ಜಿಲ್ಲೆಯಲ್ಲಿ ಶೇ. 76 ಹಕ್ಕು ಚಲಾವಣೆ
ಕ.ಪ್ರ. ವಾರ್ತೆ ರಾಮನಗರ ಮಾ.7
ತಹಸೀಲ್ದಾರ್ ಎಡವಟ್ಟಿನಿಂದ ಚನ್ನಪಟ್ಟಣದ 3 ವಾರ್ಡ್ಗಳಲ್ಲಿ ಗೊಂದಲ, ಅಲ್ಲಲ್ಲಿ ಮಾತಿನ ಚಕಮಕಿ, ಮಾಗಡಿಯಲ್ಲಿ ಕೆಲ ಕಾಲ ಕೈಕೊಟ್ಟ ಮತಯಂತ್ರದ ಹೊರತಾಗಿ ಜಿಲ್ಲೆಯ ನಾಲ್ಕು ಪೌರ ಸಂಸ್ಥೆಗಳ ಚುನಾವಣೆಯ ಮತದಾನ ಗುರುವಾರ ಬಹುತೇಕ ಶಾಂತಯುತವಾಗಿ ನಡೆದಿದ್ದು, ಶೇಕಡ 75.95ರಷ್ಟು ಮತಗಳ ಚಲಾವಣೆಯಾಗಿದೆ.
ಜಿಲ್ಲೆಯ 4 ಪೌರ ಸಂಸ್ಥೆಗಳ ಪೈಕಿ ರಾಮನಗರ ನಗರಸಭೆಯಲ್ಲಿ ಅತಿ ಕಡಿಮೆ ಮತ್ತು ಮಾಗಡಿಯಲ್ಲಿ ಅತಿ ಹೆಚ್ಚು ಪ್ರಮಾಣದಲ್ಲಿ ಮತದಾನವಾಗಿದೆ. ರಾಮನಗರ ನಗರಸಭೆ ವ್ಯಾಪ್ತಿಯಲ್ಲಿ ಶೇಕಡ 69.40, ಚನ್ನಪಟ್ಟಣ ನಗರಸಭೆಯಲ್ಲಿ ಶೇಕಡ 74.51, ಕನಕಪುರ ಪುರಸಭೆಯ ಶೇಕಡ 74.40 ಮತ್ತು ಮಾಗಡಿ ಪುರಸಭೆಯಲ್ಲಿ 85.22 ರಷ್ಟು ಮತದಾನ ನಡೆದಿದೆ.
ಮಾತಿನ ಚಕಮಕಿ: ರಾಮನಗರ ನಗರಸಭೆಯ 22 ಮತ್ತು 2ನೇ ವಾರ್ಡ್ಣನಲ್ಲಿ ಜೆಡಿಎಸ್ ಹಾಗೂ ಕಾಂಗ್ರೆಸ್ ಅಭ್ಯರ್ಥಿ ಬೆಂಬಲಿಗರ ನಡುವೆ ಮಾತಿನ ಚಕಮಕಿ ನಡೆದು ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿತ್ತು. ಎರಡೂ ಕಡೆ ಸಕಾಲಕ್ಕೆ ಆಗಮಿಸಿದ ಪೊಲೀಸರು ಪರಿಸ್ಥಿತಿಯನ್ನು ತಹಬದಿಗೆ ತರಲು ಹರಸಾಹಸ ನಡೆಸಿದರು. 22ನೇ ವಾರ್ಡ್ನಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಪೊಲೀಸರ ವಿರುದ್ಧವೇ ತಿರುಗಿ ಬಿದ್ದಿದ್ದರು.
