಲ್ಲಿ ಅಲ್ಲಿದ್ದ ಗುಂಪು ಆತನ್ನು ಯಾಕೆ ಬಂಧಿಸಿದ್ದೀರಿ ಬಿಟ್ಟುಬಿಡಿ ಎಂದು ವಾಗ್ವಾದಕ್ಕಿಳಿದಿದ್ದಾರೆ. ಇದೇ ವೇಳೆ ಗುಂಪಿನಲ್ಲಿದ್ದ ಕೆಲ ಮಂದಿ ಕಲ್ಲುತೂರಿದ್ದು ಕಲ್ಲು ತೂರಾಟದಲ್ಲಿ ಪಿಎಸೈ ಶರತ್‌ಕುಮಾರ್ ತಲೆ ಮತ್ತು ಕಿವಿಗೆ ಪೆಟ್ಟು ಬಿದ್ದಿದೆ. ಈ ಸಂಬಂಧ ದೂರು ದಾಖಲಿಸಿಕೊಂಡಿರುವ ಪೂರ್ವಠಾಣೆ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದು, ಗಾಯ ಗೊಂಡಿರುವ ಪಿಎಸೈ ಶರತ್ ಕುಮಾರ್ ಜಿಬಿಎಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಕುಡಿವ ನೀರಿನ ಕೊಳವೆ ಬಾವಿಗೆ ಕಲ್ಲು ಹಾಕಿದ ದುಷ್ಕರ್ಮಿಗಳು
ದೇವನಹಳ್ಳಿ:
ದೇವನಹಳ್ಳಿ ತಾಲೂಕು ಅಣ್ಣೇಶ್ವರ ಗ್ರಾಮದಲ್ಲಿನ ಕೊಳವೆ ಬಾವಿಗೆ ಕೆಲ ದುಷ್ಕಮಿಗಳು ಕಲ್ಲು ಹಾಕಿದ ಘಟನೆ ನಡೆದಿದೆ.
 ಹೆಚ್ಚು ನೀರು ಲಭ್ಯವಾಗುತ್ತಿರುವುದನ್ನು ಸಹಿಸದ  ದುಷ್ಕರ್ಮಿಗಳ ನೀರು ಸರಬರಾಜಾಗುತ್ತಿದ್ದ ಕೊಳವೆ ಬಾವಿಗೆ 15 ಕಲ್ಲುಗಳನ್ನು ಹಾಕಿ ಪಂಪ್ ಮೋಟರ್ ಹಾಗೂ ಪೈಪ್ ಲೈನ್ಹಾಳುಮಾಡಿದರು. ಈ ದುಷ್ಕೃತ್ಯ ಬಗ್ಗೆ ಪಂಚಾಯಿತಿ ಅಧ್ಯಕ್ಷರಾದ ಚಂದ್ರಶೇಖರ್ ಅವರು ಚನ್ನರಾಯಪಟ್ಟಣ ಪೊಲೀಸರಿಗೂ ದೂರನ್ನು ನೀಡಿದ್ದಾರೆ.
   ಅಣ್ಣೇಶ್ವರ ಗ್ರಾಮದ ಜನತಗೆ ಇದ್ದ ಒಂದೇ ಕೊಳವೆ ಬಾವಿ ನೀರು ನಿಂತುಹೋದಾಗ ಕೂಡಲೇ ಗ್ರಾಮ ಪಂಚಾಯಿತಿ ಅಧ್ಯಕ್ಷ ಎ.ಚಂದ್ರಶೇಖರ್ ಕೊಳವೆ ಬಾವಿಗ ದುರಸ್ತಿ ಮಾಡುವವರನ್ನು ಕರೆಸಿ ಮೂರು ದಿನಗಳ ಕಾಲ ಶ್ರಮ ಪಟ್ಟು ಸುಮಾರು 40 ಸಾವಿರ ರು. ವೆಚ್ಚಮಾಡಿ ಕೊಳವೆ ಬಾವಿಯಲ್ಲಿದ್ದ ಎಲ್ಲ ಕಲ್ಲುಗಳನ್ನು ಹಾಗೂ ಪಂಪ್ ಮೋಟರನ್ನು ಹೊರತೆಗೆಸಿ ಅಣ್ಣೇಶ್ವರ ಗ್ರಾಮಕ್ಕೆ ಮತ್ತೆ ನೀರು ಸರಬರಾಜಾಗುವಂತೆ ಕ್ರಮ ಕೈಗೊಂಡರು. ಕೊಳವೆ ಬಾವಿಗಳಲ್ಲಿ ಕಲ್ಲು ಬಿದ್ದರೆ ಅಗತ್ಯ ಉಳ್ಳವರು  ಈ ಮೊಬೈಲ್ ನಂ. 9448618994 ಸಂಪರ್ಕಿಸಬೇಕೆಂದು ತಿಳಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.