27ರಂದುಚನ್ನಕೇಶವ ಸ್ವಾಮಿ ಅದ್ಧೂರಿ ಬ್ರಹ್ಮರಥೋತ್ಸವ
ಕ.ಪ್ರ. ವಾರ್ತೆ, ವಿಜಯಪುರ, ಮಾ.22
ಸುಮಾರು 120 ವರ್ಷಗಳ ಇತಿಹಾಸದ ಇಲ್ಲಿನ ಕೋಟೆ ಬೀದಿಯಲ್ಲಿರುವ ಅರ್ಜುನನಿಂದ ಪ್ರತಿಷ್ಠಾಪಿಸಿದ್ದೆಂಬ ಪ್ರತೀತಿಯ ಪುರಾಣ ಪ್ರಸಿದ್ಧ ಶ್ರೀ ಚನ್ನಕೇಶವ ಸ್ವಾಮಿ ಜಾತ್ರಾ ಮಹೋತ್ಸವ ಕಾರ್ಯಕ್ರಮ ಪ್ರಾರಂಭಗೊಂಡಿವೆ.
ಶ್ರೀ ಮತ್ಕಲ್ಯಾಣಾದಿ ಬ್ರಹ್ಮರಥೋತ್ಸವದ ಅಂಗವಾಗಿ ಸುಪ್ರಭಾತ ಸೇವೆ, ಸಹಸ್ರನಾಮ, ಮೃತಿಕಾ ಸಂಗ್ರಹಣ ಮತ್ತು ಅಂಕುರಾರ್ಪಣ, ಧ್ವಜಾರೋಹಣ, ಭೇರಿ ಪೂಜೆ ನೆರವೇರುವ ಮೂಲಕ ಧಾರ್ಮಿಕ ವಿಧಿ ವಿಧಾನಗಳಿಗೆ ಚಾಲನೆ ದೊರೆತಿದೆ.
22ರಂದು ಹನುಮಂತ ವಾಹನೋತ್ಸವ ನಡೆದಿದ್ದು, 23ರಂದು ಸಿಂಹವಾಹನೋತ್ಸವ, 24ರಂದು ಶೇಷ ವಾಹನೋತ್ಸವ, 25ರಂದು ಮಂಟಪಪಡಿ ಸೇವೆ, ಸಂಜೆ 7 ಗಂಟೆಗೆ ಸ್ವಾಮಿಯವರ ಕಲ್ಯಾಣೋತ್ಸವ ನಂತರ ಅನ್ನ ಸಂತರ್ಪಣೆ, ರಾತ್ರಿ ಗರುಡ ವಾಹನೋತ್ಸವ, ವಿಶೇಷ ಹೂವಿನ ಅಲಂಕಾರ, 26ರಂದು ಗಜೇಂದ್ರ ಮೋಕ್ಷ ಉತ್ಸವ ಜರುಗಲಿವೆ. 27ರಂದು ಬೆಳಿಗ್ಗೆ ಸುಪ್ರಭಾತ ಸೇವೆ, ಅಭಿಷೇಕ, ಮಹಾಮಂಗಳಾರತಿ, 28ರಂದು ಅಶ್ವವಾಹನೋತ್ಸವ, ಲಕ್ಷ್ಮೀ ಕಲಹ ಸಂಧಾನ, 29ರಂದು ವಸಂತೋತ್ಸವ, ಹಂಸ ವಾಹನೋತ್ಸವ, 30 ರಂದು ಚಂದ್ರ ಮಂಡಲೋತ್ಸವ, 31ರಂದು ಉಯ್ಯಾಲೋತ್ಸವ, ಹೆಜ್ಜೆ ಮಂಗಳಾರತಿ, ಪ್ರಾಕಾರೋತ್ಸವ ನಡೆಯಲಿವೆ.
ಸಚಿವ ಬಿ.ಎನ್.ಬಚ್ಚೇಗೌಡ ಮತ್ತು ಬೆಂಡಿಗಾನಹಳ್ಳಿ ಕುಟುಂಬದವರಿಂದ ಏ.1ರಂದು ಪುಷ್ಪ ಪಲ್ಲಕ್ಕಿ ಉತ್ಸವ ನಡೆಯಲಿದ್ದು, 2ರಂದು ಶಯನೋತ್ಸವ, 3ರಂದು ನಗರ್ತ ಅನ್ನಸಂತರ್ಪಣೆ, ಸುಪ್ರಭಾತ ಸೇವೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ದೇವಾಲಯದ ಪ್ರಧಾನ ಅರ್ಚಕ ವಿದ್ವಾನ್ ಎಸ್. ಮುರುಳೀಧರ ಭಟ್ಟಾಚಾರ್ಯ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