ಮಾಗಡಿ, ಚನ್ನಪಟ್ಟಣ ಮತ್ತು ಕನಕಪುರದ ಕೆಲವೆಡೆಯೂ ಕೂಗಾಟ, ಮಾತಿನ ಚಕಮಕಿ ನಡೆದಿತ್ತು. ಚನ್ನಪಟ್ಟಣದಲ್ಲಿ ಮತಗಟ್ಟೆ ಏಜೆಂಟರು ಮತದಾರರ ಪಟ್ಟಿಯನ್ನು ತರಕೂಡದೆಂದು ಹೊಸ ಕಾನೂನು ರೂಪಿಸಿದ್ದ ಅಲ್ಲಿನ ತಹಸೀಲ್ದಾರ್ ಮತದಾನದ ದಿನ ಮತ್ತೊಂದು ಅವಾಂತರ ಸೃಷ್ಟಿಸಿದ್ದರು. 3 ವಾರ್ಡ್ಗಳ ಮತದಾರರ ಪಟ್ಟಿಯ ಹಲವು ಹೆಸರುಗಳ ಮುಂದೆ ಪೆನ್ನಿನಿಂದ ಕೈಬಿಡಲಾಗಿದೆ ಎಂದು ಗುರುತು ಮಾಡಿದ್ದೇ ಗೊಂದಲಕ್ಕೆ ಕಾರಣವಾಗಿತ್ತು. ಸ್ಥಳಕ್ಕೆ ಆಗಮಿಸಿದ ಜಿಲ್ಲಾಧಿಕಾರಿ ಶ್ರೀರಾಮರೆಡ್ಡಿ ತನಿಖೆಗೆ ಆದೇಶಿಸಿ ಗೊಂದಲ ನಿವಾರಿಸಿದರು.
ಕೆಲ ಕಾಲ ಸ್ಥಗಿತ: ಮಾಗಡಿ ಪುರಸಭೆ ವ್ಯಾಪ್ತಿಯ ಒಂದು ಮತಯಂತ್ರವು ಕೈಕೊಟ್ಟು, 20 ನಿಮಿಷ ಮತದಾನ ಸ್ಥಗಿತವಾಗಿತ್ತು. ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ, ಯಂತ್ರವನ್ನು ಸರಿಪಡಿಸಿದ ಬಳಿಕ ಮತದಾನ ಮುಂದುವರೆಯಿತು. ರಾಮನಗರದ 2 ಕಡೆ, ಚನ್ನಪಟ್ಟಣದ 1 ಕಡೆ ರಾಜಕೀಯ ಪಕ್ಷಗಳ ಕಾರ್ಯಕರ್ತರ ನಡುವಿನ ಮಾತಿನ ಚಕಮಕಿಯಿಂದ ಉದ್ವಿಗ್ನದ ಕಾರಣಕ್ಕೆ ಕೆಲ ಕಾಲ ಮತದಾನವನ್ನು ಸ್ಥಗಿತಗೊಳಿಸಲಾಗಿತ್ತು.
ಪ್ರಮುಖರ ಮತದಾನ: ಈ ಜಿಲ್ಲೆಯನ್ನು ಪ್ರತಿನಿಧಿಸುತ್ತಿರುವ ಸಂಸದ ಕುಮಾರಸ್ವಾಮಿ, ಮಾಜಿ ಸಚಿವರಾದ ರೇವಣ ಅವರು ಯಾರೂ ಪೌರ ಸಂಸ್ಥೆಗಳ ವ್ಯಾಪ್ತಿ ಮತದಾರರಲ್ಲ.
ಜಿಲ್ಲೆಯ 4 ಪೌರ ಸಂಸ್ಥೆಗಳ ಮತದಾನದ ವಿವರ
ನಗರ ಸ್ಥಳೀಯ ಸಂಸ್ಥೆಯ ಹೆಸರು ಒಟ್ಟು ಮತದಾರರ ಸಂಖ್ಯೆ ಒಟ್ಟು ಮತ ಚಲಾಯಿಸಿದವರ ಸಂಖ್ಯೆ
ಪು ಮ ಒಟ್ಟು ಪು ಮ ಒಟ್ಟು
3 4 5 6 7 8 9
1 ರಾಮನಗರ ನಗರಸಭೆ 31,345 31,093 62,438 21,926 21,424 43,350
2 ಚನ್ನಪಟ್ಟಣ ನಗರಸಭೆ 22,360 23,159 45,519 17,020 16,897 33,917
3 ಕನಕಪುರ ಪುರಸಭೆ 20,519 20,932 41,451 15,335 15,506 30,841
4 ಮಾಗಡಿ ಪುರಸಭೆ 9,311 9,300 18,611 8,006 7,855 15,861
ಒಟ್ಟು 83,535 84,484 1,68,019 62,287 61,682 1,23,969
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

