ಬೆಂಗಳೂರು ಗ್ರಾಮಾಂತರ

ದತ್ತಿನಿಧಿ ಪ್ರಶಸ್ತಿಗೆ ಕನ್ನಡ ಪುಸ್ತಕ ಆಹ್ವಾನ

Published On :

ಕ.ಪ್ರ. ವಾರ್ತೆ ರಾಮನಗರ ಮಾ.23
ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ದತ್ತಿನಿಧಿ ಪ್ರಶಸ್ತಿಗಳಿಗೆ 2012ರಲ್ಲಿ ಪ್ರಕಟವಾದ ಕನ್ನಡ ಪುಸ್ತಕಗಳನ್ನು ಆಹ್ವಾನಿಸಿದೆ.
ಮಲ್ಲಿಕಾ ಪ್ರಶಸ್ತಿ, ವರ್ಷದ ಅಂತರರಾಷ್ಟ್ರೀಯ ಮಹಿಳಾ ಪ್ರಶಸ್ತಿ, ಶಾರದಾ ರಾಮಲಿಂಗಪ್ಪ, ಲಿಂ.ಲಲಿತಾದೇವಿ ಗುರುಸಿದ್ದಪ್ಪ ಸಿಂಧೂರ, ನೀಲಗಂಗಾ, ಕೆ.ಎಸ್.ಭಾರತಿ ರಾಜಾರಾಂ ಮಧ್ಯಸ್ಥ, ಶಾರದಾ ಆರ್.ರಾವ್, ದಿವಂಗತ ಗೌರಮ್ಮ ಹಾರ್‌ನಹಳ್ಳಿ ಕೆ.ಮಂಜಪ್ಪ, ದಿ.ಹೆಚ್.ಕರಿಯಣ್ಣ ಪ್ರಶಸ್ತಿಗಳಿಗೆ ಮಹಿಳೆಯರು ಬರೆದ ಕೃತಿಗಳನ್ನು ಮಾತ್ರ ಪರಿಗಣಿಸಲಾಗುವುದು.
ಡಾ.ಎಚ್.ನರಸಿಂಹಯ್ಯ, ಅಸುಂಡಿ ಹುದ್ದಾರ್ ಕೃಷ್ಣರಾವ್ ಸ್ಮಾರಕ, ಕೆ.ವಿ.ರತ್ನಮ್ಮ, ರತ್ನಾಕರವರ್ಣಿ-ಮುದ್ದಣ್ಣ-ಅನಾಮಿಕ, ಪಿ.ಶಾಂತಿಲಾಲ್, ಅಕ್ಕಮ್ಮ ಗಿರಿಗೌಡ ರುದ್ರಪ್ಪ, ಜಯಲಕ್ಷ್ಮಮ್ಮ ಬಿ.ಎಸ್. ಸಣ್ಣಯ್ಯ, ಕುಂಬಾಸ ಪ್ರಶಸ್ತಿ, ಪ್ರೊ.ಡಿ.ಸಿ.ಅನಂತಸ್ವಾಮಿ, ಜಿ.ಆರ್.ರೇವಯ್ಯ, ಸಿಸು ಸಂಗಮೇಶ, ಕೆ.ವಾಸುದೇವಚಾರ್, ಹೊಳಲ್ಕೆರೆ ಪದ್ಮಾವತಮ್ಮ ಶ್ರೀಪಾಲಶೆಟ್ಟಿ ಡಾ.ಮದನಕೇಸರಿ ಜೈನ, ವಸುದೇವ ಭೂಪಾಲಂ, ಡಿ.ಮಾಣಿಕರಾವ ಸ್ಮರಣಾರ್ಥ ಹಾಸ್ಯ ಸಾಹಿತ್ಯ, ಕಾಕೋಳು ಸರೋಜಮ್ಮ, ಡಾ.ಎ.ಎಸ್.ಧರಣೇಂದ್ರಯ್ಯ-  ಮನೋವಿಜ್ಞಾನ, ನಾ.ಕು.ಗಣೇಶ್ ಪ್ರಶಸ್ತಿಗಳ ಸ್ಪರ್ಧೆಗೆ ಪುಸ್ತಕಗಳನ್ನು ಆಹ್ವಾನಿಸಲಾಗಿದೆ.
ಸ್ಪರ್ಧೆಯ ನಿಯಮಗಳು:  ಪ್ರತಿ ಪ್ರವೇಶಕ್ಕೆ ತಲಾ 3 ಪುಸ್ತಕಗಳನ್ನು ಗೌರವ ಕಾರ್ಯದರ್ಶಿ, ಕನ್ನಡ ಸಾಹಿತ್ಯ ಪರಿಷತ್, ಪಂಪ ಮಹಾಕವಿ ರಸ್ತೆ, ಚಾಮರಾಜಪೇಟೆ, ಬೆಂಗಳೂರು-560018 ಈ ವಿಳಾಸಕ್ಕೆ ಏ.30ರೊಳಗೆ ತಲುಪುವಂತೆ ಕಳುಹಿಸಬೇಕು. ಪರಿಶೀಲನೆಗೆ ಬಂದ ಪುಸ್ತಕಗಳನ್ನು ಹಿಂದಿರುಗಿಸಲಾಗುವುದಿಲ್ಲ. ಬಹುಮಾನದ ಬಗ್ಗೆ ಪರಿಷತ್ ನಿರ್ಧಾರವೇ ಅಂತಿಮವಾಗಿರುತ್ತದೆ.
ಪಿ.ಎಚ್.ಡಿ ಗ್ರಂಥಗಳನ್ನು ಸ್ಪರ್ಧೆಗೆ ಪರಿಗಣಿಸುವುದಿಲ್ಲ. ಭಾಗವಹಿಸುತ್ತಿರುವ ಸ್ಪರ್ಧೆಯ ದತ್ತಿ ಹೆಸರನ್ನು ಪುಸ್ತಕದ ಮೊದಲ ಒಳಪುಟದಲ್ಲಿ ಸ್ಪಷ್ಟವಾಗಿ ನಮೂದಿಸಬೇಕು. ಸ್ಪರ್ಧೆಯಲ್ಲಿ ಭಾಗವಹಿಸುವವರು ತಮ್ಮ ಹೆಸರು, ವಿಳಾಸ, ದೂರವಾಣಿ ಸಂಖ್ಯೆಯನ್ನು ಕಡ್ಡಾಯವಾಗಿ ನಮೂದಿಸಬೇಕು. ಹೆಚ್ಚಿನ ಮಾಹಿತಿಗೆ ದೂ.26612991, 26623584 ಸಂಪರ್ಕಿಸಬಹುದು.

