ಬೆಂಗಳೂರು ಗ್ರಾಮಾಂತರ

ಮಹಿಳಾ ಹಕ್ಕುಗಳ ಹೋರಾಟಕ್ಕೆ ಬೇಕು ಪ್ರಬಲ ಒತ್ತಾಸೆ

Published On :

ದೊಡ್ಡಬಳ್ಳಾಪುರ,ಮಾ.14: ಇಲ್ಲಿನ ಕೊಂಗಾಡಿಯಪ್ಪ ಪ್ರಥಮ ದರ್ಜೆ ಕಾಲೇಜಿನಲ್ಲಿ ಅಂತರ ರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮವನ್ನು ಉಪನ್ಯಾಸಕಿ ಶಿಲ್ಪ ಮತ್ತು ಹೇಮಲತಾ ಉದ್ಘಾಟಿಸಿದರು. ಪ್ರಾಸ್ತಾವಿಕವಾಗಿ ಮಾತನಾಡಿದ ಪ್ರಾಧ್ಯಾಪಕ ಪ್ರೊ.ಚಂದ್ರಪ್ಪ, ಜರ್ಮನಿಯ ಸಮಾಜವಾದಿ ಕ್ಲಾರಾಜೆಟ್ಕಿನ್ ಮಹಿಳೆಯರಿಗಾಗಿ ಸಿಗಬೇಕಾದ ಸಮಾನ ಅವಕಾಶಗಳು ಮತ್ತು ಮತದಾನದ ಹಕ್ಕುಗಳ ಕುರಿತು ಮಾದರಿ ಚಳವಳಿ ರೂಪಿಸಿದ್ದರ ಪರಿಣಾಮ ಮಹಿಳೆಯರ ಬದುಕಿನಲ್ಲಿ ಸಾಕಷ್ಟು ಸುಧಾರಣೆಗಳಾದವು. ಹೀಗಾಗಿ ಆಕೆಯ ನೆನಪಿನಲ್ಲಿ ವಿಶ್ವ ಮಹಿಳಾ ದಿನಾಚರಣೆ ಆಚರಿಸಲಾಗುತ್ತಿದೆ ಎಂದರು. ಇಂದು ಮಹಿಳೆಯರ ಹಕ್ಕುಗಳ ಕುರಿತ ಹೋರಾಟಕ್ಕೆ ಸ್ಪಷ್ಟ ನಿಲುವು ಮತ್ತು ಪ್ರಬಲ ಒತ್ತಾಸೆಯ ಕೊರತೆ ಇದೆ. ದಿನೇ ದಿನೇ ಮಹಿಳೆಯರ ಮೇಲೆ ದೌರ್ಜನ್ಯ ಪ್ರಕರಣಗಳು ಹೆಚ್ಚುತ್ತಲೇ ಇರುವುದು ಆತಂಕದ ವಿಚಾರ. ರಾಷ್ಟ್ರೀಯ ಅಪರಾಧಗಳ ದಾಖಲಾತಿ ವಿಭಾಗ ಒಪ್ಪಿಕೊಂಡಿರುವಂತೆ ಶೇ.70ರಷ್ಟು ಮಹಿಳಾ ದೌರ್ಜನ್ಯ ಪ್ರಕರಣಗಳ ವಿರುದ್ದ ಕಾನೂನು ಕ್ರಮಗಳೇ ಜರುಗದಿರುವುದು ಶೋಚನೀಯ ಎಂದರು.
ಕನ್ನಡ ವಿಭಾಗದ ಮುಖ್ಯಸ್ಥ ಪ್ರೊ.ಎಂ.ಜಿ.ಚಂದ್ರಶೇಖರಯ್ಯ ಮಾತನಾಡಿ, ನಮ್ಮಲ್ಲಿ ಹೆಣ್ಣಿನ ಚಾರಿತ್ಯ್ರಕ್ಕೆ ಹೆಚ್ಚು ಪರೀಕ್ಷೆಗಳನ್ನು ಒಡ್‌ಡಲಾಗಿದೆ. ಅವಕಾಶವಂಚಿತ ಸಮೂಹ ಅರಿವಿನ ಆಸ್ಪೋಟದೊಂದಿಗೆ ಸಿಡಿಯಬೇಕು. ಅನ್ಯಾಯಕ್ಕೊಳಗಾದವರು ಸಂಘಟಿತರಾಗಿ ಹೋರಾಟ ಮಾಡುವುದರ ಮೂಲಕ ತಮ್ಮ ಹಕ್ಕುಬಾಧ್ಯತೆಗಳನ್ನು ಸುಧಾರಿಸಬಹುದು. ಅದಕ್ಕೆ ಮಹಿಳಾ ಸಮುದಾಯ ಸಜ್ಜುಗೊಳ್ಳಬೇಕು ಎಂದರು. ಸಂವಾದ ಸಂಸ್ಥೆಯ ಆರ್.ರಾಮಕ್ಕ ಮತ್ತು ಕಾಲೇಜಿನ ಹಲವು ವಿದ್ಯಾರ್ಥಿ- ವಿದ್ಯಾರ್ಥಿನಿಯರು ಮಹಿಳಾ ದೌರ್ಜನ್ಯ ಮತ್ತು ಸಮಕಾಲೀನ ವಸ್ತುಸ್ಥಿತಿಗಳ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದರು. ಕಾಲೇಜಿನ ಪ್ರಾಂಶುಪಾಲ ಪ್ರೊ.ಬಿ.ಟಿ.ಮಹದೇವ್ ಅಧ್ಯಕ್ಷತೆ ವಹಿಸಿದ್ದರು. ಎನ್‌ಸಿಸಿ ಅಧಿಕಾರಿ ತಜಮುಲ್ ಪಾಷಾ ಮತ್ತಿತರರು ಉಪಸ್ಥಿತರಿದ್ದರು. ಸಂವಾದ ತಂಡದಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.