ಮತದಾರರಿಗೆ ನೀಡಿದ ವಾಗ್ದಾನದಂತೆ ನಡೆದುಕೊಂಡಿದ್ದೇನೆ
ಮಾಗಡಿ: ಮತದಾರರಿಗೆ ನೀಡಿದ ವಾಗ್ದಾನದಂತೆ ನಡೆದುಕೊಂಡಿದ್ದೇನೆ ಎಂದು ಶಾಸಕ ಎಚ್.ಸಿ. ಬಾಲಕೃಷ್ಣ ನುಡಿದರು.
ಅವರು ಮಾಗಡಿ ತಾಲೂಕಿನ ಐತಿಹಾಸಿಕ ತಿರುಮಲೆ ಶ್ರೀರಂಗನಾಥಸ್ವಾಮಿ ದೇವರಿಗೆ ಶನಿವಾರ ವಿಶೇಷ ಪೂಜೆ ಸಲ್ಲಿಸಿದರು. ನಂತರ ದೇವಸ್ಥಾನದ ಮುಂಭಾಗ ಫಲಿತಾಂಶ ಎಂಬ ಪ್ರಣಾಳಿಕೆಯನ್ನು ಬಿಡುಗಡೆಗೊಳಿಸಿ ಸುದ್ದಿಗಾರರೊಂದಿಗೆ ಮಾತನಾಡಿದರು.
ಕಳೆದ 5 ವರ್ಷಗಳ ಹಿಂದೆ ನೀಡಿದ್ದ ವಾಗ್ದಾನದಂತೆ ಸುಸಜ್ಜಿತ ಪುರಸಭೆ ಕಟ್ಟಡ, ಅಂಬೇಡ್ಕರ್ ಭವನ ಪೂರ್ಣ, ಸರ್ಕಾರಿ ಆಸ್ಪತ್ರೆಯನ್ನು 100 ಬೆಡ್ಗೆ ಮೇಲ್ದರ್ಜೆಗೇರಿಸಿದ್ದೇನೆ. ಬಸ್ ಡಿಪೋ ನಿಮಾರ್ಣವಾಗಿದ್ದು, ಬಸ್ ನಿಲ್ದಾಣ ತ್ವರಿತಗತಿಯಲ್ಲಿ ಕಾಮಗಾರಿ ನಡೆದಿದೆ.
ಶೇ.90 ರಷ್ಟು ಒಳಚರಂಡಿ ಕಾಮಗಾರಿ ಪೂರ್ಣ,ಪಟ್ಟಣಕ್ಕೆ ಮಂಚನಬೆಲೆಯಿಂದ ಶುದ್ಧ ಕುಡಿಯುವ ನೀರು ಪೂರೈಕೆ, ಮುಖ್ಯರಸ್ತೆಗಳ ಡಾಂಬರೀಕರಣ, ಖಾಸಗಿ ಬಸ್ ನಿಲ್ದಾಣ ಅಭಿವೃದ್ಧಿ, 10 ಕೋಟಿ ರು. ವೆಚ್ಚದಲ್ಲಿ ಕೋಟೆ ಅಭಿವೃದ್ಧಿ ಕಾಮಗಾರಿ, ನಾಗರಿಕರ ಆರೋಗ್ಯಕ್ಕಾಗಿ ಉತ್ತಮ ಪಾರ್ಕ್ ನಿರ್ಮಾಣ, ಮಕ್ಕಳ ಉನ್ನತ ಶಿಕ್ಷಣಕ್ಕೆ ಅನುಕೂಲವಾಗಲು ಪ್ರಥಮ ದರ್ಜೆ ಕಾಲೇಜು ಆರಂಭ, ಕಲೆ, ವಾಣಿಜ್ಯ, ವಿಜ್ಞಾನ ವಿಭಾಗ ತೆರೆದಿರುವುದು, ಸ್ವಯಂ ಉದ್ಯೋಗಕ್ಕಾಗಿ ಐಟಿಐ ಕಾಲೇಜು, ಧಾರ್ಮಿಕ ತಾಣ ಸೋಮೇಶ್ವರ ದೇವಸ್ಥಾನ ಜೀರ್ಣೋದ್ಧಾರ, ಪಟ್ಟಣಕ್ಕೆ ಸೌಂದರ್ಯ ಕಾಪಾಡಲು, ಅಂತರ್ಜಲ ಮಟ್ಟ ಹೆಚ್ಚಿಸಲು 5 ಕೋಟಿ ರು. ವೆಚ್ಚದಲ್ಲಿ ಗೌರಮ್ಮನಕೆರೆ, ಹೊಂಬಾಳಮ್ಮನಕೆರೆ ಅಭಿವೃದ್ಧಿ ಕೈಗೊಂಡಿದ್ದೇನೆ. ಶಾಸಕನಾಗಿ ಒಟ್ಟಾರೆ ಸಾಧನೆ ತೃಪ್ತಿ ತಂದಿದೆ ಎಂದರು.
ಈ ಬಾರಿಯೂ ಮತದಾರರು ಜೆಡಿಎಸ್ ಅಭ್ಯರ್ಥಿಗಳಿಗೆ ಆಶೀರ್ವಸಿದ್ದೇ ಆದರೆ ವೈ.ಜಿ.ಗುಡ್ಡದಿಂದ ಪಟ್ಟಣಕ್ಕೆ ದಿನದ 24 ಗಂಟೆಯೂ ಶುದ್ಧ ಕುಡಿಯುವ ನೀರು ಪೂರೈಕೆಗೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ವಿವರಿಸಿದರು.
ಪುರಸಭೆಯ ಮಾಜಿ ಅಧ್ಯಕ್ಷ ಪುರುಷೋತ್ತಮ, ರುಕ್ಮಿಣಿದೇವಿ ರಂಗನಾಥ್, ನಾಗರಾಜು, ರೂಪೇಶಕುಮಾರ್, ವಿಜಯಕುಮಾರ್, ಬಸವರಾಜು ಇತರರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