ಕಾಟರಮ್ಮ ದೇವಿ ಜಾತ್ರೆ ಮಹೋತ್ಸವ
ಸೂಲಿಬೆಲೆ:
ಇಲ್ಲಿಗೆ ಸಮೀಪದ ಕೆಂಪಾಪುರ ಹಾಗೂ ಕಂಬಳೀಪುರ ಜೋಡಿ ಗ್ರಾಮದಲ್ಲಿ ಪ್ರತಿಷ್ಠಾಪನೆ ಮಾಡಿರುವ ಕಾಟರಮ್ಮ ದೇವಿಯ 13ನೇ ಜಾತ್ರೆ ಮಹೋತ್ಸವ ಅದ್ಧೂರಿಯಾಗಿ ನಡೆಯಿತು. ಗ್ರಾಮ ದೇವತೆ ಕಾಟರಮ್ಮ ಸೇರಿದಂತೆ ಮುನೇಶ್ವರಸ್ವಾಮಿ, ವೇಣುಗೋಪಾಲಸ್ವಾಮಿ, ಅಣ್ಣಮ್ಮ, ಎಲ್ಲಮ್ಮ, ಮುತ್ಯಾಲಮ್ಮ,ದೊಡ್ಡಮ್ಮ, ಚೌಡೇಶ್ವರಿ ದೇವಿ, ಸಲ್ಲಾಪುರಮ್ಮ, ಪಟಾಲಮ್ಮ, ಮಾರಮ್ಮ ದೇವಿ ಮೆರವಣಿಗೆ ಉತ್ಸವ ನಡೆಯಿತು. ಇದೇ ಸಂದರ್ಭದಲ್ಲಿ ಕರಗ ಮತ್ತು ತಂಬಿಟ್ಟು ದೀಪೋತ್ಸವ ನಡೆಯಿತು. ಕಾಟರಮ್ಮ ದೇವಿಗೆ ವಿಶೇಷ ಅಲಂಕಾರ ಮಾಡಿದ್ದು ಗಮನ ಸೆಳೆಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.